ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿಯಾಗಿ ಶೇಖ್ ಹಸೀನಾ ಪುತ್ರಿ ಸೈಮಾ ನಾಮನಿರ್ದೇಶನ

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರಿ, ಮಾನಸಿಕ ಆರೋಗ್ಯ ತಜ್ಞ ಸೈಮಾ ವಾಝೇದ್ ಅವರನ್ನು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ವಲಯದ ಮುಂದಿನ ಪ್ರಾದೇಶಿಕ ನಿರ್ದೇಶಕಿಯಾಗಿ ನಾಮನಿರ್ದೇಶನ ಮಾಡಲಾಗಿದೆ.
ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಜೋ ಬೈಡೆನ್, ಶೇಖ್ ಹಸೀನಾ, ಪುತ್ರಿ ಸೈಮಾ
ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಜೋ ಬೈಡೆನ್, ಶೇಖ್ ಹಸೀನಾ, ಪುತ್ರಿ ಸೈಮಾ

ಜಿನಿವಾ: ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರಿ, ಮಾನಸಿಕ ಆರೋಗ್ಯ ತಜ್ಞ ಸೈಮಾ ವಾಝೇದ್ ಅವರನ್ನು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ವಲಯದ ಮುಂದಿನ ಪ್ರಾದೇಶಿಕ ನಿರ್ದೇಶಕಿಯಾಗಿ ನಾಮನಿರ್ದೇಶನ ಮಾಡಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಅಧಿಕಾರಿ ಡಾ ಶಂಭು ಪ್ರಸಾದ್ ಆಚಾರ್ಯ ಇತರ ಅಭ್ಯರ್ಥಿಯಾಗಿದ್ದರು. ಅವರು ನೇಪಾಳದಿಂದ ನಾಮನಿರ್ದೇಶನಗೊಂಡಿದ್ದರು.

ಆಗ್ನೇಯ ಏಷ್ಯಾ ವಲಯದ WHO ಪ್ರಾದೇಶಿಕ ಸಮಿತಿಯ 76ನೇ ಅಧಿವೇಶನದಲ್ಲಿ ಸದಸ್ಯ ರಾಷ್ಟ್ರಗಳು ವಾಝೇದ್ ಅವರನ್ನು ಪ್ರಾದೇಶಿಕ ನಿರ್ದೇಶಕಿ ಹುದ್ದೆಗೆ ನಾಮನಿರ್ದೇಶನ ಮಾಡುವ ಪರವಾಗಿ ಮತ ಚಲಾಯಿಸಿದವು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಟಣೆಯ ಪ್ರಕಾರ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಜನವರಿ 22 ರಿಂದ 27 ರವರೆಗೆ ನಡೆಯುವ 154ನೇ ಅಧಿವೇಶನದಲ್ಲಿ WHO ಕಾರ್ಯಕಾರಿ ಮಂಡಳಿಗೆ ಈ ನಾಮನಿರ್ದೇಶನವನ್ನು ಸಲ್ಲಿಸಲಾಗುತ್ತದೆ.

ಫೆಬ್ರವರಿ 1, 2024 ರಂದು ವಾಝೇದ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com