ಇಂಡೋ-ಪೆಸಿಫಿಕ್‌ ಯಶಸ್ಸು, ಭದ್ರತೆ ಇಡೀ ಜಗತ್ತಿಗೆ ಪ್ರಮುಖವಾಗಿದೆ: ಕ್ವಾಡ್ ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ

ಇಂಡೋ-ಪೆಸಿಫಿಕ್ ಪ್ರದೇಶ ಜಾಗತಿಕ ವ್ಯಾಪಾರ, ನಾವೀನ್ಯತೆ ಮತ್ತು ಅಭಿವೃದ್ಧಿಯ ಎಂಜಿನ್ ಆಗಿದ್ದು, ಅದರ ಯಶಸ್ಸು ಮತ್ತು ಭದ್ರತೆ ಇಡೀ ಜಗತ್ತಿಗೆ ಪ್ರಮುಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಜೋ- ಬೈಡನ್ ಮತ್ತಿತರರು
ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಜೋ- ಬೈಡನ್ ಮತ್ತಿತರರು

ಹಿರೋಷಿಮಾ: ಇಂಡೋ-ಪೆಸಿಫಿಕ್ ಪ್ರದೇಶ ಜಾಗತಿಕ ವ್ಯಾಪಾರ, ನಾವೀನ್ಯತೆ ಮತ್ತು ಅಭಿವೃದ್ಧಿಯ ಎಂಜಿನ್ ಆಗಿದ್ದು, ಅದರ ಯಶಸ್ಸು ಮತ್ತು ಭದ್ರತೆ ಇಡೀ ಜಗತ್ತಿಗೆ ಪ್ರಮುಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಹಿರೋಷಿಮಾದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬಿಡೆನ್, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಪಾಲ್ಗೊಂಡಿದ್ದ ಕ್ವಾಡ್ ಶೃಂಗ ಸಭೆಯಲ್ಲಿ ಆರಂಭಿಕ ಮಾತುಗಳನ್ನಾಡಿದ ಪ್ರಧಾನಿ ಮೋದಿ, ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಕ್ವಾಡ್ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ. ರಚನಾತ್ಮಕ ಕಾರ್ಯಸೂಚಿ ಮತ್ತು ಪ್ರಜಾಪ್ರಭುತ್ವದ ತತ್ವಗಳ ಆಧಾರದ ಮೇಲೆ ಈ ಒಕ್ಕೂಟ ಮುಂದುವರಿಯುತ್ತಿದೆ ಎಂದು ಅವರು ಹೇಳಿದರು.

ಒಗ್ಗಟ್ಟಿನ ಪ್ರಯತ್ನದೊಂದಿಗೆ ಇಂಡೋ ಫೆಸಿಪಿಕ್ ಮುಕ್ತತೆಗೆ ನಮ್ಮ ಪ್ರಾಯೋಗಿಕ ಆಯಾಮ ನೀಡುತ್ತಿದ್ದೇವೆ. ಈ ಪ್ರದೇಶ ಜಾಗತಿಕ ವ್ಯಾಪಾರ, ನಾವೀನ್ಯತೆ ಮತ್ತು ಅಭಿವೃದ್ಧಿಯ ಎಂಜಿನ್ ಎಂಬುದರಲ್ಲಿ ಸಂದೇಹವಿಲ್ಲ. ಮಾನವ ಕಲ್ಯಾಣ, ಶಾಂತಿ ಮತ್ತು ಸಮೃದ್ಧಿಗಾಗಿ ಕ್ವಾಡ್ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಜಿ7 ಶೃಂಗಸಭೆಯ ಭಾಗವಾಗಿ ಕ್ವಾಡ್ ಶೃಂಗಸಭೆಯು ನಡೆಯಿತು. ಇದನ್ನು ಮೊದಲು ಮೇ 24 ರಂದು ಸಿಡ್ನಿಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದಾಗ್ಯೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಸ್ಟ್ರೇಲಿಯಾ ಪ್ರವಾಸವನ್ನು ಮುಂದೂಡಿದ ನಂತರ ಹಿರೋಷಿಮಾದಲ್ಲಿ ನಡೆಸಲು ನಿರ್ಧರಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com