ಸಸ್ಯಾಹಾರಿ ಪ್ರಧಾನಿ ಮೋದಿಗೆ ಅಮೆರಿಕ ಅಧ್ಯಕ್ಷರ ಔತಣ ಕೂಟದಲ್ಲಿ ಸಿದ್ಧಪಡಿಸಿದ ಭಕ್ಷ್ಯಗಳೇನೇನು? ಮೆನು ಸಿದ್ಧಪಡಿಸಿದ ಶೆಫ್ ಇವರೇ ನೋಡಿ...

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಲ್ಲಿದ್ದಾರೆ. ಉನ್ನತ ಮಟ್ಟದ ಭೇಟಿ ಸಂದರ್ಭದಲ್ಲಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden) ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್(Jill Biden) ಔತಣಕೂಟಕ್ಕೆ ಆಹ್ವಾನಿಸಿ ಅತಿಥಿ ಸತ್ಕಾರ ಮಾಡಿದ್ದಾರೆ. 
ಪ್ರಧಾನಿ ಮೋದಿಗೆ ಔತಣಕೂಟದ ಭಕ್ಷ್ಯಗಳು
ಪ್ರಧಾನಿ ಮೋದಿಗೆ ಔತಣಕೂಟದ ಭಕ್ಷ್ಯಗಳು

ವಾಷಿಂಗ್ಟನ್ ಡಿಸಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಲ್ಲಿದ್ದಾರೆ. ಉನ್ನತ ಮಟ್ಟದ ಭೇಟಿ ಸಂದರ್ಭದಲ್ಲಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden) ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್(Jill Biden) ಔತಣಕೂಟಕ್ಕೆ ಆಹ್ವಾನಿಸಿ ಅತಿಥಿ ಸತ್ಕಾರ ಮಾಡಿದ್ದಾರೆ. 

ಮೋದಿಯವರನ್ನು ಗೌರವಿಸಲು ಶ್ವೇತಭವನದಲ್ಲಿ ಸಸ್ಯಾಹಾರಿ, ಸರಳ, ಭಾರತೀಯ ಆಹಾರ ಪದ್ಧತಿಯ ಸ್ಪರ್ಶ ಹೊಂದಿರುವ ಮೆನುಗಳನ್ನು ಸಿದ್ದಪಡಿಸಲಾಗಿತ್ತು. ಪ್ರಧಾನಿ ಮೋದಿಯವರು ಪಕ್ಕಾ ಸಸ್ಯಾಹಾರಿಯಾಗಿರುವುದರಿಂದ ಸ್ವತಃ ಜಿಲ್ ಬೈಡನ್ ಅವರು ಊಟದ ಭಕ್ಷ್ಯಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದರು. 

ಶೆಫ್ ನೀನಾ ಕರ್ಟಿಸ್: ಸಸ್ಯಾಹಾರಿ ಆಹಾರದ ಪಾಕಪದ್ಧತಿಯಲ್ಲಿ ಪರಿಣಿತರಾದ ಶೆಫ್ ನೀನಾ ಕರ್ಟಿಸ್(Chef Nina Curtis) ಅವರನ್ನು ಮೆನು ವಿನ್ಯಾಸಗೊಳಿಸಲು ಜಿಲ್ ಬೈಡನ್ ಆಹ್ವಾನಿಸಿದ್ದರು. ಶ್ವೇತಭವನದ ಕಾರ್ಯನಿರ್ವಾಹಕ ಬಾಣಸಿಗ ಕ್ರಿಸ್ ಕಾಮರ್‌ಫೋರ್ಡ್ ಮತ್ತು ಶ್ವೇತಭವನದ ಕಾರ್ಯನಿರ್ವಾಹಕ ಪೇಸ್ಟ್ರಿ ಬಾಣಸಿಗ ಸೂಸಿ ಮಾರಿಸನ್ ಅವರೊಂದಿಗೆ ನೀನಾ ಮೆನು ಸಿದ್ಧಪಡಿಸಿದ್ದರು. 

<strong>ಶೆಫ್ ನೀನಾ ಕರ್ಟಿಸ್</strong>
ಶೆಫ್ ನೀನಾ ಕರ್ಟಿಸ್

ಮೆನುಗಳೇನೇನು?: ಶ್ವೇತಭವನದಲ್ಲಿ ಪ್ರಧಾನಿ ಮೋದಿಯವರಿಗೆ(PM Narendra Modi) ಸಿದ್ಧಪಡಿಸಲಾಗಿದ್ದ ಆಹಾರಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶನಕ್ಕಿಡಲಾಗಿತ್ತು. ಭೋಜನ ಕೂಟದ ಮೆನುವಿನಲ್ಲಿ ಮೊಸರಿಗೆ ನಿಂಬೆ ಹಣ್ಣಿನ ರಸ ಹಾಕಿ ತಯಾರಿಸಿದ ಸಾಸ್, ಕ್ರಿಸ್ಪ್ಡ್ ಮಿಲೆಟ್ ಕೇಕ್ಸ್, ಬೇಸಿಗೆ ಸ್ಕ್ವ್ಯಾಷ್‌ಗಳು, ಸಿರಿಧಾನ್ಯಗಳು ಮತ್ತು ಗ್ರಿಲ್ಡ್ ಕಾರ್ನ್ ಕರ್ನಲ್ ಸಲಾಡ್, ಕಲ್ಲಂಗಡಿ ಹಣ್ಣು, ಟ್ಯಾಂಗಿ ಆವಕಾಡೊ ಸಾಸ್, ಅಣಬೆಗಳು, ಸಿಹಿ ತಿಂಡಿಯಾಗಿ ಗುಲಾಬಿ ಮತ್ತು ಏಲಕ್ಕಿ-ಇನ್ಫ್ಯೂಸ್ಡ್ ಸ್ಟ್ರಾಬೆರಿ ಶಾರ್ಟ್‌ಕೇಕ್ ಇದ್ದವು ಮತ್ತು ಖಾರದ ಕೆಲವು ಖಾದ್ಯಗಳು ಒಳಗೊಂಡಿದ್ದವು. 

