ಗಾಜಾದಲ್ಲಿ ಇಸ್ರೇಲ್ ದಾಳಿ ತೀವ್ರ: ಹಮಾಸ್ ಉಗ್ರರ 130 ಸುರಂಗ ಮಾರ್ಗಗಳು ಧ್ವಂಸ

ಗಾಜಾಪಟ್ಟಿಯಲ್ಲಿ ದಾಳಿ ತೀವ್ರಗೊಳಿಸಿರುವ ಇಸ್ರೇಲ್ ಸೇನೆ ಹಮಾಸ್ ಉಗ್ರರ 130 ಸುರಂಗ ಮಾರ್ಗಗಳನ್ನು ಧ್ವಂಸ ಮಾಡಿದೆ ಎಂದು ತಿಳಿದುಬಂದಿದೆ.
ಗಾಜಾದಲ್ಲಿ ಇಸ್ರೇಲ್ ಸೇನೆ
ಗಾಜಾದಲ್ಲಿ ಇಸ್ರೇಲ್ ಸೇನೆ

ಟೆಲ್ ಅವೀವ್: ಗಾಜಾಪಟ್ಟಿಯಲ್ಲಿ ದಾಳಿ ತೀವ್ರಗೊಳಿಸಿರುವ ಇಸ್ರೇಲ್ ಸೇನೆ ಹಮಾಸ್ ಉಗ್ರರ 130 ಸುರಂಗ ಮಾರ್ಗಗಳನ್ನು ಧ್ವಂಸ ಮಾಡಿದೆ ಎಂದು ತಿಳಿದುಬಂದಿದೆ.

ಹಮಾಸ್ ಉಗ್ರರ ವಿರುದ್ಧ ಗಾಜಾಪಟ್ಟಿಯಲ್ಲಿ ಇಸ್ರೇಲ್ ಸೇನೆ ಆರಂಭಿಸಿರುವ ಸೇನಾದಾಳಿ ನಿರ್ಣಾಯಕ ಹಂತ ತಲುಪಿದ್ದು, ಗಾಜಾಪಟ್ಟಿಯಲ್ಲಿ ನೆಲದ ಆಕ್ರಮಣ ಆರಂಭಿಸಿರುವ ಇಸ್ರೇಲ್ ಸೇನೆ ಈಗಾಗಲೇ ಗಾಜಾಪಟ್ಟಿಯ ಮಧ್ಯಭಾಗ ಪ್ರವೇಶಸಿದೆ. ಅಲ್ಲದೆ ಗಾಜಾನಗರದಲ್ಲಿ ಹಮಾಸ್ ಉಗ್ರರು ನಿರ್ಮಿಸಿಕೊಂಡಿರುವ ಒಟ್ಟಾರೆ ಸುರಂಗ ಮಾರ್ಗಗಳ ಪೈಕಿ ಈ ವರೆಗೂ 130 ಸುರಂಗ ಮಾರ್ಗಗಳನ್ನು ಇಸ್ರೇಲ್ ಸೇನೆ ನಾಶಪಡಿಸಿದೆ. 

ಈ ಬಗ್ಗೆ ಇಸ್ರೇಲ್ ರಕ್ಷಣಾ ಪಡೆ IDF ಮಾಹಿತಿ ನೀಡಿದ್ದು, ಈ ವರೆಗೂ 130 ಸುರಂಗಗಳನ್ನು ನಾಶಪಡಿಸಲಾಗಿದೆ. ಸುರಂಗಗಳ ಜೊತೆಗೆ ಹಮಾಸ್ ಸಂಘಟನೆಯ ಕಮಾಂಡ್ ಸೆಂಟರ್‌ಗಳಂತಹ ಇತರ ಭೂಗತ ಹಮಾಸ್ ಮೂಲಸೌಕರ್ಯಗಳನ್ನು ಸಹ ನಾಶಪಡಿಸಲಾಗಿದೆ. ಸುರಂಗಗಳಲ್ಲಿ ದೀರ್ಘಕಾಲ ಉಳಿಯಲು ಹಮಾಸ್ ಉಗ್ರರ ಸಿದ್ಧತೆಯನ್ನು ಕಾಣಬಹುದು. ನೀರು ಮತ್ತು ಆಮ್ಲಜನಕದ ಆಧಾರದ ಮೇಲೆ ಸುರಂಗಗಳಲ್ಲಿ ಹಮಾಸ್ ಉಗ್ರರು ಕಾರ್ಯಾಚರಿಸುತ್ತಿದ್ದರು. ಈಗ ಇಂತಹ ಸುರಂಗಗಳನ್ನು ಇಸ್ರೇಲ್ ಸೇನೆ ನಾಶಪಡಿಸಿದೆ ಎಂದು IDF ಹೇಳಿದೆ.

