ದಂಗೆಯ ನಂತರ ಮೊದಲ ಬಾರಿ ಆಡಿಯೋ ಹೇಳಿಕೆ ಬಿಡುಗಡೆ ಮಾಡಿದ ವ್ಯಾಗ್ನರ್ ಸೇನಾ ಮುಖ್ಯಸ್ಥ

ವ್ಯಾಗ್ನರ್ ಖಾಸಗಿ ಸೇನೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಅವರು ಶನಿವಾರ ನಡೆಸಿದ ಸಶಸ್ತ್ರ ದಂಗೆಯ ನಂತರ ಮೊದಲ ಬಾರಿ ಆಡಿಯೋ ಹೇಳಿಕೆಯನ್ನು ಸೋಮವಾರ ಬಿಡುಗಡೆ ಮಾಡಿದ್ದಾರೆ. 
ವ್ಯಾಗ್ನರ್ ಸೇನಾ ಮುಖ್ಯಸ್ಥ
ವ್ಯಾಗ್ನರ್ ಸೇನಾ ಮುಖ್ಯಸ್ಥ

ಮಾಸ್ಕೋ: ವ್ಯಾಗ್ನರ್ ಖಾಸಗಿ ಸೇನೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಅವರು ಶನಿವಾರ ನಡೆಸಿದ ಸಶಸ್ತ್ರ ದಂಗೆಯ ನಂತರ ಮೊದಲ ಬಾರಿ ಆಡಿಯೋ ಹೇಳಿಕೆಯನ್ನು ಸೋಮವಾರ ಬಿಡುಗಡೆ ಮಾಡಿದ್ದಾರೆ. 

ತನ್ನ ಸೇನೆಯ ಮೇಲೆ ದಾಳಿ ಮಾಡಿ 30 ಹೋರಾಟಗಾರರನ್ನು ಹತ್ಯೆ ಮಾಡಿದ್ದಕ್ಕೆ ಪ್ರತಿಕಾರವಾಗಿ ಈ ದಂಗೆ ಎಂದು ಪ್ರಿಗೋಜಿನ್ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

"ಅನ್ಯಾಯದ ವಿರುದ್ಧ ನಾವು ನಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದ್ದೇವೆ" ಎಂದು ಪ್ರಿಗೋಜಿನ್ 11 ನಿಮಿಷಗಳ ಆಡಿಯೊದಲ್ಲಿ ಹೇಳಿದರು. ಆದರೆ ಅವರು ಎಲ್ಲಿದ್ದಾರೆ ಅಥವಾ ಅವರ ಮುಂದಿನ ನಿರ್ಧಾರ ಏನು ಎಂಬ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ.

ರಾಜಧಾನಿ ಮಾಸ್ಕೋವನ್ನು ತೆಕ್ಕೆಗೆ ತೆಗೆದುಕೊಂಡು ಪುಟಿನ್‌ ಸರ್ಕಾರದ ಪದಚ್ಯುತಿಗೆ ಹೊರಟಿದ್ದ ಪ್ರಿಗೋಜಿನ್‌ ಹಾಗೂ ಆತನ ನೇತೃತ್ವದ ವಾಗ್ನರ್‌ ಪಡೆಯ ಯಾರೊಬ್ಬರ ವಿರುದ್ಧವೂ ರಷ್ಯಾ ಕ್ರಮ ಕೈಗೊಳ್ಳದೇ ಇರಲು ಒಪ್ಪಿಗೆ ನೀಡಿದೆ.

ಉಕ್ರೇನ್‌ ಸಮರ ಸೇರಿದಂತೆ ರಷ್ಯಾ ನಡೆಸಿದ ಯುದ್ಧಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದ ವ್ಯಾಗ್ನರ್‌ ಪಡೆಯ ಪ್ರಿಗೋಜಿನ್‌ ಶನಿವಾರ ರಷ್ಯಾದ ವಿರುದ್ಧವೇ ದಂಗೆ ಸಾರಿದ್ದರು. ತಮ್ಮ ಪಡೆಯ ಸಾಧನೆಯನ್ನು ಮರೆಮಾಚಿ, ತಮ್ಮನ್ನೇ ದಮನಗೊಳಿಸಲು ರಷ್ಯಾ ರಕ್ಷಣಾ ಸಚಿವ ಹಾಗೂ ಸೇನಾ ಮುಖ್ಯಸ್ಥರು ಮುಂದಾಗಿದ್ದಾರೆ ಎಂಬುದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ದೇಶದ ನಡುವಿನ ಅಂತರ್‌ಯುದ್ಧವನ್ನು ಬೆಲಾರಸ್‌ ಅಧ್ಯಕ್ಷ ಅಲೆಕ್ಸಾಂಡರ್‌ ಸಂಧಾನದ ಮೂಲಕ ನಿಲ್ಲಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com