ಪಾಕಿಸ್ತಾನ: ಲಾಹೋರ್ ನಲ್ಲಿ ಖಲಿಸ್ತಾನ್ ಕಮಾಂಡೋ ಫೋರ್ಸ್ ಮುಖ್ಯಸ್ಥನ ಹತ್ಯೆ
ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮತ್ತು ಖಲಿಸ್ತಾನ್ ಕಮಾಂಡೋ ಫೋರ್ಸ್ (ಕೆಸಿಎಫ್-ಪಂಜ್ವಾರ್ ಗ್ರೂಪ್) ಮುಖ್ಯಸ್ಥ ಪರಮ್‌ಜೀತ್ ಸಿಂಗ್ ಪಂಜ್ವಾರ್ ನನ್ನು ಪಾಕಿಸ್ತಾನದ ಲಾಹೋರ್‌ನಲ್ಲಿ ಶನಿವಾರ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
Published: 06th May 2023 07:01 PM | Last Updated: 06th May 2023 07:01 PM | A+A A-

ಖಲಿಸ್ತಾನ್ ಕಮಾಂಡೋ ಫೋರ್ಸ್ ಮುಖ್ಯಸ್ಥನ ಹತ್ಯೆ
ಲಾಹೋರ್: ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮತ್ತು ಖಲಿಸ್ತಾನ್ ಕಮಾಂಡೋ ಫೋರ್ಸ್ (ಕೆಸಿಎಫ್-ಪಂಜ್ವಾರ್ ಗ್ರೂಪ್) ಮುಖ್ಯಸ್ಥ ಪರಮ್‌ಜೀತ್ ಸಿಂಗ್ ಪಂಜ್ವಾರ್ ನನ್ನು ಪಾಕಿಸ್ತಾನದ ಲಾಹೋರ್‌ನಲ್ಲಿ ಶನಿವಾರ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಾಹೋರ್‌ನಲ್ಲಿರುವ ಅವರ ನಿವಾಸದ ಬಳಿ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಇಂದು ಬೆಳಿಗ್ಗೆ ಗುಂಡಿಕ್ಕಿ ಕೊಂದಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಪಂಜಾಬ್‌ನ ತರ್ನ್ ತರಣ್ ಜಿಲ್ಲೆಯ ಪಂಜ್ವಾರ್ ಮೂಲದ 63 ವರ್ಷ ವಯಸ್ಸಿನ ಪರಮ್‌ಜೀತ್ ಸಿಂಗ್ ಪಂಜ್ವಾರ್ ಮಾದಕವಸ್ತು ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದರು ಎಂಬ ಆರೋಪವಿದೆ. ಜುಲೈ 2020 ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ ಭಯೋತ್ಪಾದಕ ಎಂದು ಪಟ್ಟಿ ಮಾಡಲಾಗಿತ್ತು.
ಇದನ್ನೂ ಓದಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ನನ್ನು ಭಾರತಕ್ಕೆ ಹಸ್ತಾಂತರಿಸುತ್ತೀರಾ?; ಅಡ್ಡಗೋಡೆ ಮೇಲೆ ದೀಪ ಇಟ್ಟ ಪಾಕ್ ಸಚಿವ 'ಭುಟ್ಟೋ'!
ಪರಮ್‌ಜೀತ್ ಸಿಂಗ್ ಪಂಜ್ವಾರ್ ಅವರು 1986 ರಲ್ಲಿ KCF (Khalistan Commando Force) ಗೆ ಸೇರಿದರು. ನಂತರ ಆತ ಪಂಜ್ವಾರ್ ಗುಂಪಿನ ಮುಖ್ಯಸ್ಥನಾಗಿದ್ದ ಮತ್ತು ಪಾಕಿಸ್ತಾನಕ್ಕೆ ಪಲಾಯನ ಗೈದಿದ್ದ. ಈ ಹಿಂದೆ ಭಾರತ ಸರ್ಕಾರ ಕೆಸಿಎಫ್ ಅನ್ನು ಯುಎಪಿಎ ಅಡಿಯಲ್ಲಿ ಭಯೋತ್ಪಾದಕ ಸಂಘಟನೆ ಎಂದು ಪಟ್ಟಿ ಮಾಡಿದೆ.