ಭೀಕರ ಕದನಕ್ಕೆ ಒಂದು ತಿಂಗಳು: ಯುದ್ಧದ ನಂತರ ಗಾಜಾದ 'ಸುರಕ್ಷತಾ ಜವಾಬ್ದಾರಿ' ತನ್ನದು ಎಂದ ಇಸ್ರೇಲ್!

ಯುದ್ಧದ ನಂತರ ಮುತ್ತಿಗೆ ಹಾಕಿದ ಗಾಜಾದ "ಒಟ್ಟಾರೆ ಭದ್ರತೆ" ಯನ್ನು ಇಸ್ರೇಲ್ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಭರವಸೆ ನೀಡಿದ್ದಾರೆ. ಈಗಾಗಲೇ ನಾಗರಿಕರ ಸಾವಿನ ಸಂಖ್ಯೆ 10 ಸಾವಿರ ಗಡಿ ದಾಟಿದೆ ಎಂದು ಹಮಾಸ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಪೂರ್ವ ಜೆರುಸಲೇಮ್‌ನ ದಾಳಿ ಸ್ಥಳವನ್ನು ಇಸ್ರೇಲಿ ಪೊಲೀಸರು ಪರಿಶೀಲಿಸುತ್ತಾರೆ
ಪೂರ್ವ ಜೆರುಸಲೇಮ್‌ನ ದಾಳಿ ಸ್ಥಳವನ್ನು ಇಸ್ರೇಲಿ ಪೊಲೀಸರು ಪರಿಶೀಲಿಸುತ್ತಾರೆ

ಜೆರುಸಲೇಂ: ಯುದ್ಧದ ನಂತರ ಮುತ್ತಿಗೆ ಹಾಕಿದ ಗಾಜಾದ "ಒಟ್ಟಾರೆ ಭದ್ರತೆ" ಯನ್ನು ಇಸ್ರೇಲ್ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಭರವಸೆ ನೀಡಿದ್ದಾರೆ. ಈಗಾಗಲೇ ನಾಗರಿಕರ ಸಾವಿನ ಸಂಖ್ಯೆ 10 ಸಾವಿರ ಗಡಿ ದಾಟಿದೆ ಎಂದು ಹಮಾಸ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕದನ ವಿರಾಮದ ಕರೆಯನ್ನು ತಿರಸ್ಕರಿಸುತ್ತಿರುವ ಇಸ್ರೇಲ್ ಪ್ರಧಾನಿ ನೆತನ್ಯಾಹು, ಹಮಾಸ್ ನ್ನು ನಾಶಮಾಡುವುದು ನಮ್ಮ ಉದ್ದೇಶವಾಗಿದ್ದು, ಕದನ ವಿರಾಮ ಘೋಷಿಸುವುದಿಲ್ಲ ಎಂದರು. ಇಸ್ರೇಲ್ ವಿರುದ್ಧ ಹಮಾಸ್ ನಡೆಸಿದ ಅಕ್ಟೋಬರ್ 7ರ ಯುದ್ಧದಲ್ಲಿ 1,400 ಜನರನ್ನು ಬಲಿ ತೆಗೆದುಕೊಂಡಿತು, ಅವರಲ್ಲಿ ಹೆಚ್ಚಿನವರು ಇಸ್ರೇಲ್ ನ ಮುಗ್ಧ ನಾಗರಿಕರಾಗಿದ್ದಾರೆ. 

ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಎನಿಸಿಕೊಂಡಿರುವ ಹಮಾಸ್ ಮಕ್ಕಳು ಮತ್ತು ವೃದ್ಧರು ಸೇರಿದಂತೆ 240 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿತು. ಇದು ಇಸ್ರೇಲ್ ಗಾಜಾದ ಮೇಲೆ ಭಾರಿ ಬಾಂಬ್ ದಾಳಿ ಮತ್ತು ತೀವ್ರತರವಾದ ನೆಲದ ಆಕ್ರಮಣ ನಡೆಸಲು ಪ್ರೇರೇಪಣೆ ನೀಡಿತು.

