ಇಸ್ರೇಲ್ ವೈಮಾನಿಕ ದಾಳಿ ವೇಳೆ ಹಮಾಸ್ ಉಗ್ರ ಸಂಘಟನೆಯ ಶಸ್ತ್ರಾಸ್ತ್ರ ಸಂಶೋಧನಾ ತಜ್ಞ ಸಾವು!

ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಬುಧವಾರ ರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ನ ಶಸ್ತ್ರಾಸ್ತ್ರ ತಯಾರಿಕಾ ಘಟಕದ ಪ್ರಮುಖ ತಜ್ಞರಲ್ಲಿ ಒಬ್ಬನನ್ನು ಕೊಂದಿದೆ ಎಂದು ಹೇಳಿದೆ.
ಇಸ್ರೇಲ್ ವೈಮಾನಿಕ ದಾಳಿ ವೇಳೆ ಹಮಾಸ್ ಉಗ್ರ ಸಾವು
ಇಸ್ರೇಲ್ ವೈಮಾನಿಕ ದಾಳಿ ವೇಳೆ ಹಮಾಸ್ ಉಗ್ರ ಸಾವು

ಟೆಲ್ ಅವೀವ್: ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಬುಧವಾರ ರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ನ ಶಸ್ತ್ರಾಸ್ತ್ರ ತಯಾರಿಕಾ ಘಟಕದ ಪ್ರಮುಖ ತಜ್ಞರಲ್ಲಿ ಒಬ್ಬನನ್ನು ಕೊಂದಿದೆ ಎಂದು ಹೇಳಿದೆ.

ಟೈಮ್ಸ್ ಆಫ್ ಇಸ್ರೇಲ್ ಈ ಬಗ್ಗೆ ವರದಿ ಮಾಡಿದ್ದು, "ಕಾರ್ಯತಂತ್ರದ ಶಸ್ತ್ರಾಸ್ತ್ರಗಳು ಮತ್ತು ರಾಕೆಟ್‌ಗಳ" ತಯಾರಿಕೆಯಲ್ಲಿ ಪರಿಣತಿ ಹೊಂದಿರುವ, ಇಸ್ರೇಲ್ ಮಿಲಿಟರಿ ಮತ್ತು ಶಿನ್ ಬೆಟ್  ಮುಹ್ಸಿನ್ ಅಬು ಜಿನಾ ಎಂದು ಕರೆಯುವ ವ್ಯಕ್ತಿಯನ್ನು ಕೊಂದಿದ್ದು, ಈತ "ಶಸ್ತ್ರಾಸ್ತ್ರ ಉತ್ಪಾದನೆಯ ನಾಯಕರಲ್ಲಿ ಒಬ್ಬ" ಎಂದು ಕರೆದಿದೆ. IDF ಆತನನ್ನು ಹಮಾಸ್‌ನ "ಕೈಗಾರಿಕೆಗಳು ಮತ್ತು ಶಸ್ತ್ರಾಸ್ತ್ರ" ವಿಭಾಗದ ಮುಖ್ಯಸ್ಥ ಎಂದು ಕರೆದಿದೆ.

ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಐಡಿಎಫ್, "ಐಡಿಎಫ್ ಯೋಧರು ಗಾಜಾ ಪಟ್ಟಿಯಲ್ಲಿ ಆಳವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತಾರೆ, ಭಯೋತ್ಪಾದಕರನ್ನು ನಿರ್ಮೂಲನೆ ಮಾಡುತ್ತಾರೆ ಮತ್ತು ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಲು ವಿಮಾನಗಳನ್ನು ನಿರ್ದೇಶಿಸುತ್ತಾರೆ ಎಂದು ಹೇಳಿದೆ.

ಶಿನ್ ಬೆಟ್ ಮತ್ತು ಅಮ್ಮನ್‌ರ ಗುಪ್ತಚರ ಮಾರ್ಗದರ್ಶನದ IDF ಫೈಟರ್ ಜೆಟ್, ಅಬು ಝಿನಾ ಗೋದಾಮನ್ನು ನಾಶಪಡಿಸಿತು, ಇದು ಹಮಾಸ್ ಉತ್ಪಾದನಾ ಕೇಂದ್ರ ಕಛೇರಿಯಲ್ಲಿ ಕೈಗಾರಿಕೆಗಳು ಮತ್ತು ಶಸ್ತ್ರಾಸ್ತ್ರಗಳ ವಿಭಾಗದ ಮುಖ್ಯಸ್ಥರು ಕಾರ್ಯ ನಿರ್ವಹಿಸುತ್ತಿದ್ದ ಪ್ರಮುಖ ತಾಣವಾಗಿತ್ತು. ಈ ಅಬು-ಝಿನಾ ಭಯೋತ್ಪಾದಕ ಸಂಘಟನೆ ಹಮಾಸ್‌ಗೆ ಮದ್ದುಗುಂಡುಗಳ ಉತ್ಪಾದನೆಯಲ್ಲಿ ನಾಯಕರಲ್ಲಿ ಒಬ್ಬನಾಗಿದ್ದ ಮತ್ತು ಹಮಾಸ್ ಭಯೋತ್ಪಾದಕರಿಗೆ ಕಾರ್ಯತಂತ್ರದ ಮದ್ದುಗುಂಡುಗಳು ಮತ್ತು ರಾಕೆಟ್‌ಗಳ ಉತ್ಪಾದನೆಯಲ್ಲಿ ಪರಿಣತಿ ಹೊಂದಿದ್ದ ಎಂದು ಹೇಳಲಾಗಿದೆ.

ರಾಕೆಟ್‌ಗಳನ್ನು ಹಾರಿಸಲು ಕಾರಣವಾದ ಭಯೋತ್ಪಾದಕ ತಂಡವನ್ನು ಗುರಿಯಾಗಿಸಿಕೊಳ್ಳಲು ಇಸ್ರೇಲ್ ವಾಯುಸೇನೆಗೆ ಸೂಚಿಸಲಾಗಿತ್ತು. ಆದರಂತೆ ಇಸ್ರೇಲ್ ವಾಯುಸೇನೆ ಈ ದಾಳಿ ನಡೆಸಿದ್ದು, ವೈಮಾನಿಕ ದಾಳಿಯ ಸಮಯದಲ್ಲಿ ಹಲವಾರು ಭಯೋತ್ಪಾದಕರನ್ನು ಕೊಂದಿದೆ ಎಂದು IDF ಹೇಳಿದೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com