ವಿಶ್ವಪ್ರಸಿದ್ಧ ಹೂಡಿಕೆದಾರ ವಾರನ್ ಬಫೆಟ್ ಆಪ್ತಸ್ನೇಹಿತ ಚಾರ್ಲಿ ಮುಂಗರ್ ನಿಧನ

ಅಮೆರಿಕದ ವಿಶ್ವಖ್ಯಾತ ಹೂಡಿಕೆದಾರ ವಾರನ್ ಬಫೆಟ್  ಅವರ ಬಿಸಿನೆಸ್  ಪಾಲುದಾರ ಮತ್ತು ಆಪ್ತ ಸ್ನೇಹಿತರಾಗಿದ್ದ ಚಾರ್ಲಿ ಮುಂಗರ್ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು.
ಚಾರ್ಲಿ ಮುಂಗರ್
ಚಾರ್ಲಿ ಮುಂಗರ್

ವಾಷಿಂಗ್ಟನ್: ಅಮೆರಿಕದ ವಿಶ್ವಖ್ಯಾತ ಹೂಡಿಕೆದಾರ ವಾರನ್ ಬಫೆಟ್  ಅವರ ಬಿಸಿನೆಸ್  ಪಾಲುದಾರ ಮತ್ತು ಆಪ್ತ ಸ್ನೇಹಿತರಾಗಿದ್ದ ಚಾರ್ಲಿ ಮುಂಗರ್ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು.

ಡಿಸೆಂಬರ್ 31 ಕಳೆದಿದ್ದರೆ ಅವರು ಶತಾಯುಷಿ ಆಗಿರುತ್ತಿದ್ದರು. ಬರ್ಕ್​ಶೈರ್ ಹ್ಯಾಥ್ ವೇ ಸಂಸ್ಥೆಯಲ್ಲಿ ಹಲವಾರು ದಶಕಗಳಿಂದ ಅವರು ವೈಸ್ ಛೇರ್ಮನ್ ಆಗಿ ಕೆಲಸ ಮಾಡಿದ್ದರು. ಬರ್ಕ್​ಶೈರ್ ಹ್ಯಾಥ್ ವೇಸಂಸ್ಥೆ ಈ ನಿಧನವಾರ್ತೆಯನ್ನು ಮಾಧ್ಯಮಗಳಿಗೆ ತಿಳಿಸಿದೆ.

‘ಕ್ಯಾಲಿಫೋರ್ನಿಯಾ ಆಸ್ಪತ್ರೆಯೊಂದರಲ್ಲಿ ಇಂದು ಬೆಳಗ್ಗೆ ಚಾರ್ಲೀ ಮುಂಗರ್ ಅವರು ನಿಧನ ಹೊಂದಿದರು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ,’ ಎಂದು ಬರ್ಕ್​ಶೈರ್ ಹ್ಯಾಥ್ ವೇ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಚಾರ್ಲಿಯ ಸ್ಫೂರ್ತಿ, ಬುದ್ಧಿವಂತಿಕೆ ಮತ್ತು ಭಾಗವಹಿಸುವಿಕೆ ಇಲ್ಲದೆ ಬರ್ಕ್‌ಷೈರ್ ಹ್ಯಾಥ್‌ವೇ ಪ್ರಸ್ತುತ ಸ್ಥಿತಿಗೆ ನಿರ್ಮಿಸಲು ಸಾಧ್ಯವಿಲ್ಲ" ಎಂದು ಬರ್ಕ್‌ಷೈರ್‌ನ 93 ವರ್ಷ ವಯಸ್ಸಿನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಬಫೆಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾರನ್ ಬಫೆಟ್ ಅವರಿಗೆ 93 ವರ್ಷ ವಯಸ್ಸಾಗಿದ್ದರೆ, ಚಾರ್ಲೀ ಮುಂಗರ್ ಅವರಿಗೆ 99 ವರ್ಷ ವಯಸ್ಸಾಗಿತ್ತು. ಇಬ್ಬರೂ ಕೂಡ ಅಮೆರಿಕದ ನೆಬ್ರಾಸ್ಕ ರಾಜ್ಯದ ಒಮಾಹ ಪ್ರದೇಶದಲ್ಲಿ ಜನಿಸಿ ಅಲ್ಲಿಯೇ ಬೆಳೆದವರು. ಆರು ದಶಕಗಳ ಕಾಲ ಅವರಿಬ್ಬರ ಗಾಢ ಸ್ನೇಹ ಇತ್ತು. 1959ರಲ್ಲಿ ಇಬ್ಬರು ಮೊದಲ ಬಾರಿಗೆ ಸಂಧಿಸಿದ್ದು. ಅಲ್ಲಿಂದ ಅವರ ಸ್ನೇಹ ಪರ್ವ 60 ವರ್ಷಕ್ಕೂ ಹೆಚ್ಚು ಕಾಲ ಇತ್ತು. ಇಬ್ಬರೂ ಕೇವಲ ಆಪ್ತ ಸ್ನೇಹಿತರು ಮಾತ್ರವೇ ಆಗಿರಲಿಲ್ಲ, ಒಳ್ಳೆಯ ಬಿಸಿನೆಸ್ ಪಾರ್ಟ್ನರ್ಸ್ ಆಗಿದ್ದರು. ಬಿಸಿನೆಸ್ ಮತ್ತು ಸ್ನೇಹ ಎರಡೂ ಅವರಿಬ್ಬರನ್ನು ಹೆಚ್ಚು ಆಪ್ತರನ್ನಾಗಿಸಿದ್ದು ವಿಶೇಷ.

ಚಾರ್ಲೀ ಮುಂಗರ್ 1978ರಲ್ಲಿ ಬರ್ಕ್​ಶೈರ್ ಹಾಥವೇ ಸಂಸ್ಥೆಗೆ ವೈಸ್ ಛೇರ್ಮನ್ ಆಗಿ ಕೆಲಸಕ್ಕೆ ಸೇರಿದರು. ಆಗ ಅದು ಒಂದು ಸಣ್ಣ ಜವಳಿ ಸಂಸ್ಥೆಯಾಗಿತ್ತು. ಇವರ ವ್ಯಾವಹಾರಿಕ ಚತುರತೆಯಿಂದ ಇವತ್ತು ಅದು 780 ಬಿಲಿಯನ್ ಡಾಲರ್​ಗೂ ಹೆಚ್ಚು ಮೌಲ್ಯದ ಬೃಹತ್ ಸಮೂಹ ಸಂಸ್ಥೆಯಾಗಿ ಬೆಳೆದಿದೆ. ಆ್ಯಪಲ್ ಸಿಇಒ ಟಿಮ್ ಕುಕ್ ಸೇರಿದಂತೆ ಹಲವರು ಮುಂಗರ್ ಅವರಿಗೆ ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com