ಆಕಸ್ಮಿಕವಾಗಿ ತನ್ನದೇ ನಗರದ ಮೇಲೆ ಬಾಂಬ್ ಸ್ಫೋಟಿಸಿದ ರಷ್ಯಾ!

ಉಕ್ರೇನ್ ಗಡಿಯಲ್ಲಿರುವ ರಷ್ಯಾದ ನಗರವೊಂದರಲ್ಲಿ ನಿನ್ನೆ ಪ್ರಬಲ ಬಾಂಬ್ ಸ್ಫೋಟವಾಗಿದೆ. ಆದರೆ, ಅಲ್ಲಿನ ನಿವಾಸಿಗಳು ಇದು ಶತ್ರುಗಳ ಪ್ರತೀಕಾರ ಎಂದು ಭಾವಿಸಿದರೆ, ತನ್ನದೇ ಆದ ಯುದ್ಧವಿಮಾನಗಳಿಂದ ಆಕಸ್ಮಿಕವಾಗಿ ಬೀಳಿಸಿದ ಬಾಂಬ್ ಎಂದು ರಷ್ಯಾ ಮಿಲಿಟರಿ ಒಪ್ಪಿಕೊಂಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಾಸ್ಕೋ: ಉಕ್ರೇನ್ ಗಡಿಯಲ್ಲಿರುವ ರಷ್ಯಾದ ನಗರವೊಂದರಲ್ಲಿ ನಿನ್ನೆ ಪ್ರಬಲ ಬಾಂಬ್ ಸ್ಫೋಟವಾಗಿದೆ. ಆದರೆ, ಅಲ್ಲಿನ ನಿವಾಸಿಗಳು ಇದು ಶತ್ರುಗಳ ಪ್ರತೀಕಾರ ಎಂದು ಭಾವಿಸಿದರೆ, ತನ್ನದೇ ಆದ ಯುದ್ಧವಿಮಾನಗಳಿಂದ ಆಕಸ್ಮಿಕವಾಗಿ ಬೀಳಿಸಿದ ಬಾಂಬ್ ಎಂದು ರಷ್ಯಾ ಮಿಲಿಟರಿ ಒಪ್ಪಿಕೊಂಡಿದೆ. 

ಗಡಿಯಿಂದ ಪೂರ್ವಕ್ಕೆ 40 ಕಿಲೋಮೀಟರ್ ದೂರದಲ್ಲಿರುವ  ಬೆಲ್ಗೊರೊಡ್ ನಲ್ಲಿ ನಿಯಮಿತವಾಗಿ ಡ್ರೋನ್ ದಾಳಿ ನಡೆಸಲಾಗುತ್ತಿದೆ ಎಂದು ರಷ್ಯಾದ ಆಡಳಿತ ಉಕ್ರೇನ್ ಮಿಲಿಟರಿಯನ್ನು ದೂಷಿಸುತಿತ್ತು. ಆದರೆ, ಗುರುವಾರ ತಡರಾತ್ರಿ ಸಂಭವಿಸಿದ ಸ್ಫೋಟವು ಪ್ರಬಲವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 

ಸ್ಫೋಟದ ನಂತರ ಅಪಾರ್ಟ್ ಮೆಂಟ್ ಕಟ್ಟಡಗಳು ನಡುಗುವಂತೆ ಭಾಸವಾಯಿತು. ಅಂಗಡಿಯ ಛಾವಣಿ ಮೇಲೆ ಕಾರೊಂದನ್ನು ಎಸೆಯಲಾಯಿತು. ಕಟ್ಟಡಗಳು ಕಿಟಕಿಗಳು ಮುರಿದು ಹಲವಾರು ಕಾರುಗಳಿಗೆ ಹಾನಿ ಉಂಟಾಯಿತು. ಇಬ್ಬರು ನಿವಾಸಿಗಳು ಗಾಯಗೊಂಡು, ಮತ್ತೋರ್ವವನ್ನು ಅಧಿಕ ರಕ್ತದೊತ್ತಡದಿಂದ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. 

ಆದರೆ, ಇದು ತನ್ನದೇ ಆದ Su-34 ಬಾಂಬರ್‌ಗಳಿಂದ ಆಕಸ್ಮಿಕವಾಗಿ ಕೈಬಿಟ್ಟ ಆಯುಧದಿಂದ ಸ್ಫೋಟ ಸಂಭವಿಸಿದೆ ಎಂದು ಘಟನೆ ನಡೆದ ಒಂದು ಗಂಟೆಯ ನಂತರ ರಷ್ಯಾ ರಕ್ಷಣಾ ಸಚಿವಾಲಯ ಒಪ್ಪಿಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com