
ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಸೆಲೆಬ್ರಿಟಿ ಲೀಗ್ ಅಕ್ಷರಶಃ ರೆಸ್ಲಿಂಗ್ ರಣಾಂಗಣವಾಗಿ ಮಾರ್ಪಟ್ಟಿದ್ದು, ಪರಸ್ಪರ ಸಂಘರ್ಷದಲ್ಲಿ 6ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೌದು.. ಬಾಂಗ್ಲಾದೇಶ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ವೇಳೆ ಆಟಗಾರರ ನಡುವೆ ಗಲಾಟೆ ನಡೆದಿದ್ದು, ಹಲವು ಕಲಾವಿದರು ಗಾಯಗೊಂಡಿದ್ದಾರೆ. ಈ ಪೈಕಿ 6 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲಗಳ ಪ್ರಕಾರ ಬಾಂಗ್ಲಾ ಚಲನಚಿತ್ರ ನಿರ್ಮಾಪಕರಾದ ಮೊಸ್ತಫಾ ಕಮಲ್ ರಾಝ್ ಮತ್ತು ದೀಪಂಕರ್ ಡಿಪೋನ್ ತಂಡದ ನಡುವಿನ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಅಂಪೈರ್‌ನ ತಪ್ಪು ನಿರ್ಧಾರದ ಹಿನ್ನೆಲೆಯಲ್ಲಿ ಈ ಜಗಳ ನಡೆದಿದೆ ಎನ್ನಲಾಗಿದ್ದು, ಸೆಮಿ ಫೈನಲ್‌ಗೂ ಮುನ್ನವೇ ಆಟವನ್ನು ರದ್ದು ಮಾಡಲಾಗಿದೆ.
Hilarious scenes in Celebrity Cricket League.
— Saif Ahmed
A celebrity crying because an umpire didn’t give a boundary which was clearly a four.
Two teams fought badly, 6 people injured in hospital and the tournament is now cancelled!!! pic.twitter.com/brEYCKzIw3
Advertisement