ಟರ್ಕಿ: ಅವಶೇಷಗಳಡಿ ಸಿಲುಕಿದ್ದ 8 ವರ್ಷದ ಬಾಲಕಿಯನ್ನು ರಕ್ಷಿಸಿದ ಎನ್ ಡಿಆರ್ ಎಫ್

ಭೂಕಂಪ ಪೀಡಿತ ಟರ್ಕಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್)ಯ ತಂಡ ಶುಕ್ರವಾರ ಗಾಜಿಯಾಂಟೆಪ್‌ನಲ್ಲಿ ಅವಶೇಷಗಳಡಿ ಸಿಲುಕಿದ್ದ 8 ವರ್ಷದ...
ಬಾಲಕಿಯನ್ನು ರಕ್ಷಿಸಿದ ಎನ್ ಡಿಆರ್ ಎಫ್
ಬಾಲಕಿಯನ್ನು ರಕ್ಷಿಸಿದ ಎನ್ ಡಿಆರ್ ಎಫ್
Updated on

ಗಾಜಿಯಾಂಟೆಪ್‌​: ಭೂಕಂಪ ಪೀಡಿತ ಟರ್ಕಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್)ಯ ತಂಡ ಶುಕ್ರವಾರ ಗಾಜಿಯಾಂಟೆಪ್‌ನಲ್ಲಿ ಅವಶೇಷಗಳಡಿ ಸಿಲುಕಿದ್ದ 8 ವರ್ಷದ ಬಾಲಕಿಯನ್ನು ಯಶಸ್ವಿಯಾಗಿ ರಕ್ಷಿಸಿದೆ.

ಕುಸಿದ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 8 ವರ್ಷದ ಬಾಲಕಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ಅಧಿಕೃತ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ.

ಟರ್ಕಿ ಸೇನೆಯ ಸಿಬ್ಬಂದಿಯೊಂದಿಗೆ ಗಾಜಿಯಾಂಟೆಪ್ ಪ್ರಾಂತ್ಯದ ನೂರ್ಡಗಿ ಪಟ್ಟಣದಲ್ಲಿ ಇಂದು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದು ಎನ್‌ಡಿಆರ್‌ಎಫ್ ವಕ್ತಾರರು ಹೇಳಿದ್ದಾರೆ.

ಎನ್‌ಡಿಆರ್‌ಎಫ್ ಸಿಬ್ಬಂದಿ ಗುರುವಾರ ಅದೇ ಪ್ರದೇಶದಲ್ಲಿ 6 ವರ್ಷದ ಬಾಲಕಿಯನ್ನು ರಕ್ಷಿಸಿದ್ದರು.

"ಎನ್ ಡಿಆರ್ ಎಫ್ ತಂಡ ಎರಡು ಜೀವಗಳನ್ನು ಉಳಿಸಿದೆ ಮತ್ತು ಇದುವರೆಗೆ 13 ಶವಗಳನ್ನು ಅವಶೇಷಗಳಿಂದ ಹೊರತೆಗೆದಿದೆ. ಟರ್ಕಿಯ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಫೆಬ್ರವರಿ 7 ರಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ" ಎಂದು ವಕ್ತಾರರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಗಾಗಿ ಎನ್ ಡಿಆರ್ ಎಫ್ ಮೂರು ತಂಡಗಳನ್ನು ಟರ್ಕಿಗೆ ಕಳುಹಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com