ಗಾಜಾ ಪಟ್ಟಿ ಮಕ್ಕಳ ಸ್ಮಶಾನವಾಗುತ್ತಿದೆ: ಇಸ್ರೇಲ್-ಹಮಾಸ್ ಮಧ್ಯೆ ಯುದ್ಧ ಆರಂಭವಾಗಿ ಈಗಾಗಲೇ 1 ತಿಂಗಳಾಗಿದ್ದು, ಗಾಜಾ ಪಟ್ಟಿಯಲ್ಲಿ ಈಗಾಗಲೇ ಸಾವಿನ ಸಂಖ್ಯೆ 10 ಸಾವಿರ ಗಡಿ ದಾಟಿದ್ದು ಅವರಲ್ಲಿ 4,000 ಕ್ಕೂ ಹೆಚ್ಚು ಮಕ್ಕಳಾಗಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧಕ್ಕೆ ಖಂಡನೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಜನರಲ್ ಆಂಟೋನಿಯೊ ಗುಟೆರೆಸ್ ಗಾಜಾವು "ಮಕ್ಕಳ ಸ್ಮಶಾನ" ಆಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ. 

ಗಾಜಾದ ಒಟ್ಟಾರೆ ಭದ್ರತೆ: ಗಾಜಾದಲ್ಲಿ ಒಂದೂವರೆ ಮಿಲಿಯನ್‌ಗಿಂತಲೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದು ಪ್ರದೇಶದ ಇತರ ಭಾಗಗಳಿಗೆ ಸುರಕ್ಷಿತ ಸ್ಥಳಗಳನ್ನು ಹುಡುಕಿಕೊಂಡು ಪಲಾಯನ ಮಾಡಿದ್ದಾರೆ, ಆದರೆ ಇಸ್ರೇಲ್ ಇದ್ಯಾವುದಾಕ್ಕೂ ಮನಕರಗುತ್ತಿಲ್ಲ. ಗಾಜಾ ಪಟ್ಟಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡು ಅಲ್ಲಿ ಒಟ್ಟಾರೆ ಭದ್ರತೆ ಪುನಃಸ್ಥಾಪಿಸುವವರೆಗೆ ಯುದ್ಧದಿಂದ ವಿರಾಮ ತೆಗೆದುಕೊಳ್ಳುವುದಿಲ್ಲ ಎಂದು ಪ್ರಧಾನಿ ನೆತನ್ಯಾಹು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಯುದ್ಧಕ್ಕೆ ಒಂದು ತಿಂಗಳು, ತೀವ್ರ: ಗಾಜಾ ಪಟ್ಟಿ ಮೇಲೆ ಇಸ್ರೇಲ್ ನ ಭೀಕರ ಯುದ್ಧ ಆರಂಭವಾಗಿ ಒಂದು ತಿಂಗಳು ಕಳೆದಿದೆ. ಉಗ್ರಗಾಮಿ ಗುಂಪು ತನ್ನ 240 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಯಾವುದೇ ಕದನ ವಿರಾಮ ಇರುವುದಿಲ್ಲ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಒತ್ತಿ ಹೇಳಿದ್ದರಿಂದ ಅಕ್ಟೋಬರ್ 7 ರ ಹಮಾಸ್ ದಾಳಿಯಿಂದ ಹುಟ್ಟಿಕೊಂಡ ಗಾಜಾದಲ್ಲಿ ಇಸ್ರೇಲ್‌ನ ಇದುವರೆಗೆ ನಡೆದ ಅತ್ಯಂತ ಭೀಕರ ಯುದ್ಧವು ಇಂದು ಒಂದು ತಿಂಗಳು ಪೂರೈಸಿ ಎರಡನೇ ತಿಂಗಳಿಗೆ ಕಾಲಿರಿಸಿದೆ. 

ಇಸ್ರೇಲ್ 12,000 ಕ್ಕೂ ಹೆಚ್ಚು ವಾಯು ಮತ್ತು ಫಿರಂಗಿ ದಾಳಿಗಳೊಂದಿಗೆ ಗಾಜಾದಲ್ಲಿನ ಗುರಿಗಳನ್ನು ಪಟ್ಟುಬಿಡದೆ ಹೊಡೆದಿದೆ. ಸೈನಿಕರು ಮತ್ತು ಟ್ಯಾಂಕ್‌ಗಳು ಗಾಜಾ ನಗರದ ಸುತ್ತುವರಿಯುವಿಕೆಯನ್ನು ಬಿಗಿಗೊಳಿಸಿದೆ. 

ಇತ್ತೀಚಿನ ಯುದ್ಧಗಳಲ್ಲಿ, ಉತ್ತರ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಭಯೋತ್ಪಾದಕ ಸಂಘಟನೆಗೆ ಸೇರಿದ ಮಿಲಿಟರಿ ಭದ್ರಕೋಟೆಯನ್ನು ಅದರ ಪಡೆಗಳು ಪಡೆದುಕೊಂಡಿದೆ ಎಂದು ಇಸ್ರೇಲಿ ಸೇನೆಯು ನಿನ್ನೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com