ಮಣಿಪುರದ ವಿಷಯವಾಗಿ ಯುರೋಪ್ ಸಂಸತ್ ನಲ್ಲಿ ನಿರ್ಣಯ!

ಸ್ಟ್ರಾಸ್​ಬೌರ್ಗ್ ನ ಫ್ರೆಂಚ್ ಟೌನ್ ನಲ್ಲಿರುವ ಯುರೋಪಿಯನ್ ಸಂಸತ್ ಮಣಿಪುರದ ವಿಷಯವಾಗಿ ನಿರ್ಣಯ ಕೈಗೊಂಡಿದ್ದು, ಹಿಂಸಾಚಾರವನ್ನು ತಡೆದು ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸುವಂತೆ ಭಾರತ ಸರ್ಕಾರಕ್ಕೆ ಕರೆ ನೀಡಿದೆ.
ಯುರೋಪ್ ಸಂಸತ್
ಯುರೋಪ್ ಸಂಸತ್

ನವದೆಹಲಿ: ಸ್ಟ್ರಾಸ್​ಬೌರ್ಗ್ ನ ಫ್ರೆಂಚ್ ಟೌನ್ ನಲ್ಲಿರುವ ಯುರೋಪಿಯನ್ ಸಂಸತ್ ಮಣಿಪುರದ ವಿಷಯವಾಗಿ ನಿರ್ಣಯ ಕೈಗೊಂಡಿದ್ದು, ಹಿಂಸಾಚಾರವನ್ನು ತಡೆದು ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸುವಂತೆ ಭಾರತ ಸರ್ಕಾರಕ್ಕೆ ಕರೆ ನೀಡಿದೆ.

ಚರ್ಚೆಯ ನಂತರ ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕೂ ಮುನ್ನ ಮಣಿಪುರದ ವಿಷಯವಾಗಿ ಮಾತನಾಡಿದ್ದ ಭಾರತದ ವಿದೇಶಾಂಗ ಕಾರ್ಯದರ್ಶಿ ಮಣಿಪುರದ ವಿಷಯ ಭಾರತದ ಆಂತರಿಕ ವಿಷಯವಾಗಿದ್ದು, ಮಧ್ಯಪ್ರವೇಶದ ಅಗತ್ಯವಿಲ್ಲ ಎಂಬುದನ್ನು ಯುರೋಪಿಯನ್ ಸಂಸತ್ ಗೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟಿದ್ದಾಗಿ ಹೇಳಿದ್ದರು.

ಗಲಭೆಗಳು ಹೆಚ್ಚುವುದನ್ನು ತಡೆಗಟ್ಟಬೇಕು, ಮಣಿಪುರಕ್ಕೆ ಪತ್ರಕರ್ತರಿಗೆ, ಅಂತಾರಾಷ್ಟ್ರೀಯ ವೀಕ್ಷಕರಿಗೆ ಮುಕ್ತ ಪ್ರವೇಶ ಕಲ್ಪಿಸಬೇಕು, ಅಂತರ್ಜಾಲ ಸ್ಥಗಿತವನ್ನು ತೆಗೆಯಬೇಕೆಂದು ಯುರೋಪ್ ಸಂಸತ್ ತನ್ನ ನಿರ್ಣಯದ ಮೂಲಕ ಭಾರತ ಸರ್ಕಾರವನ್ನು ಕೇಳಿಕೊಂಡಿದೆ.

ಇದಷ್ಟೇ ಅಲ್ಲದೇ ಯುಎನ್ ನ ಸಾರ್ವತ್ರಿಕ ಯುರೋಪಿಯನ್ ಸಂಸತ್ ಸೇನಾಪಡೆಗಳ ವಿಶೇಷ ಕಾಯ್ದೆಯನ್ನು ರದ್ದುಗೊಳಿಸಬೇಕು ನಿಯತಕಾಲಿಕ ವಿಮರ್ಶೆ ಶಿಫಾರಸುಗಳ ಆಧಾರದಲ್ಲಿ ರದ್ದುಗೊಳಿಸಬೇಕೆಂದು ಸರ್ಕಾರಕ್ಕೆ ಇಪಿ ಸಲಹೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com