ಅದಾನಿ ಬಳಿಕ ಟ್ವಿಟ್ಟರ್‌ ಮಾಜಿ ಸಿಇಒ ಜ್ಯಾಕ್ ಡಾರ್ಸಿ ಗುರಿಯಾಗಿಸಿಕೊಂಡ ಹಿಂಡನ್‌ಬರ್ಗ್: ಬ್ಲಾಕ್‌ ಇಂಕ್‌ ಷೇರುಗಳಲ್ಲಿ ಕುಸಿತ

ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಗೌತಮ್ ಅದಾನಿ ಗುರಿಯಾಗಿಸಿಕೊಂಡಿದ್ದ ಅಮೆರಿಕಾ ಮೂಲದ ಸಂಸ್ಥೆ ಹಿಂಡನ್‌ಬರ್ಗ್ ಇದೀಗ ಟ್ವಿಟ್ಟರ್‌ ಮಾಜಿ ಸಿಇಒ ಜ್ಯಾಕ್ ಡಾರ್ಸಿಯನ್ನು ಗುರಿಯಾಗಿಸಿಕೊಂಡಿದ್ದು, ಹಲವು ಆರೋಪಗಳನ್ನು ಮಾಡಿದೆ. ಆರೋಪದ ಬೆನ್ನಲ್ಲೇ ಬ್ಲಾಕ್‌ ಇಂಕ್‌ ಷೇರುಗಳಲ್ಲಿ ಭಾರೀ ಕುಸಿತಗಳು ಕಂಡು ಬಂದಿದೆ.
ಟ್ವಿಟ್ಟರ್‌ ಮಾಜಿ ಸಿಇಒ ಜ್ಯಾಕ್ ಡಾರ್ಸಿ
ಟ್ವಿಟ್ಟರ್‌ ಮಾಜಿ ಸಿಇಒ ಜ್ಯಾಕ್ ಡಾರ್ಸಿ
Updated on

ನ್ಯೂಯಾರ್ಕ್: ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಗೌತಮ್ ಅದಾನಿ ಗುರಿಯಾಗಿಸಿಕೊಂಡಿದ್ದ ಅಮೆರಿಕಾ ಮೂಲದ ಸಂಸ್ಥೆ ಹಿಂಡನ್‌ಬರ್ಗ್ ಇದೀಗ ಟ್ವಿಟ್ಟರ್‌ ಮಾಜಿ ಸಿಇಒ ಜ್ಯಾಕ್ ಡಾರ್ಸಿಯನ್ನು ಗುರಿಯಾಗಿಸಿಕೊಂಡಿದ್ದು, ಹಲವು ಆರೋಪಗಳನ್ನು ಮಾಡಿದೆ. ಆರೋಪದ ಬೆನ್ನಲ್ಲೇ ಬ್ಲಾಕ್‌ ಇಂಕ್‌ ಷೇರುಗಳಲ್ಲಿ ಭಾರೀ ಕುಸಿತಗಳು ಕಂಡು ಬಂದಿದೆ.

ನಿನ್ನೆಯಷ್ಟೇ ಹೊಸ ವಂಚನೆ ಪ್ರಕರಣ ಬಯಲು ಮಾಡುತ್ತೇವೆ ಎಂದು ಹಿಂಡನ್‌ಬರ್ಗ್ ಹೇಳಿತ್ತು. ಇದರಂತೆ ಟ್ವಿಟ್ಟರ್ ಮಾಜಿ ಸಿಇಒ ಜ್ಯಾಕ್ ಪ್ಯಾಟ್ರಿಕ್ ಡಾರ್ಸಿಯನ್ನು ಗುರಿಯಾಗಿಸಿಕೊಂಡು ಹಲವು ಆರೋಪಗಳನ್ನು ಮಾಡಿದೆ.

ಬ್ಲಾಕ್ ಯಾರಿಗೆ ಸೇವೆ ಸಲ್ಲಿಸುತ್ತಿದೆ ಎಂದು ಹೇಳುತ್ತಿದೆಯೋ ಆ ಜನರನ್ನೇ ಶೋಷಣೆಗೆ ಒಳಪಡಿಸುತ್ತಿದೆ ಎಂದು ಹಿಂಡನ್‌ಬರ್ಗ್ ಆರೋಪ ಮಾಡಿದೆ.

