ಇಸ್ರೇಲ್, ಹಮಾಸ್ ಕದನ ವಿರಾಮ ವಿಸ್ತರಣೆ: ಅಂತಿಮ ಕ್ಷಣದಲ್ಲಿ ಮಹತ್ವದ ನಿರ್ಣಯ

ಇಸ್ರೇಲ್ ಮತ್ತು ಹಮಾನ್ ನಡುವಿನ ಯುದ್ಧ ಕದನ ವಿರಾಮ ವಿಸ್ತರಣೆಯಾಗಿದ್ದು, ಇದು ಅಂತ್ಯವಾಗುವ ಅಂತಿಮ ಕ್ಷಣದಲ್ಲಿ ಉಭಯ ಪಡೆಗಳು ಈ ಮಹತ್ವದ ನಿರ್ಣಯ ಕೈಗೊಂಡಿವೆ.
ಇಸ್ರೇಲ್, ಹಮಾಸ್ ಕದನ ವಿರಾಮ ವಿಸ್ತರಣೆ
ಇಸ್ರೇಲ್, ಹಮಾಸ್ ಕದನ ವಿರಾಮ ವಿಸ್ತರಣೆ

ಟೆಲ್ ಅವೀವ್: ಇಸ್ರೇಲ್ ಮತ್ತು ಹಮಾನ್ ನಡುವಿನ ಯುದ್ಧ ಕದನ ವಿರಾಮ ವಿಸ್ತರಣೆಯಾಗಿದ್ದು, ಇದು ಅಂತ್ಯವಾಗುವ ಅಂತಿಮ ಕ್ಷಣದಲ್ಲಿ ಉಭಯ ಪಡೆಗಳು ಈ ಮಹತ್ವದ ನಿರ್ಣಯ ಕೈಗೊಂಡಿವೆ.

ಮೂಲಗಳ ಪ್ರಕಾರ ಉಭಯ ಪಡೆಗಳ ಮಧ್ಯವರ್ತಿ ಕತಾರ್ ಪ್ರಕಾರ, ಇಸ್ರೇಲ್-ಹಮಾಸ್ ಯುದ್ಧದಲ್ಲಿ ತಾತ್ಕಾಲಿಕ ಕದನ ವಿರಾಮವನ್ನು ಮತ್ತೊಂದು ದಿನ ವಿಸ್ತರಿಸಲಾಗಿದೆ. ಕದನ ವಿರಾಮದ ಅವಧಿ ಮುಗಿಯುವ ಕೆಲವೇ ನಿಮಿಷಗಳ ಮೊದಲು ಗುರುವಾರ ಈ ಘೋಷಣೆ ಬಂದಿದೆ. ಕದನ ವಿರಾಮವನ್ನು ಒಂದು ದಿನ ವಿಸ್ತರಿಸಲು ಇಸ್ರೇಲ್ ಒಪ್ಪಿಕೊಂಡಿತ್ತು ಎಂದು ಹೇಳಿದೆ.

"ಸ್ವಲ್ಪ ಸಮಯದ ಹಿಂದೆ" ಬಿಡುಗಡೆ ಮಾಡಲು ಹಮಾಸ್ ಇಸ್ರೇಲ್‌ಗೆ ಮಹಿಳೆಯರು ಮತ್ತು ಮಕ್ಕಳ ಒತ್ತೆಯಾಳುಗಳ ಹೊಸ ಪಟ್ಟಿಯನ್ನು ನೀಡಿದ ನಂತರ ಗಾಜಾ ಕದನ ವಿರಾಮವನ್ನು ವಿಸ್ತರಿಸಲಾಗಿದೆ ಎಂದು ಇಸ್ರೇಲ್ ಹಯೋಮ್ ಪತ್ರಿಕೆ ಪ್ರಧಾನ ಮಂತ್ರಿ ಕಚೇರಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ನವೆಂಬರ್ 24 ರಂದು ಪ್ರಾರಂಭವಾದ ಕದನ ವಿರಾಮವು ಮೂಲತಃ ಸೋಮವಾರದಂದು ಮುಕ್ತಾಯಗೊಳ್ಳಬೇಕಿತ್ತು. ಆದರೆ ಒತ್ತೆಯಾಳುಗಳ ಬಿಡುಗಡೆ ಕಾರ್ಯ ಇನ್ನೂ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಕದನ ವಿರಾಮವನ್ನು ಮೂರನೇ ಬಾರಿಗೆ ವಿಸ್ತರಣೆ ಮಾಡಲಾಗಿದೆ.

ಆದಾಗ್ಯೂ ಹಮಾಸ್‌ನ 16 ವರ್ಷಗಳ ಗಾಜಾದ ಆಳ್ವಿಕೆಯನ್ನು ಕೊನೆಗೊಳಿಸುವ ಪ್ರಯತ್ನದಲ್ಲಿ ಇಸ್ರೇಲ್ ಯುದ್ಧವನ್ನು ಪುನರಾರಂಭಿಸಲು ಪ್ರತಿಜ್ಞೆ ಮಾಡಿದೆ, ಆದರೆ ದಕ್ಷಿಣ ಗಾಜಾ ಮತ್ತು ಉತ್ತರ ಗಾಜಾದ ಬಹುತೇಕ ಭಾಗವನ್ನು ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಕೆಡವಿ ಹಾಕಿದೆ. ಈ ಯುದ್ಧ ಪ್ರಾರಂಭವಾದಾಗಿನಿಂದ 13,300 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಕೊಲ್ಲಲ್ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com