ಲಂಡನ್ ನಲ್ಲಿ ದೀಪಾವಳಿ ಸಂಭ್ರಮ: ಹಿಂದೂ ಸಮುದಾಯವನ್ನು ಸ್ವಾಗತಿಸಿದ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ದಂಪತಿ

ಹಿಂದೂ ಸಂಸ್ಕೃತಿಯನ್ನು ಪ್ರೀತಿ, ಗೌರವಾದರಗಳಿಂದ ಕಾಣುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ನಿನ್ನೆ ಬುಧವಾರ ತಮ್ಮ ಪತ್ನಿ ಅಕ್ಷತಾ ಮೂರ್ತಿ ಜೊತೆಗೆ ದೀಪಾವಳಿ ಹಬ್ಬಕ್ಕೆ ಮುನ್ನ ಲಂಡನ್ ನ ತಮ್ಮ ನಿವಾಸವಾದ 10 ಡೌನಿಂಗ್ ಸ್ಟ್ರೀಟ್ ಗೆ ಹಿಂದೂ ಸಮುದಾಯದವರನ್ನು ಅತಿಥಿಗಳಾಗಿ ಆಹ್ವಾನಿಸಿ ಹಬ್ಬ ಆಚರಿಸಿದರು.
ದೀಪ ಬೆಳಗಿ ಅತಿಥಿಗಳನ್ನು ದೀಪಾವಳಿ ಹಬ್ಬವನ್ನು ಸ್ವಾಗತಿಸಿದ ರಿಷಿ ಸುನಕ್-ಅಕ್ಷತಾ ಮೂರ್ತಿ
ದೀಪ ಬೆಳಗಿ ಅತಿಥಿಗಳನ್ನು ದೀಪಾವಳಿ ಹಬ್ಬವನ್ನು ಸ್ವಾಗತಿಸಿದ ರಿಷಿ ಸುನಕ್-ಅಕ್ಷತಾ ಮೂರ್ತಿ
Updated on

ಲಂಡನ್: ಹಿಂದೂ ಸಂಸ್ಕೃತಿಯನ್ನು ಪ್ರೀತಿ, ಗೌರವಾದರಗಳಿಂದ ಕಾಣುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ನಿನ್ನೆ ಬುಧವಾರ ತಮ್ಮ ಪತ್ನಿ ಅಕ್ಷತಾ ಮೂರ್ತಿ ಜೊತೆಗೆ ದೀಪಾವಳಿ ಹಬ್ಬಕ್ಕೆ ಮುನ್ನ ಲಂಡನ್ ನ ತಮ್ಮ ನಿವಾಸವಾದ 10 ಡೌನಿಂಗ್ ಸ್ಟ್ರೀಟ್ ಗೆ ಹಿಂದೂ ಸಮುದಾಯದವರನ್ನು ಅತಿಥಿಗಳಾಗಿ ಆಹ್ವಾನಿಸಿ ಹಬ್ಬ ಆಚರಿಸಿದರು.

ಇದರ ವಿಡಿಯೊ, ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು ರಿಷಿ ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ ಜೊತೆಗೆ ದೀಪ ಹಚ್ಚಿ ಹಬ್ಬವನ್ನು ಆಚರಿಸಿದ್ದಾರೆ, ಅವರ ಸುತ್ತಲೂ ಅನಿವಾಸಿ ಭಾರತೀಯರು ಖುಷಿಯಿಂದ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

<strong>ಭಾರತೀಯ ಮೂಲದ ಹಿಂದೂ ಸಮುದಾಯದವರೊಂದಿಗೆ ಪ್ರಧಾನಿ ರಿಷಿ ಸುನಕ್ ಮಾತುಕತೆ </strong>
ಭಾರತೀಯ ಮೂಲದ ಹಿಂದೂ ಸಮುದಾಯದವರೊಂದಿಗೆ ಪ್ರಧಾನಿ ರಿಷಿ ಸುನಕ್ ಮಾತುಕತೆ 

ಇಂಗ್ಲೆಂಡಿನಲ್ಲಿರುವ ಪ್ರತಿಯೊಬ್ಬರಿಗೂ ಮತ್ತು ಜಗತ್ತಿನ ಸುತ್ತ ಇರುವ ಪ್ರತಿಯೊಬ್ಬರಿಗೂ ದೀಪಾವಳಿ ಹಬ್ಬದ ಶುಭಕಾಮನೆಗಳು ಎಂದು ಬ್ರಿಟನ್ ಪ್ರಧಾನ ಮಂತ್ರಿ ಕಚೇರಿ ಟ್ವೀಟ್ ಮಾಡಿದೆ.

ದೀಪಾವಳಿ ಹಿಂದೂ ಧರ್ಮೀಯರ ಪವಿತ್ರ ಬಹುದೊಡ್ಡ ಹಬ್ಬವಾಗಿದ್ದು ಕತ್ತಲೆಯನ್ನು ದೂರಸರಿಸಿ ಬೆಳಕು ಕಾಣುವ, ಕೆಟ್ಟದರ ವಿರುದ್ಧ ಒಳಿತಿನ ಗೆಲುವಿನ ಸಂಕೇತವಾಗಿದೆ. ಈ ವರ್ಷ ದೀಪಾವಳಿ ನರಕ ಚತುರ್ದಶಿಯನ್ನು ನವೆಂಬರ್ 12ರಂದು ಆಚರಿಸಲಾಗುತ್ತದೆ.

