ಕಾಳಿ ದೇವಿಗೆ ಅವಹೇಳನ: ಉಕ್ರೇನ್‌ನ ಉಪ ವಿದೇಶಾಂಗ ಸಚಿವರಿಂದ ಕ್ಷಮೆಯಾಚನೆ!

ಉಕ್ರೇನ್ ರಕ್ಷಣಾ ಸಚಿವಾಲಯವು ಕಾಳಿ ದೇವಿಯ ಅವಹೇಳನ ಮಾಡಿರುವ ಬಗ್ಗೆ ಉಪ ವಿದೇಶಾಂಗ ಸಚಿವ ಎಮಿನ್ ಝಪರೋವಾ ಇಂದು ವಿಷಾದ ವ್ಯಕ್ತಪಡಿಸಿದ್ದಾರೆ. ಈ ಕೃತ್ಯಕ್ಕೆ ಕ್ಷಮೆಯಾಚಿಸಿರುವ ಅವರು ನಾವು 'ವಿಶಿಷ್ಟ ಭಾರತೀಯ ಸಂಸ್ಕೃತಿ'ಯನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.
ಎಮಿನ್ ಝಪರೋವಾ
ಎಮಿನ್ ಝಪರೋವಾ
Updated on

ನವದೆಹಲಿ: ಉಕ್ರೇನ್ ರಕ್ಷಣಾ ಸಚಿವಾಲಯವು ಕಾಳಿ ದೇವಿಯ ಅವಹೇಳನ ಮಾಡಿರುವ ಬಗ್ಗೆ ಉಪ ವಿದೇಶಾಂಗ ಸಚಿವ ಎಮಿನ್ ಝಪರೋವಾ ಇಂದು ವಿಷಾದ ವ್ಯಕ್ತಪಡಿಸಿದ್ದಾರೆ. ಈ ಕೃತ್ಯಕ್ಕೆ ಕ್ಷಮೆಯಾಚಿಸಿರುವ ಅವರು ನಾವು 'ವಿಶಿಷ್ಟ ಭಾರತೀಯ ಸಂಸ್ಕೃತಿ'ಯನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.

ಕಾಳಿ ದೇವಿಗೆ ಅವಹೇಳನ ಮಾಡಿರುವುದಕ್ಕೆ ಭಾರತೀಯರು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಉಕ್ರೇನ್‌ನ ರಕ್ಷಣಾ ಸಚಿವಾಲಯವು ಕಾಳಿ ದೇವಿಯನ್ನು ತಪ್ಪಾಗಿ ನಿರೂಪಿಸಿದ್ದಕ್ಕಾಗಿ ನಾವು ವಿಷಾದಿಸುತ್ತೇವೆ. ಉಕ್ರೇನ್ ಮತ್ತು ಅದರ ಜನರು ಅನನ್ಯ ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತಾರೆ. ಅಲ್ಲದೆ ಭಾರತದ ಬೆಂಬಲವನ್ನು ಹೆಚ್ಚು ಪ್ರಶಂಸಿಸಿದ್ದಾರೆ. ಉಕ್ರೇನ್ ಪರಸ್ಪರ ಗೌರವ ಮತ್ತು ಸ್ನೇಹದ ಉತ್ಸಾಹದಲ್ಲಿ ಸಹಕಾರವನ್ನು ಹೆಚ್ಚಿಸಲು ನಿರ್ಧರಿಸುತ್ತದೆ ಎಂದಿದ್ದಾರೆ.

ಉಕ್ರೇನ್ ರಕ್ಷಣಾ ಸಚಿವಾಲಯದ ವಿವಾದಾತ್ಮಕ ಟ್ವೀಟ್ ಅನ್ನು ಈಗ ತೆಗೆದುಹಾಕಲಾಗಿದೆ. ಇದರಲ್ಲಿ ಕಾಳಿ ದೇವಿಯ ವಿಕೃತ ಚಿತ್ರವನ್ನು ಸ್ಫೋಟದ ಹೊಗೆಯ ಮಧ್ಯದಲ್ಲಿ 'ಕಲಾಕೃತಿ' ಎಂದು ಬರೆಯಲಾಗಿತ್ತು. ಈ ಚಿತ್ರವನ್ನು ಏಪ್ರಿಲ್ 30ರಂದು ಟ್ವೀಟ್ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಕ್ರೋಶಕ್ಕೆ ಕಾರಣವಾಯಿತು.

ಏಪ್ರಿಲ್ 30ರಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ಅವರು ಉಕ್ರೇನ್ ರಕ್ಷಣಾ ಸಚಿವಾಲಯದ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ. ಕಾಳಿ ದೇವಿಯ ಚಿತ್ರವನ್ನು ಪ್ರಚಾರಕ್ಕಾಗಿ ಮಾಡಿದ ಪೋಸ್ಟರ್‌ನಲ್ಲಿ ಬಳಸಲಾಗಿದೆ. ಇದು ಜಗತ್ತಿನಾದ್ಯಂತ ಹಿಂದೂ ಸಮುದಾಯದ ಭಾವನೆಗಳ ಮೇಲಿನ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಅಲ್ಲದೆ ಕೆಲವು ಟ್ವಿಟ್ಟರ್ ಬಳಕೆದಾರರು ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಒತ್ತಾಯಿಸಿದ್ದರು. ಜೈಶಂಕರ್ ಅವರನ್ನು ಟ್ಯಾಗ್ ಮಾಡಿದ ಬಳಕೆದಾರರು ತಮ್ಮ ಟ್ವೀಟ್‌ನಲ್ಲಿ, 'ಮಾ ಕಾಳಿಯನ್ನು ತಪ್ಪಾಗಿ ಪ್ರತಿನಿಧಿಸುವ ಈ ಅವಹೇಳನಕಾರಿ ಪೋಸ್ಟ್ ಅನ್ನು ದಯವಿಟ್ಟು ಗಮನಿಸಿ' ಎಂದು ಹೇಳಿದ್ದರು.

ಕಳೆದ ವರ್ಷ ಫೆಬ್ರವರಿಯಲ್ಲಿ ಉಕ್ರೇನ್ ಬಿಕ್ಕಟ್ಟು ಪ್ರಾರಂಭವಾದಾಗಿನಿಂದ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಹಲವಾರು ಬಾರಿ ಫೋನ್‌ನಲ್ಲಿ ಮಾತನಾಡಿದ್ದರು. ಅಲ್ಲದೆ ಇದು ಯುದ್ಧದ ಕಾಲವಲ್ಲ. ಮಾತುಕತೆ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದರು.

ಜಪರೋವಾ ಅವರು ಏಪ್ರಿಲ್ 9ರಂದು ಭಾರತಕ್ಕೆ ಭೇಟಿ ನೀಡಿದ್ದರು. ಕಳೆದ ವರ್ಷ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಪ್ರಾರಂಭವಾದ ನಂತರ ಪೂರ್ವ ಯುರೋಪಿಯನ್ ರಾಷ್ಟ್ರದ (ಉಕ್ರೇನ್) ಮಂತ್ರಿಯ ಮೊದಲ ಅಧಿಕೃತ ವಿದೇಶ ಪ್ರವಾಸ ಇದಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com