ಇಸ್ರೇಲ್-ಗಾಜಾ ಯುದ್ದ: 12 ಒತ್ತೆಯಾಳು ಬಿಡುಗಡೆಗೆ ಪ್ರತಿಯಾಗಿ ಇಸ್ರೇಲ್ ನಿಂದ 30 ಪ್ಯಾಲೆಸ್ತೀನಿ ಕೈದಿಗಳು ರಿಲೀಸ್

ಕದನ ವಿರಾಮದ ಭಾಗವಾಗಿ ಈ ಹಿಂದೆ ಇಸ್ರೇಲ್ ಹಾಗೂ ಹಮಾಸ್ ಒಪ್ಪಿಕೊಂಡಂತೆ ಒತ್ತೆಯಾಳುಗಳು ಹಾಗೂ ಪ್ಯಾಲೆಸ್ತೀನಿಯನ್ ಕೈದಿಗಳ ಬಿಡುಗಡೆಯಾಗುತ್ತಿದೆ. 12 ಇಸ್ರೇಲಿಯನ್ನರನ್ನು ಹಮಾಸ್ ಬಿಡುಗಡೆ ಮಾಡಿದ್ದರೆ, ಇಸ್ರೇಲ್ 30 ಮಂದಿ ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಿದೆ.
ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆ
ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆ
Updated on

ರಾಫಾ: ಕದನ ವಿರಾಮದ ಭಾಗವಾಗಿ ಈ ಹಿಂದೆ ಇಸ್ರೇಲ್ ಹಾಗೂ ಹಮಾಸ್ ಒಪ್ಪಿಕೊಂಡಂತೆ ಒತ್ತೆಯಾಳುಗಳು ಹಾಗೂ ಪ್ಯಾಲೆಸ್ತೀನಿಯನ್ ಕೈದಿಗಳ ಬಿಡುಗಡೆಯಾಗುತ್ತಿದೆ. 12 ಇಸ್ರೇಲಿಯನ್ನರನ್ನು ಹಮಾಸ್ ಬಿಡುಗಡೆ ಮಾಡಿದ್ದರೆ, ಇಸ್ರೇಲ್ 30 ಮಂದಿ ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಿದೆ.

ಅಕ್ಟೋಬರ್ 7 ರಂದು ಇಸ್ರೇಲ್ ಮೇಲಿನ ದಾಳಿಯ ಸಮಯದಲ್ಲಿ ಹಮಾಸ್ ಹೋರಾಟಗಾರರು ಸುಮಾರು 240 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಹತ್ತು ಇಸ್ರೇಲಿಗಳು ಮತ್ತು ಇಬ್ಬರು ಥಾಯ ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿ ಹೇಳಿದೆ, ಅವರನ್ನು ರೆಡ್‌ಕ್ರಾಸ್‌ಗೆ ಹಸ್ತಾಂತರಿಸಲಾಗಿದೆ.

ಈ ದಾಳಿಯಲ್ಲಿ 1,200 ಮಂದಿ ಸಾವನ್ನಪ್ಪಿದ್ದರು, ಪ್ರತಿಯಾಗಿ ಇಸ್ರೇಲ್ ಗಾಜಾದ ಮೇಲೆ ನಡೆಸಿದ ದಾಳಿಯಲ್ಲಿ 15,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಕತಾರ್ ಮಧ್ಯಸ್ಥಿಕೆಯೊಂದಿಗೆ ಮೊದಲು ನಾಲ್ಕು ದಿನಗಳ ಕದನ ವಿರಾಮ ಘೋಷಿಸಲಾಗಿತ್ತು, ಅದು ಸೋಮವಾರ ರಾತ್ರಿ ಕೊನೆಗೊಂಡಿತ್ತು, ಬಳಿಕ ಮತ್ತೂ ಎರಡು ದಿನಗಳಿಗೆ ವಿಸ್ತರಿಸಲಾಯಿತು.

ಹಮಾಸ್ ಮೊದಲ ಬ್ಯಾಚ್​ನಲ್ಲಿ 25 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ 13 ಮಂದಿ ಇಸ್ರೇಲಿ ನಾಗರಿಕರು, 12 ಮಂದಿ ಥೈಲೆಂಡ್ ನಾಗರಿಕರಿದ್ದರು. ಇಸ್ರೇಲ್​ ಪ್ರಜೆಗಳನ್ನು ಮಾತ್ರ ಒತ್ತೆಯಾಳುಗಳನ್ನಾಗಿರಿಸಿಕೊಂಡಿಲ್ಲ, ಅದರಲ್ಲಿ ಅನೇಕ ದೇಶಗಳ ನಾಗರಿಕರೂ ಸೇರಿದ್ದಾರೆ. ಒತ್ತೆಯಾಳುಗಳಲ್ಲಿ ಹೆಚ್ಚಿನವರು ಅಕ್ಟೋಬರ್ 7 ರಂದು ಸಂಗೀತೋತ್ಸವದಲ್ಲಿ ಭಾಗವಹಿಸಿದವರಾಗಿದ್ದರು.

ಎಎಫ್‌ಪಿ ಪತ್ರಕರ್ತರೊಬ್ಬರು ಮುಸುಕುಧಾರಿ ಮತ್ತು ಶಸ್ತ್ರಸಜ್ಜಿತ ಹೋರಾಟಗಾರರನ್ನು ನೋಡಿದ್ದಾರೆ, ಈಜಿಪ್ಟ್‌ನ ಗಡಿಯ ಸಮೀಪವಿರುವ ರಾಫಾದಲ್ಲಿ ರೆಡ್‌ಕ್ರಾಸ್ ಅಧಿಕಾರಿಗಳಿಗೆ ಒತ್ತೆಯಾಳುಗಳನ್ನು ಹಸ್ತಾಂತರಿಸಿದರು. ಗಾಜಾದಲ್ಲಿ 2.3 ಮಿಲಿಯನ್ ನಾಗರಿಕರಲ್ಲಿ ಅರ್ಧದಷ್ಟು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com