<strong>ಲಂಡನ್ ನ ಪ್ರಧಾನಿ ನಿವಾಸ 10 ಡೌನಿಂಗ್ ಸ್ಟ್ರೀಟ್ ನ್ನು ಹಬ್ಬದ ಸಂಕೇತವಾಗಿ ದೀಪಗಳು, ಹೂವುಗಳಿಂದ ಅಲಂಕರಿಸಲಾಗಿತ್ತು. ಅದರ ಮಧ್ಯೆ ಸಾಗುತ್ತಿರುವ ಅಕ್ಷತಾ ಮೂರ್ತಿ-ರಿಷಿ ಸುನಕ್ </strong>
ಲಂಡನ್ ನ ಪ್ರಧಾನಿ ನಿವಾಸ 10 ಡೌನಿಂಗ್ ಸ್ಟ್ರೀಟ್ ನ್ನು ಹಬ್ಬದ ಸಂಕೇತವಾಗಿ ದೀಪಗಳು, ಹೂವುಗಳಿಂದ ಅಲಂಕರಿಸಲಾಗಿತ್ತು. ಅದರ ಮಧ್ಯೆ ಸಾಗುತ್ತಿರುವ ಅಕ್ಷತಾ ಮೂರ್ತಿ-ರಿಷಿ ಸುನಕ್ 

ಭಾರತೀಯ ಮೂಲದವರಾದ ರಿಷಿ ಸುನಕ್ ವಿವಾಹವಾಗಿದ್ದು ಇನ್ಫೋಸಿಸ್ ಮುಖ್ಯಸ್ಥರಾದ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಯ ಪುತ್ರಿ ಅಕ್ಷತಾ ಮೂರ್ತಿಯವರನ್ನು, ಹೀಗಾಗಿ ಅವರು ಹಿಂದೂ ಸಂಸ್ಕೃತಿಯನ್ನು, ಹಬ್ಬ-ಹರಿದಿನಗಳನ್ನು ಕಡ್ಡಾಯವಾಗಿ ಆಚರಿಸುತ್ತಾರೆ ಮತ್ತು ಪಾಲಿಸುತ್ತಾರೆ ಕೂಡ.

<strong>ದೀಪಾವಳಿ ಆಚರಣೆಗೆ ದೀಪ ಬೆಳಗುತ್ತಿರುವ ಅಕ್ಷತಾ ಮೂರ್ತಿ-ರಿಷಿ ಸುನಕ್ </strong>
ದೀಪಾವಳಿ ಆಚರಣೆಗೆ ದೀಪ ಬೆಳಗುತ್ತಿರುವ ಅಕ್ಷತಾ ಮೂರ್ತಿ-ರಿಷಿ ಸುನಕ್ 

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ದೂರವಾಣಿ ಮೂಲಕ ಎರಡೂ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಮಾತುಕತೆ ನಡೆಸಿದ್ದರು. ಈಗ ನಡೆಯುತ್ತಿರುವ ವಿಶ್ವ ಕಪ್ ನಲ್ಲಿ ಭಾರತೀಯ ತಂಡದ ಸಾಧನೆಗೆ ರಿಷಿ ಸುನಕ್ ಅವರು ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದರು.

ಭಾರತ ಮತ್ತು ಇಂಗ್ಲೆಂಡ್ 2022ರಲ್ಲಿ ಆರಂಭವಾದ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಪರಸ್ಪರ ಮಾತುಕತೆ ನಡೆಸಿ ಸಹಮತಕ್ಕೆ ಬಂದಿದ್ದರು. 12ನೇ ಸುತ್ತಿನ ಭಾರತ-ಇಂಗ್ಲೆಂಡ್ ಮುಕ್ತ ವ್ಯಾಪಾರ ಒಪ್ಪಂದ(FTA) ಕಳೆದ ಆಗಸ್ಟ್ 8ರಿಂದ 31ರ ಮಧ್ಯೆ ಏರ್ಪಟ್ಟಿತು.

<strong>ಪ್ರಧಾನಿ ನರೇಂದ್ರ ಮೋದಿ ಭೇಟಿ-ಮಾತುಕತೆ</strong>
ಪ್ರಧಾನಿ ನರೇಂದ್ರ ಮೋದಿ ಭೇಟಿ-ಮಾತುಕತೆ

ಮುಂದಿನ ವರ್ಷ ಆರಂಭದಲ್ಲಿ ಜನವರಿ ತಿಂಗಳಲ್ಲಿ ಭಾರತದಲ್ಲಿ ಟೆಸ್ಟ್ ಕ್ರಿಕೆಟ್ ಆರಂಭವಾಗಲಿದ್ದು ಇಂಗ್ಲೆಂಡ್ ತಂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ರಿಷಿ ಸುನಕ್ ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com