ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಗಳು ಪರಸ್ಪರ ಢಿಕ್ಕಿ: 9 ಅಮೆರಿಕ ಯೋಧರು ಸಾವು

ಅಮೆರಿಕ ಸೇನೆಯ ಎರಡು ಹೆಲಿಕಾಪ್ಟರ್ ಗಳು ಪರಸ್ಪರ ಡಿಕ್ಕಿಯಾಗಿ 9 ಯೋಧರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೆಲಿಕಾಪ್ಟರ್ ಸಾಂದರ್ಭಿಕ ಚಿತ್ರ
ಹೆಲಿಕಾಪ್ಟರ್ ಸಾಂದರ್ಭಿಕ ಚಿತ್ರ
Updated on

ವಾಷಿಂಗ್ಟನ್: ಅಮೆರಿಕ ಸೇನೆಯ ಎರಡು ಹೆಲಿಕಾಪ್ಟರ್ ಗಳು ಪರಸ್ಪರ ಡಿಕ್ಕಿಯಾಗಿ 9 ಯೋಧರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕೆಂಟುಕಿ ರಾಜ್ಯದ ಪೋರ್ಟ್ ಕ್ಯಾಂಪ್ ಬೆಲ್ ಎಂಬಲ್ಲಿ ಈ ದುರ್ಘಟನೆ ನಡೆದಿದೆ.  ಹೆಲಿಕಾಪ್ಟರ್ ನಲ್ಲಿದ್ದ ಎಲ್ಲ 9 ಯೋಧರು ಮೃತಪಟ್ಟಿದ್ದಾರೆ ಎಂದು ಬ್ರಿಗೇಡಿಯರ್ ಜನರಲ್ ಜಾನ್ ಲುಬಾಸ್ ತಿಳಿಸಿದ್ದಾರೆ.

ತರಬೇತಿ ವೇಳೆಯಲ್ಲಿ ಎರಡೂ ಹೆಲಿಕಾಪ್ಟರ್ ಗಳು, ಪೈಲಟ್ ಗಳ ತಪ್ಪಿನಿಂದ ಪರಸ್ಪರ ಢಿಕ್ಕಿಯಾಗಿ ಆಕಾಶದಲ್ಲೇ ಸ್ಫೋಟವಾಗಿ ನೆಲಕ್ಕಪ್ಪಳಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ಕೆಂಟುಕಿ ಗವರ್ನರ್ ಆ್ಯಂಡಿ ಬೇಷರ್ ಆಘಾತ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com