Viral Video: ನಾಯಿಯಂತೆ ಕಾಣಲು ಬರೊಬ್ಬರಿ 12 ಲಕ್ಷ ರೂ. ಖರ್ಚು ಮಾಡಿದ ಜಪಾನ್ ವ್ಯಕ್ತಿ

ಸಾಕು ಪ್ರಾಣಿಗಳಂದರೆ ಯಾರಿಗೆ ಇಷ್ಟವಿಲ್ಲ ಹೇಳಿ.. ತಮ್ಮ ಮುದ್ದು ಪ್ರಾಣಿಗಳಿಗಾಗಿ ಜನ ಏನೆಲ್ಲಾ ಮಾಡುತ್ತಾರೆ ಎಂದು ನಾವು ಸಾಕಷ್ಟು ನಿದರ್ಶನಗಳನ್ನು ನೋಡಿದ್ದೇವೆ. ಅವುಗಳ ಆಹಾರ ನಿರ್ವಹಣೆಗಾಗಿಯೇ ಜನ ಲಕ್ಷಾಂತರ ರೂ ವ್ಯಯಿಸುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ.
ನಾಯಿ ಧಿರಿಸು ಧರಿಸಿರುವ ಜಪಾನ್ ನ ಟೊಕೊ
ನಾಯಿ ಧಿರಿಸು ಧರಿಸಿರುವ ಜಪಾನ್ ನ ಟೊಕೊ

ಟೋಕಿಯೋ: ಸಾಕು ಪ್ರಾಣಿಗಳಂದರೆ ಯಾರಿಗೆ ಇಷ್ಟವಿಲ್ಲ ಹೇಳಿ.. ತಮ್ಮ ಮುದ್ದು ಪ್ರಾಣಿಗಳಿಗಾಗಿ ಜನ ಏನೆಲ್ಲಾ ಮಾಡುತ್ತಾರೆ ಎಂದು ನಾವು ಸಾಕಷ್ಟು ನಿದರ್ಶನಗಳನ್ನು ನೋಡಿದ್ದೇವೆ. ಅವುಗಳ ಆಹಾರ ನಿರ್ವಹಣೆಗಾಗಿಯೇ ಜನ ಲಕ್ಷಾಂತರ ರೂ ವ್ಯಯಿಸುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ.

ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಪ್ರೀತಿಯ ನಾಯಿಂತೆ ಕಾಣಲು ಬರೊಬ್ಬರಿ 12 ಲಕ್ಷ ರೂ ಖರ್ಚು ಮಾಡಿದ್ದಾನೆ. ಹೌದು.. ಜಪಾನ್​ನಲ್ಲಿ ನೆಲೆಸಿರುವ ಟೊಕೊ ಎಂಬ ವ್ಯಕ್ತಿ ತನ್ನಿಷ್ಟದ ಸಾಕು ನಾಯಿಯಂತೆ ಕಾಣಲು ಬರೊಬ್ಬರಿ 14 ಸಾವಿರ ಡಾಲರ್ ಅಂದರೆ ಸರಿಸುಮಾರು 12 ಲಕ್ಷ ರೂ ಖರ್ಚು ಮಾಡಿದ್ದಾನೆ. ತಾನು ನಾಯಿಯಂತೆ ಕಾಣಿಸಲು 12 ಲಕ್ಷ ಖರ್ಚು ಮಾಡಿ ಅಲ್ಟ್ರಾ ರಿಯಲಿಸ್ಟಿಕ್ ಡಾಗ್ ಕಾಸ್ಟ್ಯೂಮ್ ಸಿದ್ಧಪಡಿಸಿದ್ದಾರೆ. 

ಈ ಬಗ್ಗೆ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಟೊಕೊ ಎಂಬಾತನ ಈ ನಾಯಿ ಕಾಸ್ಟ್ಯೂಮ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಟೊಕೋ ಯಾವಾಗಲೂ ಒಂದೇ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ. ಈ ಬಟ್ಟೆಗಳಲ್ಲಿ ಈ ಮನುಷ್ಯ ಸೇಮ್​ ನಾಯಿಯಂತೆ ಕಾಣುತ್ತಾರೆ. ಇವರನ್ನು ನೋಡಿದರೆ ನಾಯಿಯಲ್ಲ ಮನುಷ್ಯ ಎಂದು ಯಾರೂ ನಂಬಲು ಸಾಧ್ಯವಾಗುವುದಿಲ್ಲ. ಅಷ್ಟರ ಮಟ್ಟಿಗೆ ಈ ನಾಯಿ ಕಸ್ಟ್ಯೂಮ್ ನೈಜವಾಗಿದೆ. 

