ಶ್ವೇತಭವನದಲ್ಲಿ ಪ್ರಧಾನಿ ಮೋದಿಗೆ ಅಮೆರಿಕ ಅಧ್ಯಕ್ಷರಿಂದ ಔತಣಕೂಟ: ಪರಸ್ಪರ ಆಲಂಗಿಸಿಕೊಂಡು ಮೋದಿ-ಬೈಡನ್ ಗಿಫ್ಟ್ ವಿನಿಮಯ

ವಾಷಿಂಗ್ಟನ್ ಡಿಸಿಯಲ್ಲಿರುವ ಆಡಳಿತ ಶಕ್ತಿಕೇಂದ್ರ ಶ್ವೇತಭವನಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಪತ್ನಿ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಸ್ವಾಗತಿಸಿದರು.
ಉಡುಗೊರೆ ನೀಡಿ ಪರಸ್ಪರ ಆಲಂಗಿಸಿಕೊಂಡ ನಾಯಕರು
ಉಡುಗೊರೆ ನೀಡಿ ಪರಸ್ಪರ ಆಲಂಗಿಸಿಕೊಂಡ ನಾಯಕರು
Updated on

ವಾಷಿಂಗ್ಟನ್ ಡಿಸಿ: ಅಮೆರಿಕದ ನ್ಯೂಯಾರ್ಕ್ ಸಿಟಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಮುಗಿಸಿ ಕಳೆದ ರಾತ್ರಿ ನೇರವಾಗಿ ವಾಷಿಂಗ್ಟನ್ ಡಿಸಿಯಲ್ಲಿರುವ ಆಡಳಿತ ಶಕ್ತಿಕೇಂದ್ರ ಶ್ವೇತಭವನಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಪತ್ನಿ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಸ್ವಾಗತಿಸಿದರು.

ಪ್ರಧಾನಿ ಮೋದಿಯವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಜಿಲ್ ಬೈಡನ್ ಸಾಂಪ್ರದಾಯಿಕ ಸ್ವಾಗತ ಕೋರಿದರು. 
ಶ್ವೇತಭವನದ ಮಾಹಿತಿ ಪ್ರಕಾರ, ಪ್ರಧಾನಿ ಮೋದಿ ಆಗಮನಕ್ಕೆ ಅಮೆರಿಕ ಪ್ರಥಮ ಮಹಿಳೆ ಜಿಲ್ ಬೈಡನ್ ಮತ್ತು ಅವರ ತಂಡ ಭಾರತ ಪ್ರಾಂತ್ಯಕ್ಕೆ ಸಂಬಂಧಿಸಿದ ಸಂಗೀತದ ಮೂಲಕ ಗೌರವ ಸೂಚಿಸಿದರು. 

ಪ್ರಧಾನ ಮಂತ್ರಿಗಳ ಜೊತೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಮತ್ತು ಶಿಷ್ಟಾಚಾರದ ಉಪ ಮುಖ್ಯಸ್ಥ ಅಸೀಮ್ ವೋಹ್ರಾ ಅವರು ಸಹ ಶ್ವೇತಭವನಕ್ಕೆ ಹೋಗಿದ್ದರು.

ಔತಣಕೂಟಕ್ಕೆ ಮುನ್ನ ಜಿಲ್ ಬೈಡನ್ ಅವರು ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದಲ್ಲಿ (NSF) ಮೋದಿಯವರಿಗೆ ಆತಿಥ್ಯ ನೀಡಿದರು. ಅಲ್ಲಿ ಅವರು ಶಿಕ್ಷಣ ಮತ್ತು ಉದ್ಯೋಗಿಗಳ ಸುತ್ತ ಭಾರತ ಮತ್ತು ಅಮೆರಿಕದ ಹಂಚಿಕೆಯ ಆದ್ಯತೆಗಳನ್ನು ತೋರಿಸುವ ಕಾರ್ಯಕ್ರಮ ನೆರವೇರಿಸಿದರು.

ಔತಣಕೂಟದ ಮೆನು: ಪ್ರಧಾನಿ ನರೇಂದ್ರ ಮೋದಿಯವರಿಗೆ ಶ್ವೇತಭವನದ ದಕ್ಷಿಣ ಭಾಗದ ಹುಲ್ಲುಗಾವಲಿನಲ್ಲಿ ಆಯೋಜಿಸಲಾದ ಔತಣಕೂಟದಲ್ಲಿ ಸಂಪೂರ್ಣ ಸಸ್ಯಾಹಾರವೇ ಮೆನುವಾಗಿತ್ತು. ಸುಮಾರು 400 ಮಂದಿ ಅತಿಥಿಗಳು ಪಾಲ್ಗೊಂಡಿದ್ದರು.  ಸಿರಿಧಾನ್ಯ, ಜೋಳದ ಸಲಾಡ್ ಮತ್ತು ಸ್ಟಫ್ಡ್ ಮಶ್ರೂಮ್‌, ಕಲ್ಲಂಗಡಿ ಹಣ್ಣು, ಸಾಸ್ ಗಳಿದ್ದವು. ಅದರ ಜತೆಗೆ ಡಿಲ್ ಯೋಗರ್ಟ್​ ಸಾಸ್, ಸಮರ್ ಸ್ಕ್ವ್ಯಾಷಸ್, ಮೆರಿನೇಟೆಡ್ ಮಿಲೆಟ್ಸ್​, ಗ್ರಿಲ್ಡ್​ ಕಾರ್ನ್​ ಕರ್ನಲ್ ಸಲಾಡ್, ಕಂಪ್ರೆಸ್ಡ್​ ವಾಟರ್​ಮೆಲನ್,ಟ್ಯಾಂಗಿ ಆವಕಾಡೋ ಸಾಸ್ ಕೂಡ ಇದ್ದವು.