ಸಾವಿರಾರು ಸೈನಿಕರು, ನೂರಾರು ಯುದ್ಧ ಟ್ಯಾಂಕರ್‌ಗಳು ಸೇರಿ ಅಪಾರ ಶಸ್ತ್ರಾಸ್ತ್ರಗಳೊಂದಿಗೆ ಗಾಜಾ ನಗರಕ್ಕೆ ಲಗ್ಗೆ ಇಟ್ಟಿರುವ ಇಸ್ರೇಲ್‌ ಸೇನೆ ಈಗ ಗಾಜಾ ನಗರದ ಹೃದಯ ಭಾಗ ಪ್ರವೇಶಿಸಿದೆ ಎಂದು ತಿಳಿಸಿದೆ. 

ಉತ್ತರ ಗಾಜಾದಿಂದ ದಕ್ಷಿಣ ಗಾಜಾ ಭಾಗಕ್ಕೆ ಸಾವಿರಾರು ಪ್ಯಾಲೆಸ್ಟೀನಿಯನ್ನರು ಸ್ಥಳಾಂತರವಾಗುದ್ದಂತೆಯೇ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಗಳ ಸಂಸ್ಥೆ (ಯುಎನ್‌ಆರ್‌ಡಬ್ಲ್ಯುಎ) ಇಸ್ರೇಲ್‌ನೊಂದಿಗೆ 'ಒಪ್ಪಂದ' ನಡೆಸುತ್ತಿದೆ ಎಂದು ಭಯೋತ್ಪಾದಕ ಗುಂಪು ಹಮಾಸ್ ಬುಧವಾರ ಆರೋಪಿಸಿದೆ.

'UNRWA ಮತ್ತು ಅದರ ಅಧಿಕಾರಿಗಳು ಈ ಮಾನವೀಯ ದುರಂತಕ್ಕೆ ಜವಾಬ್ದಾರರಾಗಿರುತ್ತಾರೆ, ನಿರ್ದಿಷ್ಟವಾಗಿ, ಗಾಜಾ ನಗರ ಪ್ರದೇಶದ ನಿವಾಸಿಗಳು ಮತ್ತು ಅದರ ಉತ್ತರದ ನಿವಾಸಿಗಳು' ದಕ್ಷಿಣಕ್ಕೆ ಪಲಾಯನ ಮಾಡಲು IDF- ವ್ಯವಸ್ಥೆಗೊಳಿಸಿದ ಸ್ಥಳಾಂತರದ ಮಾರ್ಗಗಳಲ್ಲಿ ಚಲಿಸುತ್ತಿದ್ದಾರೆ ಎಂದು ಹಮಾಸ್ ವಕ್ತಾರ ಸಲಾಮಾ ಮಾರುಫ್ ಹೇಳಿದ್ದಾರೆ.

ಆದರೆ ಈ ಆರೋಪವನ್ನು UNRWA ಅಲ್ಲಗಳೆದಿದೆ. ಇತ್ತ ಇಸ್ರೇಲ್ ಉತ್ತರ ಗಾಜಾದ ನಿವಾಸಿಗಳಿಗೆ ಹೋರಾಟದಿಂದ ದೂರವಿರಲು ದಕ್ಷಿಣಕ್ಕೆ ತೆರಳುವಂತೆ ಕರೆ ನೀಡಿದೆ. IDF ಪ್ರಕಾರ, ಹಮಾಸ್ ಉಗ್ರರು ರಸ್ತೆಗಳನ್ನು ನಿರ್ಬಂಧಿಸಿದ್ದು, ಪಲಾಯನ ಮಾಡಲು ಪ್ರಯತ್ನಿಸುತ್ತಿರುವ ಪ್ಯಾಲೆಸ್ಟೀನಿಯರ ಮೇಲೆ ಗುಂಡು ಹಾರಿಸುತ್ತಿದೆ ಎಂದು ಆರೋಪಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com