ಟೊಕೊ ಪ್ರಕಾರ, ಅವರು ಬಾಲ್ಯದಿಂದಲೂ ಪ್ರಾಣಿಗಳಂತೆ ಬದುಕಲು ಬಯಸಿದ್ದರು. ಇವರಿಗೆ ನಾಯಿಗಳ ಮೇಲೆ ವಿಶೇಷ ಪ್ರೀತಿ ಇತ್ತು. ಹಾಗಾಗಿ ನಾವು ನಾಯಿಗಳಂತೆ ಬದುಕಬೇಕೆಂದು ಅವರು ಬಯಸಿದ್ದರು. ಅವರು ತಮ್ಮ ನೋಟವನ್ನು ಬದಲಾಯಿಸಲು ವಿಶೇಷ ಎಫೆಕ್ಟ್ಸ್ ಗಳ ವರ್ಕ್‌ಶಾಪ್ ಜೆಪ್ಪೆಟ್ ಅನ್ನು ಸಂಪರ್ಕಿಸಿದ್ದರು. ಅಲ್ಲಿ ಇವರಿಗೆ ನಾಯಿಯ ಅಲ್ಟ್ರಾ-ರಿಯಲಿಸ್ಟಿಕ್ ವೇಷಭೂಷಣ ದೊರೆತಿದೆ. ಟೊಕೋನ ವಿಚಿತ್ರ ಆಸೆ ಕೇಳಿದ ವಸ್ತ್ರ ವಿನ್ಯಾಸ ಸಂಸ್ಥೆ ಜೆಪೆಟ್ ಇದಕ್ಕಾಗಿ ಸುಮಾರು 14 ಸಾವಿರ ಡಾಲರ್ ಹಣ ಖರ್ಚಾಗುತ್ತದೆ ಎಂದು ಹೇಳಿದೆ. ಟೊಕೊಗೆ ಇದು ದುಬಾರಿಯೇ ಆದರೂ ತನ್ನ ಇಷ್ಟದ ನಾಯಿ ವೇಷಭೂಷಣಕ್ಕಾಗಿ ಆತ ಹಿಂದೆ ಮುಂದೆ ನೋಡಲಿಲ್ಲ. ಆ ದೊಡ್ಡ ಮೊತ್ತವನ್ನು ಪಾವತಿಸಿದ್ದಾನೆ. 

ಜೆಪೆಟ್ ಕೂಡ ಕೃತಕ ತುಪ್ಪಳವನ್ನು ಬಳಸಿ ನಾಯಿಯ ವೇಷಭೂಷಣವನ್ನು ಸೃಷ್ಟಿಸಿತು. ಈ ವಿಶೇಷ ವೇಷಭೂಷಣದಲ್ಲಿ ಸೂಕ್ಷ್ಮವಾದ ವಿವರಗಳನ್ನು ನಿಖರವಾಗಿ ರೂಪಿಸಲಾಯಿತು. 40 ದಿನಗಳ ನಂತರ ಟೊಕೊ ಅವರ ಕನಸಿನ ನಾಯಿ ಕಸ್ಟ್ಯೂಮ್ ಸಿದ್ಧವಾಯಿತು. ತಮ್ಮ ಕನಸಿನ ಧಿರಿಸನ್ನು ಧರಿಸಿದ ಟೊಕೋ ಕ್ಯಾಮೆರಾಗೆ ಪೋಸ್ ನೀಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. ಈ ಉಡುಪನ್ನು ಧರಿಸುವುದರಿಂದ ಈ ವ್ಯಕ್ತಿ ನಾಯಿಯಂತೆ ಕಾಣುತ್ತಾರೆ. ತಮಗೆ ಸಿಕ್ಕ ಯಶಸ್ಸಿನ ಖುಷಿಯಲ್ಲೇ ಟೊಕೋ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಸಹ ಪ್ರಾರಂಭಿಸಿದ್ದು, ಅಲ್ಲಿ ತಮ್ಮ ನಾಯಿ ಧಿರಿಸಿನ ವಿವಿಧ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ.

ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ, ವ್ಯಕ್ತಿ ನಾಯಿಯಂತೆ ನಡೆಯುವ ಹಲವಾರು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾನೆ. ಸಾವಿರಾರು ವೀಕ್ಷಣೆಗಳನ್ನು ಗಳಿಸಿರುವ ಈ ವೀಡಿಯೊಗಳಲ್ಲಿ, ಈ ಟೊಕೋ ನಾಯಿ ಧಿರಿಸು ಧರಿಸಿ ಹುಲ್ಲುಹಾಸಿನ ಮೇಲೆ ಕುಣಿದು ಕುಪ್ಪಳಿಸುವುದು, ನೆಲದ ಮೇಲೆ ಉರುಳುವುದು ಮತ್ತು ನಾಯಿಯಂತೆ ಆಟವಾಡುವುದನ್ನು ಕಾಣಬಹುದು. ಅಲ್ಲದೆ ಟೊಕೋ ಇದೇ ನಾಯಿ ಧಿರಿಸಿನಲ್ಲಿ ತಮ್ಮ ಮೊದಲ ಸಾರ್ವಜನಿಕ ನಡಿಗೆಯನ್ನು ಕೂಡ ಮಾಡಿದ್ದು, ಜನರು ತುಂಬಿ ತುಳುಕು ರಸ್ತೆಯಲ್ಲಿ ನಾಯಿಯಂತೆ ನಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವೀಡಿಯೊ ಯೂಟ್ಯೂಬ್‌ನಲ್ಲಿ ಇಲ್ಲಿಯವರೆಗೆ ಸುಮಾರು 3 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಟೊಕೋ ನಾಯಿ ಧಿರಿಸಿಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೀದಿಯಲ್ಲಿ ಹೋಗುತ್ತಿದ್ದಾಗ ಹಲವು ನಾಯಿಗಳು ಕೂಡ ಇದು ನಿಜವಾದ ನಾಯಿಯೇನೋ ಎಂಬಂತೆ ಹತ್ತಿರ ಬಂದು ಆಟವಾಡಿವೆ. ಇದು ಟೊಕೋನ ಅವಿಸ್ಮರಣೀಯ ಕ್ಷಣವಂತೆ.

ಟೊಕೋನ ವಿಶಿಷ್ಠ ಧಿರಿಸು ತಯಾರಿಸಿದ ಜೆಪ್ಪೆಟ್ ಸಂಸ್ಥೆ ಈ ಬಗ್ಗೆ ಮಾತನಾಡಿದ್ದು, "ಕೋಲಿ ನಾಯಿಯ ಮಾದರಿಯಲ್ಲಿ, ಇದು ನಾಲ್ಕು ಕಾಲುಗಳ ಮೇಲೆ ನಡೆಯುವ ನಿಜವಾದ ನಾಯಿಯ ನೋಟವನ್ನು ಪುನರುತ್ಪಾದಿಸುತ್ತದೆ. ಮೊದಲೇ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಟೊಕೊ ಅವರು ಬಾಲ್ಯದಿಂದಲೂ ಪ್ರಾಣಿಯಾಗುವ ಅಸ್ಪಷ್ಟ ಕನಸನ್ನು ಹೊಂದಿದ್ದರು. ನಾವು ಆ ಕನಸನ್ನು ಈಡೇರಿಸಿದೆವು. ಟೊಕೊ ತಳಿ ಮತ್ತು ಮನುಷ್ಯರ ನಡುವಿನ ನಗಣ್ಯ ಗಾತ್ರದ ವ್ಯತ್ಯಾಸದಿಂದಾಗಿ ಅವರು ಕೋಲಿ ನಾಯಿಯಾಗಲು ಆಯ್ಕೆ ಮಾಡಿಕೊಂಡರು. ಅವರ ಇಚ್ಛೆಯಂತೆ ನಾಯಿ ಧಿರಿಸು ಸಿದ್ಧ ಪಡಿಸಲಾಯಿತು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com