ಮಾಸ್ಕೋ: ಪೂರ್ವ ಉಕ್ರೇನ್‌ನಲ್ಲಿ ಕ್ಷಿಪಣಿ ದಾಳಿಗೆ 60 ರಷ್ಯಾ ಸೈನಿಕರು ಸಾವು

ರಷ್ಯಾ- ಉಕ್ರೇನ್ ನಡುವಣ ಯುದ್ಧ ಮುಂದುವರೆದಿದ್ದು, ಅಮೆರಿಕ ಒದಗಿಸಿದ  ಹಿಮಾರ್ಸ್ ಸಿಸ್ಟಮ್‌  ಬಳಸಿಕೊಂಡು ಕೈವ್ ಪಡೆ ಪೂರ್ವ ಉಕ್ರೇನ್‌ನಲ್ಲಿ ನಡೆಸಿದ ಕ್ಷಿಪಣಿ ದಾಳಿಗೆ ಕನಿಷ್ಠ 60 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.
ಉಕ್ರೇನ್ ನಲ್ಲಿ ರಷ್ಯಾ ರಾಕೆಟ್ ದಾಳಿ ನಡೆದ ಸ್ಥಳದ ಚಿತ್ರ
ಉಕ್ರೇನ್ ನಲ್ಲಿ ರಷ್ಯಾ ರಾಕೆಟ್ ದಾಳಿ ನಡೆದ ಸ್ಥಳದ ಚಿತ್ರ

ಮಾಸ್ಕೋ: ರಷ್ಯಾ- ಉಕ್ರೇನ್ ನಡುವಣ ಯುದ್ಧ ಮುಂದುವರೆದಿದ್ದು, ಅಮೆರಿಕ ಒದಗಿಸಿದ  ಹಿಮಾರ್ಸ್ ಸಿಸ್ಟಮ್‌ ಬಳಸಿಕೊಂಡು ಕೈವ್ ಪಡೆ ಪೂರ್ವ ಉಕ್ರೇನ್‌ನಲ್ಲಿ ನಡೆಸಿದ ಕ್ಷಿಪಣಿ ದಾಳಿಗೆ ಕನಿಷ್ಠ 60 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.

ಮಾಸ್ಕೋ-ನಿಯಂತ್ರಿತ ಭಾಗದಲ್ಲಿರುವ ಮಕಿವ್ಕಾ ಪಟ್ಟಣದಲ್ಲಿ ಕ್ಷಿಪಣಿ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ  ಹೆಚ್ಚಿದೆ ಎಂದು ಉಕ್ರೇನ್ ಮಿಲಿಟರಿ ಹೇಳಿದೆ.

ತಾತ್ಕಾಲಿಕ ನಿಯೋಜನೆಯ ಸ್ಥಳದಲ್ಲಿ ಹೆಚ್ಚಿನ ಸ್ಫೋಟಕ ಸಿಡಿತಲೆಯೊಂದಿಗೆ ನಾಲ್ಕು ಕ್ಷಿಪಣಿಗಳು ದಾಳಿ ನಡೆಸಿದ ಪರಿಣಾಮ  63 ರಷ್ಯಾದ ಸೈನಿಕರು ಮೃತಪಟ್ಟಿದ್ದು, ಮೃತ ಸೈನಿಕರ ಸಂಬಂಧಿಕರಿಗೆ ಅಗತ್ಯವಿರುವ ಎಲ್ಲಾ ನೆರವು ಮತ್ತು ಬೆಂಬಲವನ್ನು ಒದಗಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ದಾಳಿ ಯಾವಾಗ ನಡೆಯಿತು ಎಂಬುದರ ಬಗ್ಗೆ ರಕ್ಷಣಾ ಸಚಿವಾಲಯ ಹೇಳಿಲ್ಲ, ಆದರೆ ಹೊಸ ವರ್ಷದಲ್ಲಿ ರಷ್ಯಾದ ಪಡೆಗಳು ಆರ್ಭಟಿಸುತ್ತಿದ್ದಂತೆಯೇ ಉಕ್ರೇನಿಯನ್ ಪಡೆಗಳು ದಾಳಿ ನಡೆಸಿವೆ ಎನ್ನಲಾಗಿದೆ. 

ಈ ಹೇಳಿಕೆಯು ಉಕ್ರೇನ್‌ನಲ್ಲಿ ರಷ್ಯಾಕ್ಕೆ ಆದ ನಷ್ಟದ ಅಪರೂಪದ ಪ್ರಕಟಣೆಯಾಗಿದ್ದು, ಉಕ್ರೇನ್ ಯುದ್ಧ ಭೂಮಿಯಲ್ಲಿ ರಷ್ಯಾಕ್ಕೆ ನಷ್ಟವಾಗಿದೆ ಎಂದು ಕ್ರೆಮ್ಲಿನ್ ವಿಮರ್ಶಕರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com