ಕಠ್ಮಂಡು: ಇಸ್ರೇಲ್‌ನಲ್ಲಿ ಹತ್ಯೆಗೀಡಾದ ನಾಲ್ವರು ನೇಪಾಳಿ ವಿದ್ಯಾರ್ಥಿಗಳ ಮೃತದೇಹ ಆಗಮನ

ಇಸ್ರೇಲ್‌ನಲ್ಲಿ ಹಮಾಸ್ ಬಂಡುಕೋರರ ದಾಳಿಯಿಂದ ಮೃತಪಟ್ಟ ನಾಲ್ವರು ನೇಪಾಳಿ ವಿದ್ಯಾರ್ಥಿಗಳ ಮೃತದೇಹಗಳನ್ನು ಕಠ್ಮಂಡುವಿಗೆ ತರಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ನೇಪಾಳಿ ವಿದ್ಯಾರ್ಥಿಗಳ ಮೃತದೇಹ
ನೇಪಾಳಿ ವಿದ್ಯಾರ್ಥಿಗಳ ಮೃತದೇಹ

ಕಠ್ಮಂಡು: ಇಸ್ರೇಲ್‌ನಲ್ಲಿ ಹಮಾಸ್ ಬಂಡುಕೋರರ ದಾಳಿಯಿಂದ ಮೃತಪಟ್ಟ ನಾಲ್ವರು ನೇಪಾಳಿ ವಿದ್ಯಾರ್ಥಿಗಳ ಮೃತದೇಹಗಳನ್ನು ಕಠ್ಮಂಡುವಿಗೆ ತರಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ ಪ್ಯಾಲೆಸ್ತೀನ್ ಬಂಡುಕೋರರ ಗುಂಪು ಹಮಾಸ್ ರಾಕೆಟ್ ದಾಳಿ ಆರಂಭಿಸಿದಾಗ ಹತ್ತು ನೇಪಾಳಿ ವಿದ್ಯಾರ್ಥಿಗಳು ಹತ್ಯೆಗೀಡಾಗಿದ್ದರು. ಈ ದಾಳಿಯಲ್ಲಿ 1,300 ಕ್ಕೂ ಹೆಚ್ಚು ಜನರು ಸಾವನ್ನಪ್ಪುವುದರೊಂದಿಗೆ ಇಸ್ರೇಲ್ ರಕ್ಷಣಾ ಪಡೆಗಳಿಂದ ಪ್ರತೀಕಾರದ ದಾಳಿಯನ್ನು ಪ್ರಚೋದಿಸಿತು.

ನಾಲ್ವರು ವಿದ್ಯಾರ್ಥಿಗಳ ಶವಗಳನ್ನು ಗುರುತಿಸಿ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಇಸ್ರೇಲಿ ಸರ್ಕಾರ ಟೆಲ್ ಅವಿವ್‌ನಲ್ಲಿರುವ ನೇಪಾಳದ ರಾಯಭಾರ ಕಚೇರಿಗೆ ಇತ್ತೀಚೆಗೆ ಮೃತದೇಹಗಳನ್ನು ಹಸ್ತಾಂತರಿಸಲಾಯಿತು. ಇಂದು ಬೆಳಗ್ಗೆ ಇಲ್ಲಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಲ್ವರ ಮೃತದೇಹಗಳು ಆಗಮಿಸಿರುವುದಾಗಿ ವಿದೇಶಾಂಗ ಸಚಿವ ಎನ್ ಪಿ ಸೌದ್ ಅವರ ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com