ಅಮೆರಿಕದ ಮೂವರ ವಿಜ್ಞಾನಿಗಳಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

ಟಿವಿ ಮತ್ತು ಲ್ಯಾಂಪ್ಸ್ ಗಳಲ್ಲಿ ಬಳಸುವ ಸಣ್ಣ "ಕ್ವಾಂಟಮ್ ಡಾಟ್‌ಗಳನ್ನು" ಅಭಿವೃದ್ಧಿಪಡಿಸಿದ್ದಕ್ಕಾಗಿ ಅಮೆರಿಕದ ಮೂವರು ವಿಜ್ಞಾನಿಗಳಿಗೆ 2023ನೇ ಸಾಲಿನ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಬುಧವಾರ ಘೋಷಿಸಲಾಗಿದೆ.
ಅಮೆರಿಕದ ಮೂವರ ವಿಜ್ಞಾನಿಗಳಿಗೆ ರಸಾಯನಶಾಸ್ತ್ರದ ನೊಬೆಲ್
ಅಮೆರಿಕದ ಮೂವರ ವಿಜ್ಞಾನಿಗಳಿಗೆ ರಸಾಯನಶಾಸ್ತ್ರದ ನೊಬೆಲ್

ಸ್ಟಾಕ್‌ಹೋಮ್: ಟಿವಿ ಮತ್ತು ಲ್ಯಾಂಪ್ಸ್ ಗಳಲ್ಲಿ ಬಳಸುವ ಸಣ್ಣ "ಕ್ವಾಂಟಮ್ ಡಾಟ್‌ಗಳನ್ನು" ಅಭಿವೃದ್ಧಿಪಡಿಸಿದ್ದಕ್ಕಾಗಿ ಅಮೆರಿಕದ ಮೂವರು ವಿಜ್ಞಾನಿಗಳಿಗೆ 2023ನೇ ಸಾಲಿನ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಬುಧವಾರ ಘೋಷಿಸಲಾಗಿದೆ.

ಫ್ರೆಂಚ್ ಮೂಲದ ಮೌಂಗಿ ಬಾವೆಂಡಿ, ಯುನೈಟೆಡ್ ಸ್ಟೇಟ್ಸ್‌ನ ಲೂಯಿಸ್ ಬ್ರೂಸ್ ಮತ್ತು ರಷ್ಯಾ ಮೂಲದ ಅಲೆಕ್ಸಿ ಎಕಿಮೊವ್ ಅವರು ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

"ಈ ಮೂವರು ವಿಜ್ಞಾನಿಗಳು ಎಲೆಕ್ಟ್ರಾನಿಕ್ಸ್ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಬಳಸಲಾಗುವ ಅತ್ಯಂತ ಪ್ರಕರ ಬೆಳಕು ಉತ್ಪಾದಿಸುವ ಕ್ವಾಂಟಮ್ ಡಾಟ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಟಿವಿ ಪರದೆ ಮತ್ತು ಎಲ್‌ಇಡಿ ದೀಪಗಳಲ್ಲೂ ಈ ಕ್ವಾಂಟಮ್ ಡಾಟ್‌ಗಳನ್ನು ಬಳಸಲಾಗುತ್ತದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರಧಾನ ಕಾರ್ಯದರ್ಶಿ ಹ್ಯಾನ್ಸ್ ಎಲೆಗ್ರೆನ್ ಅವರು ತಿಳಿಸಿದ್ದಾರೆ.

ಈ ಮೂವರೂ 1 ಮಿಲಿಯನ್ ಡಾಲರ್‌ ಪ್ರಶಸ್ತಿಯನ್ನು ಹಂಚಿಕೊಳ್ಳಲಿದ್ದಾರೆ. ಡಿಸೆಂಬರ್ 10 ರಂದು ಸ್ಟಾಕ್‌ಹೋಮ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಕಿಂಗ್ ಕಾರ್ಲ್ XVI ಗುಸ್ತಾಫ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com