'ಹೊಂದಾಣಿಕೆಯ ಸಮಸ್ಯೆ ಇದೆ': ಇಸ್ಲಾಂಗೆ ಯೂರೋಪ್ ನಲ್ಲಿ ಜಾಗವಿಲ್ಲ: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

ಇಸ್ಲಾಮಿಕ್ ಸಂಸ್ಕೃತಿಗೂ ಮತ್ತು ಯೂರೋಪಿಯನ್ ನಾಗರೀಕತೆಗೂ ಹೊಂದಾಣಿಕೆಯ ಸಮಸ್ಯೆ ಇದ್ದು, ಇಸ್ಲಾಂಗೆ ಯುರೋಪ್ ನಲ್ಲಿ ಜಾಗವಿಲ್ಲ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೇಳಿದ್ದಾರೆ.
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ
Updated on

ನವದೆಹಲಿ: ಇಸ್ಲಾಮಿಕ್ ಸಂಸ್ಕೃತಿಗೂ ಮತ್ತು ಯೂರೋಪಿಯನ್ ನಾಗರೀಕತೆಗೂ ಹೊಂದಾಣಿಕೆಯ ಸಮಸ್ಯೆ ಇದ್ದು, ಇಸ್ಲಾಂಗೆ ಯುರೋಪ್ ನಲ್ಲಿ ಜಾಗವಿಲ್ಲ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೇಳಿದ್ದಾರೆ.

ಬ್ರದರ್ಸ್ ಆಫ್ ಇಟಲಿ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, 'ಇಸ್ಲಾಮಿಕ್ ಸಂಸ್ಕೃತಿಯ ಕೆಲವು ವ್ಯಾಖ್ಯಾನಗಳು ಮತ್ತು ನಮ್ಮ ನಾಗರಿಕತೆಯ ಹಕ್ಕುಗಳು ಹಾಗೂ ಮೌಲ್ಯಗಳ ನಡುವೆ ಹೊಂದಾಣಿಕೆಯ ಸಮಸ್ಯೆ ಇದೆ. ಇಟಲಿಯಲ್ಲಿನ ಹೆಚ್ಚಿನ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರಗಳು ಸೌದಿ ಅರೇಬಿಯಾದಿಂದ ಹಣಕಾಸು ಪಡೆಯುತ್ತವೆ ಎಂಬುದು ನನಗೆ ಗೊತ್ತಿದೆ. ಸಾಮಾನ್ಯವಾಗಿ ಇಸ್ಲಾಮಿಕ್ ಕಾನೂನು ಎಂದು ಕರೆಯಲ್ಪಡುವ ಷರಿಯಾ ಕಾನೂನು, ಇಸ್ಲಾಂ ಧರ್ಮದ ಮೂಲಭೂತ ಧಾರ್ಮಿಕ ಪಠ್ಯಗಳಾದ ಕುರಾನ್ ಮತ್ತು ಹದೀಸ್‌ನಲ್ಲಿರುವ ನಿಬಂಧನೆಗಳ ಪ್ರಕಾರ ಶಿಕ್ಷೆಗಳನ್ನು ವಿಧಿಸತ್ತದೆ ಎಂದು ಹೇಳಿದರು.

ಅಂತೆಯೇ ಧರ್ಮದ ಕುರಿತ ಟೀಕೆ ಹಾಗೂ ಸಲಿಂಗಕಾಮಗಳ ಕುರಿತು ಸೌದಿ ಅರೇಬಿಯಾದ ಕಠಿಣ ಷರಿಯಾ ಕಾನೂನನ್ನು ಟೀಕಿಸಿದ ಅವರು, “ಷರಿಯಾದ ಪ್ರಕಾರ ವಿವಾಹೇತರ ಸಂಬಂಧ, ಧರ್ಮಭ್ರಷ್ಟತೆ ಮತ್ತು ಸಲಿಂಗಕಾಮಕ್ಕೆ ಮರಣದಂಡನೆ ವಿಧಿಸಲಾಗುತ್ತದೆ. ಈ ವಿಚಾರವನ್ನು ಇಂದು ನಾವು ವಿಮರ್ಶಿಸಬೇಕು. ಅಂದರೆ ಇಸ್ಲಾಂ ಧರ್ಮವನ್ನು ಜನರಲೈಸ್‌ ಮಾಡುವುದು ಎಂದರ್ಥವಲ್ಲ. ಈ ಮೂಲಕ ಯುರೋಪ್‌ನ ನಾಗರಿಕತೆಯ ಮೌಲ್ಯಗಳಿಗೂ ಇಸ್ಲಾಮ್‌ನ ಮೌಲ್ಯಗಳಿಗೂ ಬಹುದೂರವಿದೆ ಎಂಬುದನ್ನು ನಾವು ತಿಳಿಯಬೇಕು” ಎಂದು ಅವರು ಹೇಳಿದರು.

ಇದೇ ವೇಳೆ ಮೆಲೋನಿ, ಮೆಡಿಟರೇನಿಯನ್ ಸಮುದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ರಕ್ಷನಾ ಹಡಗುಗಳ ಚಟುವಟಿಕೆಗಳನ್ನು ಕಡಿತಗೊಳಿಸುವ ಪ್ರಯತ್ನಗಳಿಗೆ ಟೀಕೆ ಎದುರಿಸಿದ್ದಾರೆ.

“ನಾವು ಈ ಸಮಸ್ಯೆಯನ್ನು ನಿಭಾಯಿಸದಿದ್ದರೆ, ವಲಸೆ ಸಂಖ್ಯೆ ಬೆಳೆಯುತ್ತದೆ. ನಮ್ಮ ಸಹಾಯದ ಅಗತ್ಯವಿರುವವರಿಗೆ ಸಹಾಯ ಮಾಡುವ ನಮ್ಮ ಸಾಮರ್ಥ್ಯವನ್ನು ಇದು ಕುಂಠಿತಗೊಳಿಸುತ್ತದೆ. ಆ ಪ್ರತಿಬಂಧಕವನ್ನು ಮೀರುವುದು, ವಿಭಿನ್ನವಾಗಿ ಕೆಲಸ ಮಾಡುವುದು ಸಾಧ್ಯವಾಗಬೇಕು. ನಾನು ಮತ್ತು ಜಾರ್ಜಿಯಾ ಹಾಗೆ ಮಾಡಲು ಸಿದ್ಧರಿದ್ದೇವೆ” ಎಂದು ಸುನಕ್‌ ಹೇಳಿದ್ದಾರೆ. ಉಭಯ ನಾಯಕರೂ ಆಲ್ಬೇನಿಯನ್ ಪ್ರಧಾನಿ ಎಡಿ ರಾಮ ಅವರನ್ನು ಭೇಟಿಯಾಗಿ ವಲಸೆಯ ಬಗ್ಗೆ ಚರ್ಚಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com