ಸಂಸ್ಥೆಯು ಮ್ಯಾಜಿಕ್ ಎಂಬ ಪದವನ್ನು ತಪ್ಪಾಗಿ ಬಳಸುತ್ತಿದೆ. ಗ್ರಾಹಕರು ಮತ್ತು ಸರ್ಕಾರದ ವಿರುದ್ಧದ ಹಗರಣಗಳಿಗೆ ಸಹಾಯ ಮಾಡುವಲ್ಲಿ ಸಂಸ್ಥೆಯು ಸಾಮರ್ಥ್ಯವನ್ನು ಹೊಂದಿದೆ. ಬ್ಲಾಕ್ ಸಂಸ್ಥೆಯು ಹೊಸ ತಂತ್ರಜ್ಞಾನವನ್ನು ಅವಲಡಿಸಿಕೊಳ್ಳುವ ಬದಲಾಗಿ, ರೆಗ್ಯೂಲೇಷನ್‌ಗಳನ್ನು ಪಾಲಿಸದಿರುವುದು, ಸಾಲದ ವಿಚಾರದಲ್ಲಿ ಭ್ರಷ್ಟಾಚಾರ, ಹೊಸ ಆವಿಷ್ಕಾರಗಳಿಗೆ ಶುಲ್ಕ, ಹಣದುಬ್ಬರದ ನಡುವೆ ಜನರನ್ನು ಮೋಸ ಮಾಡುವುದರ ವಿಚಾರದಲ್ಲಿ ಮ್ಯಾಜಿಕ್ ಅನ್ನು ಮಾಡಿದೆ ಎಂದು ಹಿಂಡನ್‌ಬರ್ಗ್ ಆರೋಪಿಸಿದೆ.

ಬ್ಲಾಕ್ ಸಂಸ್ಥೆಯಲ್ಲಿ ವಂಚನೆಗೆ ಪ್ರೋತ್ಸಾಹ, ಬೆಂಬಲವನ್ನು ನೀಡಿದ ಆರೋಪದಲ್ಲಿ ಟ್ವಿಟ್ಟರ್ ಮಾಜಿ ಸಿಇಒ ಜ್ಯಾಕ್ ಪ್ಯಾಟ್ರಿಕ್ ಡಾರ್ಸಿ ವಿರುದ್ಧ ಹಿಂಡನ್‌ಬರ್ಗ್ ದೂರು ದಾಖಲಿಸಿದೆ.

ಟ್ವಿಟ್ಟರ್ ಸಹಸಂಸ್ಥಾಪಕರಾದ ಜ್ಯಾಕ್ ಡಾರ್ಸಿ 2015ರಿಂದ 2021ರವರೆಗೆ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಜ್ಯಾಕ್ ಪ್ಯಾಟ್ರಿಕ್ ಡಾರ್ಸಿ ಬಿಲಿಯನ್ ಡಾಲರ್ ಈಕ್ವಿಟಿಗಳನ್ನು ಮಾರಾಟ ಮಾಡಿ ಲಾಭವನ್ನು ಪಡೆದಿದ್ದಾರೆ ಎಂದು ಹಿಂಡನ್‌ಬರ್ಗ್ ಹೇಳಿಕೊಂಡಿದೆ.

ಜ್ಯಾಕ್ ಡಾರ್ಸಿ ಹಾಗೂ ಜೇಮ್ಸ್ ಮ್ಯಾಕೆಲ್ವಿ ಜೊತೆಯಾಗಿ ಒಂದು ಬಿಲಿಯನ್ ಡಾಲರ್‌ಗೂ ಹೆಚ್ಚಿನ ಸ್ಟಾಕ್‌ಗಳನ್ನು ಕೋವಿಡ್ ಸಂದರ್ಭದಲ್ಲಿ ಮಾರಾಟ ಮಾಡಿದ್ದಾರೆ. ಹಗರಣದ ಬೆಂಬಲದಿಂದಾಗಿ ಬ್ಲಾಕ್ ಸಂಸ್ಥೆಯ ಸ್ಟಾಕ್‌ಗಳು ಏರಿಕೆಯಾಗಿದೆ ಎಂದು ಆರೋಪ ಮಾಡಲಾಗಿದೆ. ಈ ವಂಚನೆ ಪ್ರಕರಣದಲ್ಲಿ ಸಿಎಫ್‌ಒ ಅಮೃತಾ ಅಹುಜಾ, ಕ್ಯಾಷ್‌ ಆಪ್‌ನ ಮುಖ್ಯ ನಿರ್ವಾಹಕ ಬ್ರಿಯಾನ್ ಗ್ರಾಸ್ಸಡೊನಿಯಾ ಹೆಸರು ಕೂಡಾ ಉಲ್ಲೇಖ ಮಾಡಲಾಗಿದೆ.

