ನೇಪಾಳದಲ್ಲಿ 6 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ ಹೆಲಿಕಾಪ್ಟರ್ ನಾಪತ್ತೆ

ನೇಪಾಳದಲ್ಲಿ ಮತ್ತೊಂದು ಹೆಲಿಕಾಪ್ಟರ್ ದುರಂತ ಸಂಭವಿಸಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, 6 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ ಹೆಲಿಕಾಪ್ಟರ್ ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ನೇಪಾಳ ಹೆಲಿಕಾಪ್ಟರ್ ನಾಪತ್ತೆ
ನೇಪಾಳ ಹೆಲಿಕಾಪ್ಟರ್ ನಾಪತ್ತೆ

ಕಠ್ಮಂಡು: ನೇಪಾಳದಲ್ಲಿ ಮತ್ತೊಂದು ಹೆಲಿಕಾಪ್ಟರ್ ದುರಂತ ಸಂಭವಿಸಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, 6 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ ಹೆಲಿಕಾಪ್ಟರ್ ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಬೆಳಗ್ಗೆ 10ಕ್ಕೆ ಕಠ್ಮಂಡುವಿನಿಂದ ಹೊರಟ ಹೆಲಿಕಾಪ್ಟರ್‌ ಕೇವಲ 12 ನಿಮಿಷ ಹಾರಾಟ ನಡೆಸಿದ ನಂತರ ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಳೆದುಕೊಂಡಿದ್ದು, ಕರೆ ಸಂಕೇತ 9ಎನ್‌ಎಂವಿಯಿಂದ ಯಾವುದೇ ಸಂಕೇತ ನಂತರ ಸಿಗಲಿಲ್ಲ ಎಂದು ಮಾಹಿತಿ ಅಧಿಕಾರಿ ಗ್ಯಾನೇಂದ್ರ ಭುಲ್ ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ನಾಪತ್ತೆಯಾಗಿರುವ ಐದು ಜನ ಮೆಕ್ಸಿಕನ್ನರು ಎಂದು ರಾಯಿಟರ್ಸ್‌ ವರದಿ ಮಾಡಿದ್ದು, ಅಲ್ಲಿನ ಆಡಳಿತವು ಶೋಧ ಕಾರ್ಯಾಚರಣೆ ಆರಂಭಿಸಿದೆ.

ಐವರು ವಿದೇಶಿ ಪ್ರಜೆಗಳು ಸೇರಿದಂತೆ ಆರು ಜನರನ್ನು ಹೊತ್ತ ಹೆಲಿಕಾಪ್ಟರ್ ಇಂದು ಸೋಲುಖುಂಬುವಿನಿಂದ ನೇಪಾಳದ ಕಠ್ಮಂಡುವಿಗೆ ಪ್ರಯಾಣಿಸುತ್ತಿತ್ತು. ಬೆಳಗ್ಗೆ ಸುಮಾರು 10:15 am ಕ್ಕೆ ನಿಯಂತ್ರಣ ಗೋಪುರದ ಸಂಪರ್ಕವನ್ನು ಕಳೆದುಕೊಂಡಿತು. ಸೋಲುಖುಂಬುವಿನಲ್ಲಿ ಸುರ್ಕಿಯಿಂದ ಹೊರಟ ಮನಂಗ್ ಏರ್ ಹೆಲಿಕಾಪ್ಟರ್ 15 ನಿಮಿಷಗಳ ನಂತರ ಸಂಪರ್ಕವಿಲ್ಲದೆ ಹೋಯಿತು.ಕ್ಯಾಪ್ಟನ್ ಚೆಟ್ ಗುರುಂಗ್ ಅವರು ಪೈಲಟ್ ಮಾಡಿದ ಹೆಲಿಕಾಪ್ಟರ್ ಅನ್ನು ಪತ್ತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com