ಮುಂಬೈ ದಾಳಿಕೋರರು ಪಾಕ್‌ನಲ್ಲಿ ಓಡಾಡಿಕೊಂಡಿದ್ದಾರೆ ಎಂದಿದ್ದ ಜಾವೇದ್ ಅಖ್ತರ್ ವಿರುದ್ಧ ಪಾಕಿಸ್ತಾನದಲ್ಲಿ ಟೀಕೆ

'ಮುಂಬೈ ಮೇಲೆ ದಾಳಿ ನಡೆಸಿದವರು (26/11) ಪಾಕಿಸ್ತಾನದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ’ ಎಂಬ ಕವಿ, ಗೀತರಚನೆಕಾರ ಜಾವೆದ್‌ ಅಖ್ತರ್‌ ನೀಡಿದ ಹೇಳಿಕೆಯು ಟ್ವಿಟರ್‌ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಅಸಂಖ್ಯಾತ ಪಾಕಿಸ್ತಾನಿ ಸೆಲೆಬ್ರಿಟಿಗಳು ಅವರ ಹೇಳಿಕೆಯನ್ನು ಖಂಡಿಸಿ ಮಾತನಾಡಿದ್ದಾರೆ.
ಜಾವೇದ್ ಅಖ್ತರ್
ಜಾವೇದ್ ಅಖ್ತರ್
Updated on

ಲಾಹೋರ್: 'ಮುಂಬೈ ಮೇಲೆ ದಾಳಿ ನಡೆಸಿದವರು (26/11) ಪಾಕಿಸ್ತಾನದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ’ ಎಂಬ ಕವಿ, ಗೀತರಚನೆಕಾರ ಜಾವೆದ್‌ ಅಖ್ತರ್‌ ನೀಡಿದ ಹೇಳಿಕೆಯು ಟ್ವಿಟರ್‌ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಅಸಂಖ್ಯಾತ ಪಾಕಿಸ್ತಾನಿ ಸೆಲೆಬ್ರಿಟಿಗಳು ಅವರ ಹೇಳಿಕೆಯನ್ನು ಖಂಡಿಸಿ ಮಾತನಾಡಿದ್ದಾರೆ.

ಲಾಹೋರ್‌ನಲ್ಲಿ ನಡೆದ ಉರ್ದುವಿನ ಪ್ರಸಿದ್ಧ ಕವಿ ಫೈಜ್‌ ಅಹಮದ್‌ ಫೈಜ್‌ ಅವರ ಸ್ಮರಣಾರ್ಥ ಭಾನುವಾರ ಇಲ್ಲಿ ಆಯೋಜಿಸಿದ್ದ ಫೈಜ್‌ ಉತ್ಸವದ ಕೊನೆಯ ದಿನದ ಕಾರ್ಯಕ್ರಮದ ವೇಳೆ ಅಖ್ತರ್ ಮಾತನಾಡಿದ್ದರು. ವಿವಿಧ ಸೆಲೆಬ್ರಿಟಿಗಳು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದು, ಸಮಾರಂಭದಲ್ಲಿ ಅಖ್ತರ್ ಹೇಳಿಕೆಗೆ ಕಿಡಿಕಾರಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಆದಾಗ್ಯೂ, ಭಾರತೀಯ ಕವಿಯ ಭಾಷಣದ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 26/11 ಮುಂಬೈ ದಾಳಿಯ ದಾಳಿಕೋರರಿಗೆ ದೇಶದಲ್ಲಿ "ಮುಕ್ತವಾಗಿ ತಿರುಗಾಡಲು" ಪಾಕಿಸ್ತಾನ ಅವಕಾಶ ಮಾಡಿಕೊಟ್ಟಿದೆ ಎಂದು ಅಖ್ತರ್ ಆರೋಪಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಫೈಜ್ ಉತ್ಸವದಲ್ಲಿ ಮಾತನಾಡಿದ ಅಖ್ತರ್, 'ನಾನು ಮುಂಬೈ ಮೂಲದವನು ಮತ್ತು ನನ್ನ ನಗರದ ಮೇಲಿನ ದಾಳಿಯನ್ನು ನಾನು ನೋಡಿದ್ದೇನೆ. ದಾಳಿಕೋರರು ನಾರ್ವೆ ಅಥವಾ ಈಜಿಪ್ಟ್‌ನಿಂದ ಬಂದವರಲ್ಲ. ಆ ದಾಳಿಕೋರರು ಇಂದಿಗೂ ನಿಮ್ಮ ದೇಶದಾದ್ಯಂತ ಸುತ್ತಾಡುತ್ತಿದ್ದಾರೆ. ಆದ್ಧರಿಂದ, ಭಾರತೀಯರು ತಮ್ಮ ಹೃದಯದಲ್ಲಿ ವೇದನೆ ಇಟ್ಟುಕೊಂಡಿದ್ದರೆ, ನೀವು ಬೇಸರ ಮಾಡಿಕೊಳ್ಳಬಾರದು' ಎಂದು ಹೇಳಿದ್ದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ, ಹಲವಾರು ಪಾಕಿಸ್ತಾನಿ ಸೆಲೆಬ್ರಿಟಿಗಳು ಈ ಆರೋಪದ ಬಗ್ಗೆ ಮಾತನಾಡಿದರು ಮತ್ತು ಹೇಳಿಕೆಯನ್ನು ಖಂಡಿಸಿದರು.

ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ ಮತ್ತು ನಟ ಅರ್ಸಲನ್ ನಸೀರ್ ಈ ಹೇಳಿಕೆಯನ್ನು ಖಂಡಿಸಿದ್ದು, 'ಪಾಕಿಸ್ತಾನದವರೇ ತುಂಬಿದ್ದ ಸಭಾಂಗಣದಲ್ಲಿ ಕುಳಿತುಕೊಂಡು ನೀವು ಹೇಗೆ ಆ ರೀತಿ ಹೇಳಿದ್ದೀರಿ?. ಬಹುಶಃ ಭಾರತ ಈಗ ಅವರ ಮೇಲೆ 'ಜಾನ್‌ಬಾಜ್ ಲಿಖಾರಿ (ನಿರ್ಭೀತ ಬರಹಗಾರ) ಎಂಬ ಶೀರ್ಷಿಕೆಯ ಚಲನಚಿತ್ರವನ್ನು ನಿರ್ಮಿಸಬೇಕು' ಎಂದಿದ್ದಾರೆ.

ಟ್ವಿಟರ್ ಬಳಕೆದಾರರೊಬ್ಬರು, 'ಫೈಜ್ ಉತ್ಸವವನ್ನು ಅವಮಾನಿಸಿದ್ದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು? ಕಾರ್ಯಕ್ರಮ ಆಯೋಜಿಸಿದ್ದವರನ್ನೋ? ಗೌರವಾನ್ವಿತ ಅತಿಥಿ ಅಥವಾ ಪ್ರೇಕ್ಷಕರನ್ನೋ? ಅಖ್ತರ್ ಅವನ್ನು ಶ್ಲಾಘಿಸಿದ ಪ್ರೇಕ್ಷಕರಿಂದ ನಾನು ನಿಜವಾಗಿಯೂ ನಿರಾಶೆಗೊಂಡಿದ್ದೇನೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನಾಯಕಿ ಶರ್ಮಿಳಾ ಫರೂಕಿ ಅವರು ಅಖ್ತರ್ ಅವರ 'ವಿವಾದಾತ್ಮಕ' ಹೇಳಿಕೆಗಳಿಗಾಗಿ ಅವರನ್ನು ಟೀಕಿಸಿದರು. ಗೀತರಚನೆಕಾರರು ಈ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com