ಇರಾಕ್ ಆಕ್ರಮಣಕ್ಕೆ ಒಪ್ಪಿಗೆ ನೀಡಿದ್ದ ಕ್ರಮ ರದ್ದುಗೊಳಿಸಲು ಅಮೇರಿಕ ಸೆನೆಟ್ ನಲ್ಲಿ 20 ವರ್ಷಗಳ ಬಳಿಕ ಮತದಾನ 

ಇರಾಕ್ ಆಕ್ರಮಣಕ್ಕೆ 2002 ರಲ್ಲಿ ಒಪ್ಪಿಗೆ ನೀಡಿದ್ದ ಕ್ರಮವನ್ನು ರದ್ದುಗೊಳಿಸುವುದಕ್ಕಾಗಿ ಅಮೇರಿಕ ಸೆನೆಟ್ ನಲ್ಲಿ 20 ವರ್ಷಗಳ ಬಳಿಕ ಮತದಾನ ನಡೆಯುತ್ತಿದೆ. 
ಯುಎಸ್
ಯುಎಸ್
Updated on

ವಾಷಿಂಗ್ ಟನ್: ಇರಾಕ್ ಆಕ್ರಮಣಕ್ಕೆ 2002 ರಲ್ಲಿ ಒಪ್ಪಿಗೆ ನೀಡಿದ್ದ ಕ್ರಮವನ್ನು ರದ್ದುಗೊಳಿಸುವುದಕ್ಕಾಗಿ ಅಮೇರಿಕ ಸೆನೆಟ್ ನಲ್ಲಿ 20 ವರ್ಷಗಳ ಬಳಿಕ ಮತದಾನ ನಡೆಯುತ್ತಿದೆ. 

ಈ ಮತದಾನ ಇರಾಕ್ ನಲ್ಲಿ ಅಮೇರಿಕಾದ ಅಧ್ಯಕ್ಷರು ಸೇನಾ ಪಡೆ ಅಥವಾ ಬಲಪ್ರಯೋಗ ಮಾಡುವುದಕ್ಕೆ ಇದ್ದ ಅವಕಾಶವನ್ನು ಕೊನೆಗಾಣಿಸುವುದಕ್ಕೆ ಅವಕಾಶವನ್ನು ಕಲ್ಪಿಸಿ, ಈ ಯುದ್ಧದ ಅಧಿಕಾರವನ್ನು ಕಾಂಗ್ರೆಸ್ ಗೆ ಮರಳಿ ನೀಡುವ ಸಾಧ್ಯತೆಗಳಿಗೆ ದಾರಿ ಮಾಡಿಕೊಡಲಿದೆ.
 
2003 ರಲ್ಲಿ ಇರಾಕ್ ನ ಮೇಲೆ ಅಮೇರಿಕ ಆಕ್ರಮಣ ಮಾಡಿತ್ತು. ಇರಾಕ್ ಯುದ್ಧ ವರ್ಷಗಳ ಹಿಂದೆ ಕೊನೆಗೊಂಡಿದೆ. ಈಗ ರದ್ದುಮಾಡಲಾಗುತ್ತಿರುವ ಕ್ರಮಗಳಿಂದಾಗಿ ಸೇನಾ ಪಡೆಗಳ ನಿಯೋಜನೆಯಲ್ಲಿ ಯಾವುದೇ ಬದಲಾವಣೆಯೂ ಆಗುವುದಿಲ್ಲ.  ಇರಾಕ್ ನಲ್ಲಿ ಅಲ್ಲಿನ ಸರ್ಕಾರದ ಆಹ್ವಾನದ ಮೇರೆಗೆ ಅಮೇರಿಕಾದ 2,500 ತುಕಡಿಗಳಿದ್ದು, ಸ್ಥಳೀಯ ಪಡೆಗಳಿಗೆ ಸಲಹೆ ನೀಡುತ್ತಿವೆ.

ಈಗ ಉಭಯಪಕ್ಷೀಯ ಶಾಸನವು ಅಮೇರಿಕಾ ನೇತೃತ್ವದ ಗಲ್ಫ್ ಯುದ್ಧವನ್ನು ಅನುಮೋದಿಸಿದ 1991 ರ ಕ್ರಮವನ್ನು ಸಹ ರದ್ದುಗೊಳಿಸುತ್ತದೆ. ಎರಡೂ ಪಕ್ಷಗಳಲ್ಲಿನ ಶಾಸಕರು ಯುಎಸ್ ಮಿಲಿಟರಿ ಸ್ಟ್ರೈಕ್‌ಗಳು ಮತ್ತು ನಿಯೋಜನೆಗಳ ಮೇಲೆ ಕಾಂಗ್ರೆಸ್ ಅಧಿಕಾರವನ್ನು ಹಿಮ್ಮೆಟ್ಟಿಸಲು ಹೆಚ್ಚು ಪ್ರಯತ್ನಿಸುತ್ತಿದ್ದಾರೆ ಮತ್ತು ಎರಡು ದಶಕಗಳ ಹಿಂದೆ ಇರಾಕ್ ಯುದ್ಧಕ್ಕೆ ಮತ ಹಾಕಿದ ಕೆಲವು ಶಾಸಕರು ಈಗ ಅದು ತಪ್ಪು ಎಂಬ ಅಭಿಪ್ರಾಯ ಹೊಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com