ಇಸ್ರೇಲ್-ಹಮಾಸ್ ಯುದ್ಧ: 1,500ಕ್ಕೂ ಹೆಚ್ಚು ಪ್ಯಾಲೆಸ್ತೈನಿಯರ ಸಾವು; 1.1 ಮಿಲಿಯನ್ ಜನರು ಉತ್ತರ ಗಾಜಾ ತೊರೆಯಲು ಗಡುವು!

ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ಕನಿಷ್ಠ 1,537ಕ್ಕೂ ಪ್ಯಾಲೆಸ್ತೈನಿಯರು ಸಾವನ್ನಪ್ಪಿದ್ದು, ಇತರ 6,612 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದಲ್ಲಿನ ಪ್ಯಾಲೆಸ್ತೈನ್ ಆರೋಗ್ಯ ಸಚಿವಾಲಯದ ಮಾಹಿತಿ ಉಲ್ಲೇಖಿಸಿ ಸಿಎನ್ ಎನ್ ವರದಿ ಮಾಡಿದೆ.
ಇಸ್ರೇಲ್- ಹಮಾಸ್ ಬಂಡುಕೋರರ ನಡುವಿನ ಯುದ್ಧದ ಪರಿಣಾಮದ ಚಿತ್ರ
ಇಸ್ರೇಲ್- ಹಮಾಸ್ ಬಂಡುಕೋರರ ನಡುವಿನ ಯುದ್ಧದ ಪರಿಣಾಮದ ಚಿತ್ರ

ಇಸ್ರೇಲ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ಕನಿಷ್ಠ 1,537ಕ್ಕೂ ಪ್ಯಾಲೆಸ್ತೈನಿಯರು ಸಾವನ್ನಪ್ಪಿದ್ದು, ಇತರ 6,612 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದಲ್ಲಿನ ಪ್ಯಾಲೆಸ್ತೈನ್ ಆರೋಗ್ಯ ಸಚಿವಾಲಯದ ಮಾಹಿತಿ ಉಲ್ಲೇಖಿಸಿ ಸಿಎನ್ ಎನ್ ವರದಿ ಮಾಡಿದೆ. ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸಲೆಮ್‌ನಲ್ಲಿ ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ ಮತ್ತು 650 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ರಮಲ್ಲಾದಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಯುದ್ಧದಿಂದಾಗಿ ಸುಮಾರ್ 338,000 ಕ್ಕೂ ಹೆಚ್ಚು ಪ್ಯಾಲೆಸ್ತೈನಿಯರನ್ನು ಸ್ಥಳಾಂತರಿಸಲಾಗಿದೆ, ಅವರಲ್ಲಿ ಸುಮಾರು 218,000 ಜನರು ಯುಎನ್ ರಿಲೀಫ್ ಮತ್ತು ವರ್ಕ್ಸ್ ಏಜೆನ್ಸಿ ನಡೆಸುತ್ತಿರುವ 92 ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ.

ವಿಶ್ವಸಂಸ್ಥೆ ಪ್ರಕಾರ, 18 ವಿಶ್ವಸಂಸ್ಥೆ ಪರಿಹಾರ ಕಾರ್ಯದ ಏಜೆನ್ಸಿ (ಯುಎನ್ ಆರ್ ಡಬ್ಲ್ಯೂಎ) ನಡೆಸುತ್ತಿರುವ ಶಾಲೆಗಳು, 70 ಪ್ಯಾಲೇಸ್ತೈನ್ ಅಥಾರಿಟಿ ಶಾಲೆಗಳು ಸೇರಿದಂತೆ ಕನಿಷ್ಠ 88 ಶೈಕ್ಷಣಿಕ ಸಂಸ್ಥೆಗಳ ಮೇಲೆ ವೈಮಾನಿಕ ದಾಳಿಗಳು ನಡೆದಿವೆ. ಅಕ್ಟೋಬರ್ 7 ರಿಂದ ತನ್ನ 12 ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದೆ ಎಂದು UNRWA ಹೇಳಿದೆ. 

ಹಮಾಸ್ ಬಂಡುಕೋರರು ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ಪ್ರಾರಂಭಿಸಿತು. ಇದಾದ ನಂತರ ಇಸ್ರೇಲ್ ಪ್ರತಿದಾಳಿ ನಡೆಸುತ್ತಿದ್ದು, ಹಮಾಸ್ ನಾಶಮಾಡಲು ಪ್ರತಿಜ್ಞೆ ಮಾಡಿದೆ.

ಈ ಮಧ್ಯೆ, ವಾಡಿ ಗಾಜಾದ ಉತ್ತರದಲ್ಲಿರುವ ಸಂಪೂರ್ಣ ಪ್ಯಾಲೆಸ್ತೀನ್ ಜನರು 24 ಗಂಟೆಗಳ ಒಳಗೆ ದಕ್ಷಿಣ ಗಾಜಾಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಇಸ್ರೇಲಿ ರಕ್ಷಣಾ ಪಡೆಗಳು ಶುಕ್ರವಾರ ಸೂಚಿಸಿವೆ ಎಂದು ವಿಶ್ವಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಸರಿಸುಮಾರು 1.1 ಮಿಲಿಯನ್ ಪ್ಯಾಲೆಸ್ತೈನಿಯರು ವಾಡಿ ಗಾಜಾದ ಉತ್ತರದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com