'ನಾವು ಯುದ್ಧದಲ್ಲಿ ತೊಡಗಿದ್ದೇವೆ, ಈ ಯುದ್ಧದಲ್ಲಿ ಗೆಲ್ಲುತ್ತೇವೆ': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಗಾಜಾ ಪಟ್ಟಿಯಿಂದ ಉಗ್ರರ ರಾಕೆಟ್‌ ಬೃಹತ್ ದಾಳಿ ಮತ್ತು ಇಸ್ರೇಲ್ ನೊಳಗೆ ನುಸುಳುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಾವು ಯುದ್ಧದ ಸ್ಥಿತಿಯಲ್ಲಿದ್ದೇವೆ ಎಂದಿದ್ದಾರೆ.
ಇಸ್ರೇಲ್ ಮೇಲಿನ ದಾಳಿಯ ದೃಶ್ಯ ಮತ್ತು ಒಳಚಿತ್ರದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು
ಇಸ್ರೇಲ್ ಮೇಲಿನ ದಾಳಿಯ ದೃಶ್ಯ ಮತ್ತು ಒಳಚಿತ್ರದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಜೆರುಸಲೇಂ: ಗಾಜಾ ಪಟ್ಟಿಯಿಂದ ಉಗ್ರರ ರಾಕೆಟ್‌ ಬೃಹತ್ ದಾಳಿ ಮತ್ತು ಇಸ್ರೇಲ್ ನೊಳಗೆ ನುಸುಳುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಾವು ಯುದ್ಧದ ಸ್ಥಿತಿಯಲ್ಲಿದ್ದೇವೆ ಎಂದಿದ್ದಾರೆ.

ನಾವು ಯುದ್ಧದಲ್ಲಿ ತೊಡಗಿದ್ದು ಇದರಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವೀಡಿಯೊ ಹೇಳಿಕೆಯಲ್ಲಿ ಹೇಳಿದರು, ನಮ್ಮ ಶತ್ರುಗಳು ಎಂದಿಗೂ ಸಾಧ್ಯವಾಗದ ಬೆಲೆ ತೆರುತ್ತಾರೆ ಎಂದು ಸಹ ಹೇಳಿದ್ದಾರೆ. 

ಗಾಜಾ ಪಟ್ಟಿಯನ್ನು ನಿಯಂತ್ರಿಸುವ ಇಸ್ಲಾಮಿಕ್ ಬಣ ಹಮಾಸ್, "ಆಪರೇಷನ್ ಅಲ್-ಅಕ್ಸಾ ಫ್ಲಡ್" ಎಂದು ಇಂದು ಮುಂಜಾನೆಯೇ ರಾಕೆಟ್ ದಾಳಿ ಆರಂಭಿಸಿದ್ದು,  ಇಸ್ರೇಲ್ ಮೇಲೆ 5,000 ರಾಕೆಟ್‌ಗಳಿಂದ ದಾಳಿ ನಡೆಸಿದೆ. 

ಇದಕ್ಕೂ ಮೊದಲು, ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಇಂದು ಬೆಳಿಗ್ಗೆ ಕಾರ್ಯಾಚರಣೆಯ ಪರಿಸ್ಥಿತಿಯ ಮೌಲ್ಯಮಾಪನದ ನಂತರ "ಹಮಾಸ್ (ಭಯೋತ್ಪಾದಕ ಸಂಘಟನೆ) ಗಂಭೀರ ತಪ್ಪು ಮಾಡಿದೆ, ಇಸ್ರೇಲ್ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದೆ ಎಂದು ಎಚ್ಚರಿಸಿದ್ದಾರೆ.

ಐಡಿಎಫ್ ಪಡೆಗಳು ಪ್ರತಿ ಸ್ಥಳದಲ್ಲಿ ಶತ್ರುಗಳ ವಿರುದ್ಧ ಹೋರಾಡುತ್ತಿವೆ. ಭದ್ರತಾ ಸೂಚನೆಗಳನ್ನು ಅನುಸರಿಸಲು ನಾನು ಇಸ್ರೇಲ್‌ನ ಎಲ್ಲಾ ನಾಗರಿಕರಿಗೆ ಕರೆ ನೀಡುತ್ತೇನ ಎಂದು ಪ್ರಧಾನಿ ನೆತನ್ಯಾಹು ಹೇಳಿದರು.ಇಸ್ರೇಲ್ ಈ ಯುದ್ಧವನ್ನು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com