ಟೆಲ್ ಅವೀವ್: ಗಾಜಾಪಟ್ಟಿಯಲ್ಲಿ ಇಸ್ರೇಲ್ ಸೇನೆಯ ದಾಳಿ ತೀವ್ರವಾಗುತ್ತಿದ್ದಂತೆಯೇ ಇತ್ತ ಇಂಧನದ ಗಂಭೀರ ಕೊರತೆ ಎದುರಿಸುತ್ತಿರುವ ಹಮಾಸ್ ಉಗ್ರರು ಇದೀಗ ಪ್ಯಾಲೆಸ್ತೀನಿಯರ ರಕ್ಷಣೆಯಲ್ಲಿ ತೊಡಗಿದ್ದ ವಿಶ್ವಸಂಸ್ಥೆಯ ನಿರಾಶ್ರಿತರ ರಕ್ಷಣಾ ಶಿಬಿರದ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಇಂಧನ ಮತ್ತು ಔಷಧೀಯ ಪರಿಕರಗಳನ್ನು ಕೊಳ್ಳೆ ಹೊಡೆದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸ್ವತಃ ಇಸ್ರೇಲ್ ಡಿಫೆನ್ಸ್ ಫೋರ್ಸ್ ಮಾಹಿತಿ ನೀಡಿದ್ದು, ಗಾಜಾಪಟ್ಟಿ ಸಮೀಪದ ಪೂರ್ವದಲ್ಲಿ ಪ್ಯಾಲೆಸ್ಟೈನ್ ನಿರಾಶ್ರಿತರಿಗಾಗಿ ಯುನೈಟೆಡ್ ನೇಷನ್ಸ್ ರಿಲೀಫ್ ಮತ್ತು ವರ್ಕ್ಸ್ ಏಜೆನ್ಸಿ (UNRWA) ಘಟಕ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣ ಇಂಧನ ಮತ್ತು ವೈದ್ಯಕೀಯ ಉಪಕರಣಗಳನ್ನು ಹಮಾಸ್ ಉಗ್ರ ಸಂಘಟನೆ ಕದ್ದಿದೆ ಎಂದು ಆರೋಪಿಸಿದೆ.
Wait @UNRWA - Did Hamas also break into your Twitter account? Or are you just scared of disappointing your terrorist friends? pic.twitter.com/K1a8Dp51pG
— Israel ישראל
Advertisement