ಇಸ್ರೇಲ್ ಗೆ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು, ಹೊಣೆಗಾರಿಕೆ ಇದೆ: ಅಮೇರಿಕಾ ಸಚಿವ ಆಂಟೋನಿ ಬ್ಲಿಂಕೆನ್

ವೈಮಾನಿಕ ಹಾಗೂ ಭೂಸೇನೆಗಳ ನೆರವಿನಿಂದ ಇಸ್ರೇಲ್ ಗಾಜಾವನ್ನು ಸುತ್ತುವರೆದಿದ್ದು, ಈ ಬಗ್ಗೆ ಮಾತನಾಡಿರುವ ಅಮೇರಿಕಾದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ್, ಇಸ್ರೇಲ್ ಗೆ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಮತ್ತು ಬಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಇಸ್ರೇಲ್-ಗಾಜಾ ಸಂಘರ್ಷ
ಇಸ್ರೇಲ್-ಗಾಜಾ ಸಂಘರ್ಷ

ಟೆಲ್ ಅವೀವ್: ವೈಮಾನಿಕ ಹಾಗೂ ಭೂಸೇನೆಗಳ ನೆರವಿನಿಂದ ಇಸ್ರೇಲ್ ಗಾಜಾವನ್ನು ಸುತ್ತುವರೆದಿದ್ದು, ಈ ಬಗ್ಗೆ ಮಾತನಾಡಿರುವ ಅಮೇರಿಕಾದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ್, ಇಸ್ರೇಲ್ ಗೆ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಮತ್ತು ಬಾಧ್ಯತೆಗಳಿವೆ ಎಂದು ಬೆಂಬಲ ಸೂಚಿಸಿದ್ದಾರೆ.
 
ಅ.07 ರಂದು ನಡೆದ ಘಟನೆ ಪುನರಾವರ್ತನೆಯಾಗದೇ ಇರುವಂತೆ ನೋಡಿಕೊಳ್ಳಲು ಇಸ್ರೇಲ್ ಗೆ ತನ್ನನ್ನು ರಕ್ಷಿಸಿಕೊಳ್ಳುವುದು ಹಕ್ಕು ಮಾತ್ರವಲ್ಲದೇ ಬಾಧ್ಯತೆಯೂ ಆಗಿದೆ ಎಂದು ಬ್ಲಿಂಕನ್ ಪತ್ರಕರ್ತರಿಗೆ ಇಸ್ರೇಲ್ ನ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರೊಂದಿಗಿನ ಭೇಟಿಯ ಬಳಿಕ ಹೇಳಿದ್ದಾರೆ.

ಅ.07 ರಂದು ತನ್ನ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿ 1,400 ಮಂದಿ ಇಸ್ರೇಲಿಗರನ್ನು ಹತ್ಯೆ ಮಾಡಿದ ಬಳಿಕ ಗಾಜಾ ಮೇಲೆ ಇಸ್ರೇಲ್ ಪ್ರತಿದಾಳಿ ನಡೆಸುತ್ತಿದೆ. 

ಪ್ರತಿದಾಳಿಯ ಪರಿಣಾಮ ಗಾಜಾದಲ್ಲಿ 9,200 ಮಂದಿ ಸಾವನ್ನಪ್ಪಿದ್ದಾರೆ. ಬ್ಲಿಂಕನ್ ಆಗಮನದ ನಂತರ, ಅವರು ಹೆರ್ಜೋಗ್ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದರು.

ಯುದ್ಧವು ಭುಗಿಲೆದ್ದ ನಂತರ ಮಧ್ಯಪ್ರಾಚ್ಯಕ್ಕೆ ಎರಡನೇ ಬಾರಿ ಪ್ರವಾಸ ಕೈಗೊಂಡಿರುವ ಬ್ಲಿಂಕನ್, ಕ್ರಾಸ್‌ಫೈರ್‌ನಲ್ಲಿ ಸಿಕ್ಕಿಬಿದ್ದ ನಾಗರಿಕರನ್ನು ರಕ್ಷಿಸಲು ಮತ್ತು "ತುಂಬಾ ಅಗತ್ಯವಿರುವವರಿಗೆ ಸಹಾಯವನ್ನು ನೀಡಲು" ಇಸ್ರೇಲ್‌ಗೆ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com