ಮೋದಿಯವರು ಸಂಪೂರ್ಣ ಸಸ್ಯಾಹಾರಿಯಾಗಿರುವುದರಿಂದ ಜಿಲ್ ಬೈಡನ್ ಅವರು ಶ್ವೇತಭವನದ ಶೆಫ್ ನೀನಾ ಕರ್ಟಿಸ್ ಅವರಿಗೆ ವಿಶೇಷ ಸೂಚನೆ ನೀಡಿದ್ದರಂತೆ. ಶೆಫ್ ಸಸ್ಯ ಆಧಾರಿತ ಮೆನು ತಯಾರಿಸುವುದರಲ್ಲಿ ಸಿದ್ದಹಸ್ತರು. ಹೀಗಾಗಿ ಜಿಲ್ ಬೈಡನ್ ಅವರಿಗೇ ಅಡುಗೆ ತಯಾರಿ ಜವಾಬ್ದಾರಿಯನ್ನು ವಹಿಸಿದ್ದರಂತೆ.

ಮೋದಿಯವರ ಜೊತೆ ಔತಣಕೂಟದಲ್ಲಿ ಪಾಲ್ಗೊಂಡ ಅತಿಥಿಗಳಿಗೆ ಊಟದಲ್ಲಿ ಮಾಂಸಹಾರವಾಗಿ ಮೀನನ್ನು ಸೇರಿಸುವ ಆಯ್ಕೆಗಳಿದ್ದವು.

ಅಮೆರಿಕ ಅಧ್ಯಕ್ಷರಿಗೆ ನೀಡಿದ ಉಡುಗೊರೆ: ಸೋಷಿಯಲ್ ಮೀಡಿಯಾಗಳಲ್ಲಿ ಇಂದು ಬೆಳಗ್ಗೆಯಿಂದ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷರು ಔತಣಕೂಟ ಮುಗಿಸಿ ಶ್ವೇತಭವನದಿಂದ ಬೀಳ್ಕೊಡುವ ವೇಳೆ ಪರಸ್ಪರ ಆಲಂಗಿಸಿಕೊಂಡಿದ್ದು, ಪರಸ್ಪರ ಕೊಟ್ಟುಕೊಂಡ ಉಡುಗೊರೆಗಳ ಫೋಟೋ, ವಿಡಿಯೊಗಳು ಹರಿದಾಡುತ್ತಿವೆ.

ಮೋದಿ ಕೊಟ್ಟ ಉಡುಗೊರೆ: 'ಹತ್ತು ಉಪನಿಷತ್ತು ತತ್ವಗಳು' ಪುಸ್ತಕವನ್ನು ಮೋದಿಯವರು ಅಮೆರಿಕ ಅಧ್ಯಕ್ಷರಿಗೆ ಉಡುಗೊರೆಯಾಗಿ ನೀಡಿದರು. ಈ ಪುಸ್ತಕವನ್ನು ಲಂಡನ್ ನ ಫೇಬರ್ ಮತ್ತು ಫೇಬರ್ ಲಿಮಿಟೆಡ್ ಗ್ಲಾಸ್ಗೊ ಪ್ರೆಸ್ ಯೂನಿವರ್ಸಿಟಿಯಡಿಯಲ್ಲಿ ಪ್ರಕಟಿಸಿದೆ. 

ಅಲ್ಲದೆ ರಾಜಸ್ತಾನದ ಜೈಪುರದ ಶಿಲ್ಪಿ ವಿನ್ಯಾಸಗೊಳಿಸಿದ ಕರ್ನಾಟಕದ ಮೈಸೂರು ಮೂಲದ ಶ್ರೀಗಂಧದ ಪೆಟ್ಟಿಗೆಯನ್ನು, ಪಶ್ಚಿಮ ಬಂಗಾಳದ ಕುಶಲಕರ್ಮಿಗಳು ತಯಾರಿಸಿದ ಬೆಳ್ಳಿಯ ತೆಂಗಿನಕಾಯ, ತಮಿಳು ನಾಡಿನ ಬಿಳಿ ಎಳ್ಳುಗಳನ್ನು ಉಡುಗೊರೆಯಾಗಿ ನೀಡಿದರು.

ಶ್ರೀಗಂಧದ ಪೆಟ್ಟಿಗೆಯು ಬೆಳ್ಳಿಯ ಗಣೇಶನ ವಿಗ್ರಹ ಮತ್ತು ದಿಯಾವನ್ನು ಒಳಗೊಂಡಿದೆ. ಪ್ರಧಾನಿಯವರು ಪ್ರಥಮ ಮಹಿಳೆಗೆ 7.5 ಕ್ಯಾರೆಟ್ ಹಸಿರು ವಜ್ರವನ್ನು ಬೆಳೆಸಿದ ಲ್ಯಾಬ್ ನ್ನು ಉಡುಗೊರೆಯಾಗಿ ನೀಡಿದರು, ಇದು ಪರಿಸರ ಸ್ನೇಹಿಯಾಗಿದೆ. ಔತಣಕೂಟ ಏರ್ಪಡಿಸಿದ ಅಮೆರಿಕ ಅಧ್ಯಕ್ಷ ಮತ್ತು ಅವರ ಪತ್ನಿಗೆ ಧನ್ಯವಾದ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com