
ಟೆಲ್ ಅವಿವ್: ಗಾಜಾ ಆಸ್ಪತ್ರೆಯಲ್ಲಿ ನಡೆದ ವೈಮಾನಿಕ ದಾಳಿ ಹಿಂದೆ ಉಗ್ರಗಾಮಿಗಳ ಕೈವಾಡವಿದ್ದು, ನಮ್ಮ ಬಳಿ ಸಾಕ್ಷಿಯಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಬುಧವಾರ ಹೇಳಿದೆ.
ಆಸ್ಪತ್ರೆಯ ಮೇಲೆ ರಾಕೆಟ್ ಬೀಳುತ್ತಿರುವ ವಿಡಿಯೋವನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದ್ದು, ಹಮಾಸ್ ದಾಳಿ ನಡೆಸುತ್ತಿದ್ದಾಗ ಆಸ್ಪತ್ರೆಯ ಮೇಲೆ ರಾಕೆಟ್ ಬಿದ್ದಿರುವುದಾಗಿ ಇಸ್ರೇಲಿ ಸೇನೆ ಹೇಳಿದೆ.
ನಮ್ಮ ರಾಡಾರ್ ವ್ಯವಸ್ಥೆಯು ಗಾಜಾದಲ್ಲಿ ಭಯೋತ್ಪಾದಕರು ಹಾರಿಸಿ ಕ್ಷಿಪಣಿಗಳನ್ನು ಪತ್ತೆ ಮಾಡಿದ್ದು, ಹಮಾಸ್ ಉಗ್ರರು ವೈಮಾನಿಕ ದಾಳಿ ನಡೆಸಿ, ಆರೋಪವನ್ನು ಇಸ್ರೇಲ್ ಮೇಲೆ ಹೊರಿಸಿದೆ ಎಂದು ತಿಳಿಸಿದೆ.
ದಕ್ಷಿಣ ಗಾಜಾದಲ್ಲಿರುವ ಅಲ್ ಅಹ್ಲಿ ಆಸ್ಪತ್ರೆಯ ಮೇಲೆ ಮಂಗಳವಾರ ವೈಮಾನಿಕ ದಾಳಿ ನಡೆದಿದ್ದು, ಘಟನೆಯಲ್ಲಿ 500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಘಟನೆಗೆ ವಿಶ್ವದಾದ್ಯಂತ ತೀವ್ರ ಖಂಡನೆಗಳು ವ್ಯಕ್ತವಾಗುತ್ತಿವೆ.
Advertisement