ಫುಟಿನ್ ಹತ್ಯೆಗೆ ಉಕ್ರೇನ್ ಯತ್ನ: ರಷ್ಯಾ ಆರೋಪ
ಮಾಸ್ಕೋ: ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡುವ ಪ್ರಯತ್ನದಲ್ಲಿ ಉಕ್ರೇನ್ ಎರಡು ಡ್ರೋನ್‌ಗಳೊಂದಿಗೆ ಕ್ರೆಮ್ಲಿನ್ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದೆ ಎಂದು ರಷ್ಯಾದ ಅಧಿಕಾರಿಗಳು ಆರೋಪಿಸಿದ್ದಾರೆ.
ದಾಳಿಯಲ್ಲಿ ಎರಡು ಡ್ರೋನ್ ಬಳಸಲಾಗಿದ್ದು, "ಯೋಜಿತ ಭಯೋತ್ಪಾದಕ ಕ್ರಮ" ಎಂದು ಪರಿಗಣಿಸುವುದಾಗಿ ಕ್ರೆಮ್ಲಿನ್ ಹೇಳಿದೆ ಎಂದು ಆರ್ ಐಎ ವರದಿ ಮಾಡಿದೆ.
ರಷ್ಯಾದ ರಕ್ಷಣಾ ಪಡೆಯಿಂದ ದಾಳಿಯನ್ನು ನಿಷ್ಕ್ರೀಯಗೊಳಿಸಲಾಗಿದೆ ಎಂದು ಕ್ರೆಮ್ಲಿನ್ ಉಲ್ಲೇಖಿಸಿದೆ. ದಾಳಿ ವೇಳೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆಗಳು ಹೇಳಿಕೆಯಲ್ಲಿ ತಿಳಿಸಿವೆ.
ದಾಳಿ ವೇಳೆಯಲ್ಲಿ ಪುಟಿನ್ ಕ್ರೆಮ್ಲಿನ್‌ನಲ್ಲಿ ಇರಲಿಲ್ಲ ಮತ್ತು ನೊವೊ-ಒಗರಿಯೋವೊ ನಿವಾಸದಿಂದ ಕೆಲಸ ಮಾಡುತ್ತಿದ್ದರು ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ರಷ್ಯಾದ ರಾಜ್ಯ ಸುದ್ದಿ ಸಂಸ್ಥೆ ಆರ್ ಎಐಗೆ ತಿಳಿಸಿದ್ದಾರೆ. ಪುಟಿನ್ ಸುರಕ್ಷಿತವಾಗಿದ್ದಾರೆ ಮತ್ತು ಅವರ ವೇಳಾಪಟ್ಟಿಯಲ್ಲಿ ಯಾವುದೇ ಬದಲಾಗಿಲ್ಲ ಎಂದು ಕ್ರೆಮ್ಲಿನ್ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