ಬೆಲ್‌ಗ್ರೇಡ್ ಪ್ರಾಥಮಿಕ ಶಾಲೆಯಲ್ಲಿ ಗುಂಡಿಕ್ಕಿ 8 ಮಕ್ಕಳು, ಭದ್ರತಾ ಸಿಬ್ಬಂದಿ ಹತ್ಯೆ, ಹದಿಹರೆಯದ ವಿದ್ಯಾರ್ಥಿ ಬಂಧನ

ಸರ್ಬಿಯಾದ ರಾಜಧಾನಿ ಬೆಲ್‌ಗ್ರೇಡ್‌ನಲ್ಲಿ ಬುಧವಾರ ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ 8 ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ದಾಳಿ  ನಡೆಸಿದ ಶಂಕಿತ ಹದಿಹರೆಯದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯು ಬಾಲ್ಕನ್ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ.
ಗುಂಡಿನ ದಾಳಿ ನಡೆದ ಶಾಲೆ ಬಳಿಯಿರುವ ಪೊಲೀಸರ ಚಿತ್ರ
ಗುಂಡಿನ ದಾಳಿ ನಡೆದ ಶಾಲೆ ಬಳಿಯಿರುವ ಪೊಲೀಸರ ಚಿತ್ರ

ಬೆಲ್‌ಗ್ರೇಡ್: ಸರ್ಬಿಯಾದ ರಾಜಧಾನಿ ಬೆಲ್‌ಗ್ರೇಡ್‌ನಲ್ಲಿ ಬುಧವಾರ ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ 8 ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ದಾಳಿ  ನಡೆಸಿದ ಶಂಕಿತ ಹದಿಹರೆಯದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯು ಬಾಲ್ಕನ್ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ.

ಬೆಲ್‌ಗ್ರೇಡ್‌ನ ಡೌನ್‌ಟೌನ್ ವ್ರಾಕಾರ್ ಜಿಲ್ಲೆಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 8:40ಕ್ಕೆ ಗುಂಡಿನ ದಾಳಿ ಸಂಭವಿಸಿದ್ದು, ಘಟನೆಯಲ್ಲಿ 8 ಮಕ್ಕಳು ಮತ್ತು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಆರು ಮಕ್ಕಳು ಮತ್ತು ಒಬ್ಬ ಶಾಲಾ ಶಿಕ್ಷಕ ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ಘಟನೆ ತಿಳಿಯುತ್ತಿದ್ದಂತೆಯೇ ಪೊಲೀಸ್ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ದುರಂತಕ್ಕೆ ಕಾರಣವಾದ ಎಲ್ಲಾ ಸಂಗತಿ ತಿಳಿಯುವ ನಿಟ್ಟಿನಲ್ಲಿ ಕಾರ್ಯೋನ್ಮಖವಾಗಿವೆ.

ಶಾಲೆಯ ಭದ್ರತಾ ಸಿಬ್ಬಂದಿ  ಶೂಟರ್‌ನ ಮುಂದೆ ನಿಲ್ಲುವ ಮೂಲಕ ಹೆಚ್ಚಿನ ಸಾವುಗಳನ್ನು ತಡೆಗಟ್ಟಿರುವ ಸಾಧ್ಯತೆಯಿದೆ ಎಂದು ಗುಂಡಿನ ದಾಳಿ ನಡೆದಿದ್ದ  ಬೆಲ್‌ಗ್ರೇಡ್‌ನ ವ್ರಾಕಾರ್ ಜಿಲ್ಲೆಯ ಅಧ್ಯಕ್ಷ ಮಿಲನ್ ನೆಡೆಲ್ಜ್ಕೋವಿಕ್ ತಿಳಿಸಿದ್ದಾರೆ.ಪೊಲೀಸರು ಕಟ್ಟಡ  ಸುತ್ತುವರಿದಿದ್ದರಿಂದ ಆತಂಕಗೊಂಡ ಪೋಷಕರು ಶಾಲೆಯ ಬಳಿ ತಮ್ಮ ಮಕ್ಕಳಿಗಾಗಿ ಕಾಯುತ್ತಿರುವ ದೃಶ್ಯ ಟಿವಿ ಚಾನೆಲ್ ಗಳಲ್ಲಿ ಕಂಡುಬಂದಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com