ಪಾಕ್‌ನಲ್ಲಿ ಮನಮೋಹನ್ ಸಿಂಗ್ ಗೆ ಗುಂಡಿಕ್ಕಿ ಹತ್ಯೆ: ಇದುವರೆಗೆ ಹತ್ಯೆಗೀಡಾದ ಪಂಜಾಬಿಗಳು ಎಷ್ಟು ಗೊತ್ತಾ?

ಪಾಕಿಸ್ತಾನದ ಪೇಶಾವರ್ ನಗರದಲ್ಲಿ ಕೆಲವು ಅಪರಿಚಿತ ಬಂದೂಕುಧಾರಿಗಳು ಸಿಖ್ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇದು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಉದ್ದೇಶಿತ ದಾಳಿಯ ಇತ್ತೀಚಿನ ಘಟನೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪೇಶಾವರ್: ಪಾಕಿಸ್ತಾನದ ಪೇಶಾವರ್ ನಗರದಲ್ಲಿ ಕೆಲವು ಅಪರಿಚಿತ ಬಂದೂಕುಧಾರಿಗಳು ಸಿಖ್ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇದು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಉದ್ದೇಶಿತ ದಾಳಿಯ ಇತ್ತೀಚಿನ ಘಟನೆಯಾಗಿದೆ.

ಮನಮೋಹನ್ ಸಿಂಗ್ ಎಂಬ ಸಿಖ್ ವ್ಯಕ್ತಿ ಮೃತ ವ್ಯಕ್ತಿಯಾಗಿದ್ದು ಈತ ಪೇಶಾವರದ ಉಪನಗರವಾದ ರಶೀದ್ ಗರ್ಹಿಯಿಂದ ನಗರದ ಒಳಭಾಗದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕೆಲವು ಶಸ್ತ್ರಸಜ್ಜಿತ ವ್ಯಕ್ತಿಗಳು ಕಕ್ಷಾಲ್‌ನ ಗುಲ್ದಾರಾ ಚೌಕ್ ಬಳಿ ದಾಳಿ ನಡೆಸಿದರು.

ಗುಂಡಿನ ದಾಳಿ ಬಳಿಕ ಮನಮೋಹನ್ ಸಿಂಗ್ ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ 48 ಗಂಟೆಗಳಲ್ಲಿ ಯಕ್ಕಾ ಟೂಟ್ ಪ್ರದೇಶದಲ್ಲಿ ಸಿಖ್ ವ್ಯಕ್ತಿಯ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ. ಇದಕ್ಕೂ ಮುನ್ನ ಶುಕ್ರವಾರ (ಜೂನ್ 23) ಸಿಖ್ ವ್ಯಕ್ತಿಯೊಬ್ಬರು ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದರು. ಗಮನಾರ್ಹವಾಗಿ, ಮಾರ್ಚ್‌ನಲ್ಲಿ, ನಗರದಲ್ಲಿ ಅಪರಿಚಿತ ದುಷ್ಕರ್ಮಿಗಳು ಸಿಖ್ ಉದ್ಯಮಿಯೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಕಳೆದ ಹಲವು ವರ್ಷಗಳಿಂದ ಹತ್ಯೆಗಳು ನಡೆಯುತ್ತಿವೆ
ಸುಮಾರು 15,000 ಸಿಖ್ಖರು ಪೇಶಾವರದಲ್ಲಿ ವಾಸಿಸುತ್ತಿದ್ದಾರೆ. ಹೆಚ್ಚಾಗಿ ಪ್ರಾಂತೀಯ ರಾಜಧಾನಿ ಪೇಶಾವರದ ಜೋಗನ್ ಶಾ ನೆರೆಹೊರೆಯಲ್ಲಿ ವಾಸಿಸುತ್ತಿದ್ದಾರೆ. ಪೇಶಾವರದಲ್ಲಿ ಸಿಖ್ ಸಮುದಾಯದ ಹೆಚ್ಚಿನ ಸದಸ್ಯರು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರು ಔಷಧಾಲಯವನ್ನು ಹೊಂದಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪೇಶಾವರದಲ್ಲಿ ಖ್ಯಾತ ಸಿಖ್ ವೈದ್ಯರೊಬ್ಬರನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದರು.

ಸಿಖ್ ವೈದ್ಯರನ್ನು ಅವರ ಕ್ಲಿನಿಕ್‌ನಲ್ಲೇ ಹತ್ಯೆ ಮಾಡಲಾಗಿತ್ತು. 2018ರ ಆರಂಭದಲ್ಲಿ, ಸಿಖ್ ಸಮುದಾಯದ ಪ್ರಮುಖ ಸದಸ್ಯ ಚರಂಜಿತ್ ಸಿಂಗ್ ಅವರನ್ನು ಪೇಶಾವರದಲ್ಲಿಯೇ ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದರು. ಇದಾದ ಎರಡು ವರ್ಷಗಳ ನಂತರ, 2020ರಲ್ಲಿ, ಸುದ್ದಿ ವಾಹಿನಿ ನಿರೂಪಕ ರವೀಂದರ್ ಸಿಂಗ್ ಕೊಲೆಯಾದರು. ಇನ್ನು 2016 ರಲ್ಲಿ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ರಾಷ್ಟ್ರೀಯ ಅಸೆಂಬ್ಲಿ ಸದಸ್ಯ ಸೋರೆನ್ ಸಿಂಗ್ ಕೂಡ ಪೇಶಾವರದಲ್ಲಿ ಕೊಲೆಯಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com