ಪ್ರಧಾನಿ ಮೋದಿ ಅಮೇರಿಕಾ ಭೇಟಿ ಸಮಯದಲ್ಲೇ ಜಿನ್‌ಪಿಂಗ್ ರನ್ನು ಸರ್ವಾಧಿಕಾರಿ ಎಂದ ಜೋ ಬೈಡನ್

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾ ಭೇಟಿ ಸಮಯದಲ್ಲೇ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಸರ್ವಾಧಿಕಾರಿ ಎಂದು ಕರೆದಿದ್ದಾರೆ.
ಕ್ಸಿ ಜಿನ್ ಪಿಂಗ್-ಜೋ ಬೈಡನ್
ಕ್ಸಿ ಜಿನ್ ಪಿಂಗ್-ಜೋ ಬೈಡನ್
Updated on

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾ ಭೇಟಿ ಸಮಯದಲ್ಲೇ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಸರ್ವಾಧಿಕಾರಿ ಎಂದು ಕರೆದಿದ್ದಾರೆ. 

ದ್ವಿಪಕ್ಷೀಯ ಬಾಂಧವ್ಯವನ್ನು ಸ್ಥಿರಗೊಳಿಸಲು ಅಮೆರಿಕದ ಉನ್ನತ ರಾಜತಾಂತ್ರಿಕ ಅಧಿಕಾರಿ ಆಂಟೋನಿ ಬ್ಲಿಂಕೆನ್ ಬೀಜಿಂಗ್‌ಗೆ ಭೇಟಿ ನೀಡಿದ್ದು, ಇದರ ಮಧ್ಯೆ ಈ ಹೇಳಿಕೆ ರಾಜತಾಂತ್ರಿಕರು ಮುಜುಗರಕ್ಕೀಡಾಗುವಂತೆ ಮಾಡಿದೆ. 

ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೈಡನ್, 'ನಾವು ಚೀನಾದ ಪತ್ತೆದಾರಿ ಬಲೂನ್ ಅನ್ನು ಹೊಡೆದುರುಳಿಸಿದ್ದು ಇದರಿಂದ ಕ್ಸಿ ಜಿನ್‌ಪಿಂಗ್ ತುಂಬಾ ಅಸಮಾಧಾನಗೊಂಡಿದ್ದಾರೆ. ಇದು ಸರ್ವಾಧಿಕಾರಿಗಳಿಗೆ ನಾಚಿಕೆಗೇಡಿನ ಸಂಗತಿ. ಚೀನಾ 'ನಿಜವಾದ ಆರ್ಥಿಕ ತೊಂದರೆಗಳನ್ನು ಹೊಂದಿದೆ' ಎಂದು ಬೈಡನ್ ಹೇಳಿದ್ದರು.

ಬೈಡನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಚೀನಾ, ಕ್ಸಿ ಜಿನ್ ಪಿಂಗ್ ಅವರನ್ನು 'ಸರ್ವಾಧಿಕಾರಿ' ಎಂದು ಕರೆದಿರುವುದು 'ಹಾಸ್ಯಾಸ್ಪದ' ಎಂದು ಕರೆದಿದೆ. ಚೀನಾ ಅಧ್ಯಕ್ಷರ ಬಗ್ಗೆ ಬೈಡನ್ ಏಕೆ ಇಂತಹ ಹೇಳಿಕೆ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದೆ. ಇನ್ನು ಕ್ಸಿ ಇತ್ತೀಚೆಗೆ ಅಧ್ಯಕ್ಷರಾಗಿ ಮತ್ತು ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥರಾಗಿ ಮೂರನೇ ಅವಧಿಗೆ ಆಯ್ಕೆಯಾಗಿದ್ದಾರೆ. ಮಾವೋ ಝೆಡಾಂಗ್ ನಂತರ ಕ್ಸಿ ಚೀನಾದ ಅತ್ಯಂತ ಶಕ್ತಿಶಾಲಿ ನಾಯಕರಾಗಿದ್ದಾರೆ.

ಸೋಮವಾರ ಬ್ಲಿಂಕನ್ ಅವರನ್ನು ಭೇಟಿಯಾದ ಕ್ಸಿ, ಬೈಡನ್ ಅವರ ಕಾಮೆಂಟ್‌ಗಳಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ. ಬಲೂನ್ ಘಟನೆಯ ನಂತರ ಎರಡೂ ದೇಶಗಳು ತಮ್ಮ ಸಂಬಂಧವನ್ನು ಸ್ಥಿರ ಮಟ್ಟಕ್ಕೆ ತರಲು ಪ್ರಯತ್ನಗಳನ್ನು ಮಾಡುತ್ತಿವೆ. ಬ್ಲಿಂಕೆನ್ ಮತ್ತು ಕ್ಸಿ ತಮ್ಮ ಸಭೆಯ ಸಮಯದಲ್ಲಿ ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವಿನ ಪೈಪೋಟಿಯನ್ನು ಸ್ಥಿರಗೊಳಿಸಲು ಒಪ್ಪಿಕೊಂಡರು. ಆದರೆ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಚೀನಾಕ್ಕೆ ಅಪರೂಪದ ಭೇಟಿಯ ಸಂದರ್ಭದಲ್ಲಿ ಯಾವುದೇ ಪ್ರಗತಿ ಸಾಧಿಸಲು ವಿಫಲರಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com