ಇಸ್ರೇಲ್ ವಿರುದ್ಧದ ಯುದ್ಧ, ಗಾಜಾದಲ್ಲಿ 13,000ಕ್ಕೂ ಹೆಚ್ಚು ಜನರ ಸಾವು, 6,000 ಮಂದಿ ನಾಪತ್ತೆ: ಹಮಾಸ್

ಸುಮಾರು ಎರಡೂವರೆ ತಿಂಗಳುಗಳಿಂದ ನಡೆದ ಇಸ್ರೇಲ್ ವಿರುದ್ಧದ ಯುದ್ಧದಿಂದ 13,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಸಾವಿನ ಸಂಖ್ಯೆಯ ವಿವರವಾದ ಸಂಖ್ಯೆಯನ್ನು ಪುನರ್ ಆರಂಭಿಸಲಾಗಿದೆ ಎಂದು ಹಮಾಸ್ ಆಡಳಿತವಿರುವ ಗಾಜಾದ ಆರೋಗ್ಯ ಸಚಿವಾಲಯದ ನಿರ್ದೇಶಕರು ಹೇಳಿದ್ದಾರೆ. 
ಯುದ್ಧ ಪೀಡಿತ ಗಾಜಾದ ಚಿತ್ರ
ಯುದ್ಧ ಪೀಡಿತ ಗಾಜಾದ ಚಿತ್ರ

ಗಾಜಾ: ಸುಮಾರು ಎರಡೂವರೆ ತಿಂಗಳುಗಳಿಂದ ನಡೆದ ಇಸ್ರೇಲ್ ವಿರುದ್ಧದ ಯುದ್ಧದಿಂದ 13,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಸಾವಿನ ಸಂಖ್ಯೆಯ ವಿವರವಾದ ಸಂಖ್ಯೆಯನ್ನು ಪುನರ್ ಆರಂಭಿಸಲಾಗಿದೆ ಎಂದು ಹಮಾಸ್ ಆಡಳಿತವಿರುವ ಗಾಜಾದ ಆರೋಗ್ಯ ಸಚಿವಾಲಯದ ನಿರ್ದೇಶಕರು ಹೇಳಿದ್ದಾರೆ. 

ಇಸ್ರೇಲಿ ಪಡೆಗಳು ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳೊಂದಿಗೆ ಹೋರಾಡುತ್ತಿರುವ ಉತ್ತರ ಗಾಜಾದಲ್ಲಿ ಪ್ರವೇಶ ಮತ್ತು ಸಂವಹನ ಸ್ಥಗಿತಗೊಂಡ ನಂತರ ಆರೋಗ್ಯ ಸಚಿವಾಲಯ ನವೆಂಬರ್ 11 ರಂದು ತನ್ನ ಅಂಕಿ ಅಂಶಗಳ ಪರಿಷ್ಕರಣೆಯನ್ನು ಸ್ಥಗಿತಗೊಳಿಸಿತ್ತು.

ಇತ್ತೀಚಿನ ಎಣಿಕೆಯು ದಕ್ಷಿಣ ಮತ್ತು ಉತ್ತರ ಆಸ್ಪತ್ರೆಗಳಿಂದ ಪರಿಷ್ಕರಿಸಿದ ನವೆಂಬರ್ 11ರ ಅಂಕಿಅಂಶಗಳನ್ನು ಆಧರಿಸಿದೆ. ನೈಜ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. 

ಇನ್ನೂ 6,000 ಮಂದಿ ನಾಪತ್ತೆಯಾಗಿದ್ದು, ಅವರು ಅವಶೇಷಗಳಡಿಯಲ್ಲಿ ಹೂತುಹೋಗಿರುವ ಶಂಕೆ ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com