ಕೆನಡಾ: ಖಲಿಸ್ತಾನ್ ಬೆಂಬಲಿಗ, ನಿಯೋಜಿತ ಭಯೋತ್ಪಾದಕ, ಹರ್ದೀಪ್ ನಿಜ್ಜರ್ ಹತ್ಯೆ

ಕೆನಡಾ ಮೂಲದ ಖಲಿಸ್ತಾನ್ ಪರ ನಾಯಕ ಮತ್ತು ನಿಯೋಜಿತ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಎಂಬಾತನನ್ನು ಕೆನಡಾದಲ್ಲಿ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಹರ್ದೀಪ್ ನಿಜ್ಜರ್ ಹತ್ಯೆ
ಹರ್ದೀಪ್ ನಿಜ್ಜರ್ ಹತ್ಯೆ

ಚಂಡೀಗಢ: ಕೆನಡಾ ಮೂಲದ ಖಲಿಸ್ತಾನ್ ಪರ ನಾಯಕ ಮತ್ತು ನಿಯೋಜಿತ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಎಂಬಾತನನ್ನು ಕೆನಡಾದಲ್ಲಿ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಕೆನಾಡ ಪಂಜಾಬಿ ಪ್ರಾಬಲ್ಯವಿರುವ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆ ನಗರದಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರದಲ್ಲಿ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ. ಸರ್ರೆಯ ಗುರುನಾನಕ್ ಸಿಖ್ ಗುರುದ್ವಾರದ ಅಧ್ಯಕ್ಷರಾಗಿದ್ದ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ವಿವಿಧ ಹಿಂಸಾಚಾರ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಭಾರತ ಸರ್ಕಾರವು 'ವಾಂಟೆಡ್ ಭಯೋತ್ಪಾದಕ' ಎಂದು ಘೋಷಿಸಿತ್ತು.

ಪಂಜಾಬ್‌ನ ಫಿಲ್ಲೌರ್‌ನಲ್ಲಿ ಹಿಂದೂ ಪಾದ್ರಿಯೊಬ್ಬರನ್ನು ಕೊಲ್ಲುವ ಸಂಚು ಸೇರಿದಂತೆ ಸಿಖ್ ಮೂಲಭೂತವಾದಕ್ಕೆ ಸಂಬಂಧಿಸಿದ ಕನಿಷ್ಠ ನಾಲ್ಕು NIA ಪ್ರಕರಣಗಳಲ್ಲಿ ನಿಜ್ಜರ್ ಪ್ರಸ್ತುತ ಭಾರತದಲ್ಲಿ ತನಿಖಾಧಿಕಾರಿಗಳಿಗೆ ಬೇಕಾಗಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ ಜುಲೈನಲ್ಲಿ ಆತನ ವಿರುದ್ಧ ಇಲಾಖೆ 10 ಲಕ್ಷ ನಗದು ಬಹುಮಾನವನ್ನೂ ಘೋಷಿಸಿತ್ತು. 

ಇನ್ನು ನಿಜ್ಜರ್ ಹತ್ಯೆ ಸಂಬಂಧ ಸಂಯೋಜಿತ ನರಹತ್ಯೆ ತನಿಖಾ ತಂಡ (ಐಎಚ್‌ಐಟಿ) ಈ ಬಗ್ಗೆ ತನಿಖೆ ನಡೆಸುತ್ತಿದೆ. ಇಬ್ಬರು ಅಪರಿಚಿತ ಬಂದೂಕುಧಾರಿಗಳಿಂದ ನಿಜ್ಜಾರ್‌ನನ್ನು ಗುಂಡಿಕ್ಕಿ ಕೊಂದಿದ್ದು, ಗುಂಡು ಹಾರಿಸಿದ ಬಳಿಕ ಅವರು ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಕಾನೂನು ಜಾರಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗುರ್ಪತ್‌ವಂತ್ ಸಿಂಗ್ ಪನ್ನುನ್ ನಡೆಸುತ್ತಿರುವ ‘ಸಿಖ್ಸ್ ಫಾರ್ ಜಸ್ಟಿಸ್’ (SFJ) ನ ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕ ಅಜೆಂಡಾವನ್ನು ಉತ್ತೇಜಿಸಲು ಖಲಿಸ್ತಾನಿ ಪರ ಸಂಘಟನೆಯಾದ ಖಲಿಸ್ತಾನ್ ಟೈಗರ್ ಫೋರ್ಸ್ (KTF) ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಕಾರಣರಾಗಿದ್ದರು. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರಾಕ್ಷಸ ಅಂಶವಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡ ನಂತರ, ಪನ್ನುನ್ ಅವರನ್ನು ಕೆನಡಾದಲ್ಲಿ ತನ್ನ ಪ್ರತ್ಯೇಕತಾವಾದಿ ಸಂಘಟನೆ SFJ ನ ಪ್ರತಿನಿಧಿಯಾಗಿ ನೇಮಿಸಿ 'ಜನಮತಸಂಗ್ರಹ-2020 ಅಭಿಯಾನ'ವನ್ನು ಉತ್ತೇಜಿಸುವ ಜವಾಬ್ದಾರಿಯನ್ನು ವಹಿಸಿದ್ದರು. ಸರ್ರೆಯ ಗುರುನಾನಕ್ ಸಿಖ್ ದೇವಾಲಯವನ್ನು ಅದರ ಅಧ್ಯಕ್ಷರಾಗಲು ಬಲವಂತವಾಗಿ ಆಕ್ರಮಿಸಿಕೊಂಡರು. ಈ ಗುರುದ್ವಾರ, ಗುರುನಾನಕ್ ಸಿಖ್ ದೇವಾಲಯ ಮತ್ತು ಶ್ರೀ ದಶಮೇಶ್ ದರ್ಬಾರ್ - ಭಾರತ ವಿರೋಧಿ ಖಲಿಸ್ತಾನಿ ಅಂಶಗಳನ್ನು ಉತ್ತೇಜಿಸಲು ಹೆಸರುವಾಸಿಯಾಗಿದೆ.

ಕಳೆದೆರಡು ವರ್ಷಗಳಲ್ಲಿ, ವ್ಯಾಂಕೋವರ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಮುಂದೆ ಪ್ರತಿಭಟನೆಯ ಭಾಗವಾಗಿ ಅವರು ನಿಯಮಿತವಾಗಿ ಕಾಣಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com