ದೀಪಾವಳಿಗೆ ನ್ಯೂಯಾರ್ಕ್‌ ನಗರದ ಶಾಲೆಗಳಿಗೆ ಸಾರ್ವಜನಿಕ ರಜೆ ಘೋಷಣೆ

ನ್ಯೂಯಾರ್ಕ್ ನಗರದಲ್ಲಿ ದಕ್ಷಿಣ ಏಷ್ಯಾ ಮತ್ತು ಇಂಡೋ-ಕೆರಿಬಿಯನ್ ಸಮುದಾಯಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ನ್ಯೂಯಾರ್ಕ್ ನಗರದ ಶಾಲೆಗಳಿಗೆ ದೀಪಾವಳಿಯಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ನ್ಯೂಯಾರ್ಕ್ ನಗರದಲ್ಲಿ ದಕ್ಷಿಣ ಏಷ್ಯಾ ಮತ್ತು ಇಂಡೋ-ಕೆರಿಬಿಯನ್ ಸಮುದಾಯಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ನ್ಯೂಯಾರ್ಕ್ ನಗರದ ಶಾಲೆಗಳಿಗೆ ದೀಪಾವಳಿಯಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ ಎಂದು ಮೇಯರ್ ಎರಿಕ್ ಆಡಮ್ಸ್ ಅವರು ಸೋಮವಾರ ತಿಳಿಸಿದ್ದಾರೆ.

ದೀಪಗಳ ಹಬ್ಬ ಎಂದು ಕರೆಯಲ್ಪಡುವ ದೀಪಾವಳಿಯು ಅಕ್ಟೋಬರ್ ಅಥವಾ ನವೆಂಬರ್ ಬರುತ್ತದೆ. ಆದರೆ ದೀಪಾವಳಿ ಈ ವರ್ಷ ಭಾನುವಾರ, ನವೆಂಬರ್ 12 ರಂದು ಬಂದಿದ್ದು, 2023-2024 ಶಾಲಾ ಕ್ಯಾಲೆಂಡರ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಹಿಂದೂಗಳು, ಸಿಖ್ಖರು, ಜೈನರು ಮತ್ತು ಕೆಲವು ಬೌದ್ಧರು ಸೇರಿದಂತೆ ಸುಮಾರು 2 ಲಕ್ಷ ನ್ಯೂಯಾರ್ಕ್ ನಗರದ ನಿವಾಸಿಗಳು ದೀಪಾವಳಿಯನ್ನು ಆಚರಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಲೆಗಳ ಸಾರ್ವಜನಿಕ ರಜೆ ಪಟ್ಟಿಗೆ ಇದೀಗ ದೀಪಾವಳಿಯು ಸೇರಿಕೊಂಡಿದೆ ಎಂದು ಘೋಷಿಸಿದ ಆಡಮ್ಸ್, "ಇದು ನಿರಂತರವಾಗಿ ಬದಲಾಗುತ್ತಿರುವ ನಗರವಾಗಿದ್ದು, ಪ್ರಪಂಚದಾದ್ಯಂತ ಎಲ್ಲಾ ಸಮುದಾಯಗಳನ್ನು ನಿರಂತರವಾಗಿ ಸ್ವಾಗತಿಸುತ್ತಿದೆ" ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com