ತಾನು ಶೋಷಣೆ ಮಾಡುವ ಜನರ ಮೇಲೆ ಕಾಳಜಿ ಇದೆ ಎಂಬಂತೆ ತೋರ್ಪಡಿಸಿಕೊಳ್ಳುವ ಜ್ಯಾಕ್ ವೈಯಕ್ತಿಕವಾಗಿ ಬಿಲಿಯನ್ ಡಾಲರ್ ಸಂಪತ್ತು ವೃದ್ಧಿಸಿಕೊಂಡಿದ್ದಾರೆ. ಡಾರ್ಸಿ ಹಾಗೂ ಮುಖ್ಯ ಅಧಿಕಾರಿಗಳು ಈಗಾಗಲೇ ಸಾಂಕ್ರಾಮಿಕ ಸಂದರ್ಭದಲ್ಲಿ ಒಂದು ಬಿಲಿಯನ್ ಡಾಲರ್ ಈಕ್ವಿಟಿ ಮಾರಾಟ ಮಾಡಿದ್ದಾರೆ. ಉಳಿದ ಜನರಿಗೆ ಏನಾಗುತ್ತದೆ ಎಂಬ ಚಿಂತನೆ ನಡೆಸದೆ ತಮ್ಮನ್ನು ತಾವು ಉಳಿಸಿಕೊಳ್ಳುವ ಆಟವಾಡಿದ್ದಾರೆ ಎಂದು ಹಿಂಡನ್‌ಬರ್ಗ್ ವರದಿಯು ಆರೋಪಿಸಿದೆ.

ಷೇರುಗಳಲ್ಲಿ ಕುಸಿತ
ವರದಿಯು ಪ್ರಕಟವಾದ ಬಳಿಕ ಪ್ರೀಮಾರ್ಕೆಟ್‌ ವ್ಯಾಪಾರದಲ್ಲಿ ಬ್ಲಾಕ್‌ ಇಂಕ್‌ನ ಷೇರುಗಳು ಶೇ. 18-20ರಷ್ಟು ಕುಸಿತ ಕಂಡು ಬಂದಿತ್ತು. ಮಾರುಕಟ್ಟೆಗಳು ತೆರೆದಾಗ ಒಂದು ಹಂತದಲ್ಲಿ ಶೇ. 22ರಷ್ಟು ನಷ್ಟ ಅನುಭವಿಸಿದವು. ಕೊನೆಗೆ ಗುರುವಾರದ ದಿನದಂತ್ಯಕ್ಕೆ ಶೇ.15ರಷ್ಟು ನಷ್ಟ ಅನುಭವಿಸಿವೆ. ಷೇರುಗಳ ಕುಸಿತದಿಂದ ಕಂಪನಿಯು ಕೋಟ್ಯಾಂತರ ಡಾಲರ್‌ ನಷ್ಟವನ್ನು ಅನುಭವಿಸಿದೆ ಎಂದು ತಿಳಿದುಬಂದಿದೆ.

ಏನಿದು ಬ್ಲಾಕ್ ಇಂಕ್?
ಉದ್ಯಮಿ ಜ್ಯಾಕ್ ಪ್ಯಾಟ್ರಿಕ್ ಡಾರ್ಸಿ ಬ್ಲಾಕ್ ಇಂಕ್ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದಾರೆ. ಇದು ಗ್ರಾಹಕರು ಮತ್ತು ಉದ್ಯಮಗಳಿಗೆ ಮೊಬೈಲ್‌ ನೆಟ್‌ ಬ್ಯಾಂಕಿಂಗ್ ಬಳಸಲು ಮತ್ತು ಪಾವತಿ ಮಾಡುವ ಅವಕಾಶವನ್ನು ಬ್ಲಾಕ್ ಇಂಕ್ ನೀಡುತ್ತದೆ. ಸ್ಕ್ವೇರ್ ಸಂಸ್ಥೆಯನ್ನು 2009ರಲ್ಲಿ ಆರಂಭ ಮಾಡಲಾಗಿದೆ. ಕ್ರಾಂತಿಕಾರಿ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸುವ ಪ್ರಯತ್ನವನ್ನು ಮಾಡಲಾಗಿದೆ. ಸ್ಮಾರ್ಟ್‌ಫೋನ್‌ನ ಹೆಡ್‌ಫೋನ್ ಜ್ಯಾಕ್‌ಗೆ ಪ್ಲಗ್ ಮಾಡಬಹುದಾದ ಸಣ್ಣ ಕಾರ್ಡ್ ರೀಡರ್ ಅನ್ನು ಬಳಸಿಕೊಂಡು ಜನರು ಮತ್ತು ಮಾರಾಟಗಾರರು ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಸ್ವೀಕರಿಸಲು ಇದು ಸರಳವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com