ಗಾಜಾ ನಿವಾಸಿಗಳು
ಗಾಜಾ ನಿವಾಸಿಗಳು

ಗಾಜಾ ಬಿಟ್ಟು ಬೇಗ ಹೊರಡಿ, ಇಲ್ಲವಾದರೆ ನಿಮ್ಮನ್ನು 'ಭಯೋತ್ಪಾದಕ'ರೆಂದು ಪರಿಗಣಿಸಬೇಕಾಗುತ್ತದೆ: ಇಸ್ರೇಲ್‌ ಎಚ್ಚರಿಕೆ

ಆದಷ್ಟು ಬೇಗ ಉತ್ತರ ಗಾಜಾದಿಂದ ದಕ್ಷಿಣ ಗಾಜಾಗೆ ತೆರಳಿ ಇಲ್ಲದಿದ್ದರೆ ನಿಮ್ಮನ್ನು ಉಗ್ರರೆಂದು ಪರಿಗಣಿಸಬೇಕಾಗುತ್ತದೆ ಎಂದು ಪ್ಯಾಲೆಸ್ಟೀನಿಯನ್ನರಿಗೆ ಇಸ್ರೇಲ್ ತುರ್ತು ಎಚ್ಚರಿಕೆ ನೀಡಿದೆ. 
Published on

ಟೆಲ್ ಅವೀವ್: ಆದಷ್ಟು ಬೇಗ ಉತ್ತರ ಗಾಜಾದಿಂದ ದಕ್ಷಿಣ ಗಾಜಾಗೆ ತೆರಳಿ ಇಲ್ಲದಿದ್ದರೆ ನಿಮ್ಮನ್ನು ಉಗ್ರರೆಂದು ಪರಿಗಣಿಸಬೇಕಾಗುತ್ತದೆ ಎಂದು ಪ್ಯಾಲೆಸ್ಟೀನಿಯನ್ನರಿಗೆ ಇಸ್ರೇಲ್ ತುರ್ತು ಎಚ್ಚರಿಕೆ ನೀಡಿದೆ. 

ಇಸ್ರೇಲ್ ರಕ್ಷಣಾ ಪಡೆಗಳ ಹೆಸರು ಮತ್ತು ಲೋಗೋದೊಂದಿಗೆ ಗುರುತಿಸಲಾದ ಕರಪತ್ರಗಳಲ್ಲಿ ಈ ಸಂದೇಶವನ್ನು ನೀಡಲಾಗಿದೆ. ಇದನ್ನು ಗಾಜಾ ಪಟ್ಟಿಯಾದ್ಯಂತ ಮೊಬೈಲ್ ಫೋನ್ ಆಡಿಯೊ ಸಂದೇಶಗಳ ಮೂಲಕ ಜನರಿಗೆ ಕಳುಹಿಸಲಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಗಾಜಾದ ಉತ್ತರ ಭಾಗದಲ್ಲಿರುವುದು ನಿಮ್ಮ ಜೀವಕ್ಕೆ ಅಪಾಯವನ್ನುಂಟು ಮಾಡಲಿದೆ. ನಿಮಗೆ ಈಗಾಗಲೇ ದಕ್ಷಿಣಕ್ಕೆ ತೆರಳುವಂತೆ ನಾವು ಕೇಳಿಕೊಂಡಿದ್ದಾಗಿದೆ. ಇನ್ನೂ ನೀವು ಈ ಜಾಗವನ್ನು ಬಿಟ್ಟು ಹೋಗಿಲ್ಲ ಎಂದಾದರೆ ನಿಮ್ಮನ್ನು ಉಗ್ರರೆಂದು ಪರಿಗಣಿಸಲಾಗುತ್ತದೆ ಎಂದು ಇಸ್ರೇಲ್ ಹೇಳಿದೆ.

ನಾವು ನಾಗರಿಕರನ್ನು ಗುರಿಯಾಗಿಸಿಕೊಂಡಿಲ್ಲ. ನಾಗರಿಕ ಹಾನಿಯನ್ನು ಕಡಿಮೆ ಮಾಡಲು, IDF ಗಾಜಾ ಪಟ್ಟಿಯ ಉತ್ತರ ಪ್ರದೇಶದ ನಿವಾಸಿಗಳಿಗೆ ದಕ್ಷಿಣಕ್ಕೆ ಸ್ಥಳಾಂತರವಾಗುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com