32ನೇ ವರ್ಷಕ್ಕೆ ಇಹಲೋಕ ತ್ಯಜಿಸಿದ ಜನಪ್ರಿಯ ಸ್ಟಾಂಡಪ್ ಕಾಮಿಡಿಯನ್ ನೀಲ್ ನಂದ!

ಲಾಸ್‌ ಏಂಜಲ್ಸ್‌ ಮೂಲದ ಜನಪ್ರಿಯ ಸ್ಟಾಂಡಪ್‌ ಕಾಮಿಡಿಯನ್‌ ನೀಲ್‌ ನಂದ ನಿಧನರಾಗಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು.
ನೀಲ್ ನಂದ
ನೀಲ್ ನಂದ
Updated on

ಲಾಸ್‌ ಏಂಜಲೀಸ್: ಜನಪ್ರಿಯ ಸ್ಟಾಂಡಪ್‌ ಕಾಮಿಡಿಯನ್‌ ನೀಲ್‌ ನಂದ ನಿಧನರಾಗಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು. ಜಿಮ್ಮಿ ಕಿಮೆಲ್‌ ಲೈವ್‌ ಮತ್ತು ಕಾಮಿಡಿ ಸೆಂಟ್ರಲ್‌ನ ಅದಾಮ್‌ ಡಿವೈನ್‌ ಹೌಸ್‌ ಪಾರ್ಟಿ ಮುಂತಾದ ಕಾರ್ಯಕ್ರಮಗಳಿಂದ  ಜನಪ್ರಿಯತೆ ಪಡೆದಿದ್ದರು.

ನೀಲ್ ನಂದಾ ನಿಧನರಾಗಿರುವ ಬಗ್ಗೆ ಅವರ ಮ್ಯಾನೇಜರ್ ಗ್ರೆಗ್ ವೈಸ್ ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ. ನೀಲ್ ನಂದಾ ನಿಧನರಾಗಿರುವ ಕಾರಣ ಬಗ್ಗೆ ಇನ್ನೂ ಬಹಿರಂಗವಾಗಿಲ್ಲ. ಅವರ ನಿಧನದ ನಂತರ, ಹಲವಾರು ಖ್ಯಾತ ಹಾಸ್ಯಗಾರರು ಪೋಸ್ಟ್‌ ಮಾಡಿ ಸಂತಾಪ ಸೂಚಿಸುತ್ತಿದ್ದಾರೆ. ಅವರು ಜಾರ್ಜಿಯಾದ ಅಟ್ಲಾಂಟಾದಲ್ಲಿ ಭಾರತೀಯ ವಲಸಿಗ ದಂಪತಿಗೆ ಜನಿಸಿದ್ದರು.

ನೀಲ್‌ ಅವರಿಗೆ ವಿವಿಧ ಹಾಸ್ಯ ಕ್ಲಬ್‌ಗಳು ಮತ್ತು ಅವರ ಸಹೋದ್ಯೋಗಿಗಳು, ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ನೀಲ್ ನಂದಾ ಇತ್ತೀಚೆಗಷ್ಟೇ ತಮ್ಮ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

ನೀಲ್ ನಂದಾ ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿ ʻʻಈ ಸುದ್ದಿ ಕೇಳಿ ಆಘಾತವಾಯ್ತು. ಪಾಸಿಟಿವ್‌ ಶಕ್ತಿ ಅವರಾಗಿದ್ದರು. ಹಾಸ್ಯಕ್ಕೆ ಒಂದು ದೊಡ್ಡ ನಷ್ಟವಾಗಿದೆ ಬರೆದುಕೊಂಡಿದ್ದಾರೆ. ಲಾಸ್ ಏಂಜಲೀಸ್ ನಗರದಲ್ಲಿ ಟಾಪ್ 10 ಸ್ಟ್ಯಾಂಡ್-ಅಪ್ ಕಾಮಿಡಿ ಶೋಗಳಲ್ಲಿ ನೀಲ್ ನಂದಾ ಶೋ ಕೂಡ ಹೆಸರುವಾಸಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com