ಸಸ್ಯಾಹಾರಿ ಪಾಕಪದ್ಧತಿಯಲ್ಲಿ ಪರಿಣತಿ ಹೊಂದಿರುವ ನೀನಾ ಕರ್ಟಿಸ್ ಅವರನ್ನು ಶ್ವೇತಭವನದ ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ಮತ್ತು ಪ್ರಧಾನ ಮಂತ್ರಿ ಮೋದಿಯವರಿಗೆ ಅದ್ಭುತವಾದ ಸಸ್ಯಾಹಾರಿ ಮೆನುವನ್ನು ತಯಾರಿಸಲು ಕೇಳಿಕೊಂಡಿದ್ದೇನೆ ಎಂದು ಜಿಲ್ ಬೈಡನ್ ಹೇಳಿಕೊಂಡಿದ್ದರು. ಅತಿಥಿಗಳು ತಮ್ಮ ಮುಖ್ಯ ಕೋರ್ಸ್‌ಗೆ ಮಾಂಸಹಾರದಲ್ಲಿ ಮೀನುಗಳನ್ನು ಸೇರಿಸುವ ಆಯ್ಕೆಯಿದ್ದಿತು. 

ವೈನ್ ಆಯ್ಕೆಯಾಗಿ ಸ್ಟೋನ್ ಟವರ್ ಚಾರ್ಡೋನ್ನೆ "ಕ್ರಿಸ್ಟಿ" 2021, ಪಟೇಲ್ ರೆಡ್ ಬ್ಲೆಂಡ್ 2019 ಮತ್ತು ಡೊಮೈನ್ ಕಾರ್ನೆರೋಸ್ ಬ್ರೂಟ್ ರೋಸ್ ನ್ನು ಒಳಗೊಂಡಿದ್ದವು. 

ಅಮೆರಿಕ ಮತ್ತು ಭಾರತೀಯ ಪಾಕ ಪದ್ಧತಿಗಳ ಸಮ್ಮಿಳನ: ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಕ್ಯಾಲಿಫೋರ್ನಿಯಾ ಮೂಲದ ಶೆಫ್ ನೀನಾ ಕರ್ಟಿಸ್, ಪ್ರಧಾನಿ ಮೋದಿಗೆ ತಯಾರಿಸಿದ ಪಾಕ ವಿಧಾನ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದರು. ಅಮೇರಿಕನ್ ಪಾಕಪದ್ಧತಿಯ ಜೊತೆ ಭಾರತೀಯ ಮಸಾಲೆ ಪದಾರ್ಥಗಳು, ಸಿಹಿತಿಂಡಿಗಳ ತಯಾರಿ ಖುಷಿ ಕೊಟ್ಟಿತು. ಭಾರತವು ಈ ವರ್ಷ ಸಿರಿಧಾನ್ಯ ವರ್ಷವನ್ನು ಆಚರಿಸುವುದನ್ನು ತಿಳಿದುಕೊಳ್ಳಲು ನಾವು ತುಂಬಾ ಉತ್ಸುಕರಾಗಿದ್ದೇವೆ ಎಂದಿದ್ದಾರೆ. 

ಶ್ವೇತಭವನದ ಸೌತ್ ಲಾನ್‌ನಲ್ಲಿ ವಿಶೇಷವಾಗಿ ಅಲಂಕರಿಸಿದ ಪೆವಿಲಿಯನ್‌ ಗೆ ಭಾರತ ಮತ್ತು ಅಮೆರಿಕದ ಸಾಂಪ್ರದಾಯಿಕ ಸ್ಪರ್ಶ ನೀಡಲಾಗಿತ್ತು. ನಡೆದ ಔತಣಕೂಟದಲ್ಲಿ 400ಕ್ಕೂ ಹೆಚ್ಚು ಅತಿಥಿಗಳಿಗೆ ಆಹ್ವಾನವಿತ್ತು. ಔತಣಕೂಟದ ಪ್ರದೇಶವನ್ನು ಭಾರತದ ರಾಷ್ಟ್ರೀಯ ಪಕ್ಷಿ ನವಿಲಿನ ಮಾದರಿಯಲ್ಲಿ ಅಲಂಕರಿಸಲಾಗಿತ್ತು. 

ಊಟದ ಮೇಜುಗಳನ್ನು, ವೇದಿಕೆಯನ್ನು ಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು. ಹೂವುಗಳ ಬಣ್ಣವು ಭಾರತದ ಧ್ವಜದ ಕೇಸರಿ ಬಣ್ಣವನ್ನು ಪ್ರತಿಬಿಂಬಿಸಿದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com