ಹಮಾಸ್-ಇಸ್ರೇಲ್ ಯುದ್ಧದ ದಾಳಿ ಭೀತಿ: ದಕ್ಷಿಣ ಇಸ್ರೇಲ್‌ನಿಂದ ಜೆರುಸಲೆಮ್‌ಗೆ ಪ್ಯಾಲೆಸ್ಟೀನಿಯನ್ನರ ಸ್ಥಳಾಂತರ

ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ನಡುವೆಯೇ ಇತ್ತ ದಕ್ಷಿಣ ಇಸ್ರೇಲ್‌ನಲ್ಲಿರುವ ಪ್ಯಾಲೆಸ್ಟೀನಿ ಜನರು ತಮ್ಮ ಮನೆಗಳನ್ನು ತೊರೆದು ಜೆರುಸಲೇಂಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.
ಜೆರುಸಲೆಮ್ (ಸಂಗ್ರಹ ಚಿತ್ರ)
ಜೆರುಸಲೆಮ್ (ಸಂಗ್ರಹ ಚಿತ್ರ)
Updated on

ಟೆಲ್ ಅವೀವ್: ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ನಡುವೆಯೇ ಇತ್ತ ದಕ್ಷಿಣ ಇಸ್ರೇಲ್‌ನಲ್ಲಿರುವ ಪ್ಯಾಲೆಸ್ಟೀನಿ ಜನರು ತಮ್ಮ ಮನೆಗಳನ್ನು ತೊರೆದು ಜೆರುಸಲೇಂಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.

ದಕ್ಷಿಣ ಇಸ್ರೇಲ್ ನಲ್ಲಿ ಈಗ ನಿರ್ಜನ ಬೀದಿಗಳು ಮತ್ತು ಐತಿಹಾಸಿಕ ವೆಸ್ಟ್ ಬ್ಯಾಂಕ್ ಗೋಡೆಯ ಪ್ರದೇಶವು ಭಯದ ಚಿತ್ರವನ್ನು ಪ್ರದರ್ಶಿಸುತ್ತಿದ್ದು, ಹಲವಾರು ಪ್ಯಾಲೇಸ್ಟಿನಿಯನ್ (ಅರಬ್) ಪ್ರಜೆಗಳು ವ್ಯಾಪಾರ ಉದ್ದೇಶಗಳಿಗಾಗಿ ಜೆರುಸಲೆಮ್‌ಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಆದಾಗ್ಯೂ, ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಅವರ ಈ ಕೆಲಸವು ಪ್ರಭಾವಿತವಾಗಿದೆ. ಸದ್ಯದ ಪರಿಸ್ಥಿತಿಯೇ ತಮ್ಮ ನಷ್ಟಕ್ಕೆ ಕಾರಣ ಎಂದು ಹೇಳಿದ್ದಾರೆ. ಹಮಾಸ್‌ನ ಕ್ರಮಗಳು ಮತ್ತು ಇಸ್ರೇಲಿ ಸೈನಿಕರ ಪ್ರತೀಕಾರದ ಕ್ರಮಗಳಿಂದ ಪ್ರದೇಶದ ಟ್ಯಾಕ್ಸಿ ಚಾಲಕರು ಮತ್ತು ಅಂಗಡಿಯ ಮಾಲೀಕರು ತೀವ್ರ ನಷ್ಟ ಮತ್ತು ಅಸಮಾಧಾನಗೊಂಡಿದ್ದಾರೆ. 

ಗಮನಾರ್ಹವಾಗಿ, ಹಮಾಸ್ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿತು. ಇದರ ನಂತರ, ಇಸ್ರೇಲ್ ಹಮಾಸ್ ವಿರುದ್ಧ ಪ್ರತಿದಾಳಿ ನಡೆಸಿತು ಮತ್ತು ಭಯೋತ್ಪಾದಕ ಗುಂಪನ್ನು ನಾಶಮಾಡುವ ಪ್ರತಿಜ್ಞೆ ಮಾಡಿತು. ಜೆರುಸಲೇಂನಲ್ಲಿರುವ ಅರಬ್ ಟ್ಯಾಕ್ಸಿ ಡ್ರೈವರ್ ಶಾಹಿದ್ ಈ ಪರಿಸ್ಥಿತಿಯಿಂದ ಕಂಗಾಲಾಗಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷವು ನಗರದಲ್ಲಿ ವಾಸಿಸುವ ಇಸ್ರೇಲಿಗಳು ಮತ್ತು ಅರಬ್ಬರ ನಡುವೆ ದ್ವೇಷವನ್ನು ಸೃಷ್ಟಿಸಿದೆ ಎಂದು ಅವರು ಬಹಿರಂಗಪಡಿಸಿದರು. ಅನೇಕ ಇಸ್ರೇಲಿಗಳು ಅರಬ್ ಒಡೆತನದ ಟ್ಯಾಕ್ಸಿಗಳಲ್ಲಿ ಸವಾರಿ ಮಾಡಲು ನಿರಾಕರಿಸುತ್ತಾರೆ. ಇದು ಸ್ಥಳೀಯ ಜನರ ನಡುವಿನ ಉದ್ವಿಗ್ನತೆಯನ್ನು ಉಲ್ಬಣಗೊಳಿಸುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅವರು, ಅಲ್ ಅಕ್ಸಾ ಮಸೀದಿಯಲ್ಲಿ 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮಾತ್ರ ಪ್ರಾರ್ಥನೆಗೆ ಹೋಗಲು ಅವಕಾಶವಿದೆ. ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಹಿದ್, "ಹಾಲಿ ಯುದ್ಧದಿಂದಾಗಿ ನಮಗೆ ಯಾವುದೇ ವ್ಯವಹಾರವಿಲ್ಲ, ನಾವು ಶಾಂತಿಯನ್ನು ಬಯಸುತ್ತೇವೆ" ಎಂದು ಹೇಳಿದರು. ಮತ್ತೊಬ್ಬ ಅಂಗಡಿಯವ ನಿಹಾದ್ ಕೂಡ ಇದೇ ಕಥೆಯನ್ನು ಹಂಚಿಕೊಂಡಿದ್ದು, "ವ್ಯಾಪಾರವಿಲ್ಲ, ಏನೂ ಇಲ್ಲ, ಎಲ್ಲವೂ ನಿಂತುಹೋಗಿದೆ. ಯುದ್ಧದಿಂದಾಗಿ ಎಲ್ಲವೂ ನಿಂತುಹೋಯಿತು. ನಾವು ಯುದ್ಧದಲ್ಲಿದ್ದೇವೆ. ಈಗ ತುರ್ತು ಪರಿಸ್ಥಿತಿ ಇದೆ, ಇಲ್ಲಿ ಏನಾಗುತ್ತಿದೆ ಎಂದು ಹೇಳಿದರು.

ಜೆರುಸಲೆಮ್ ವಿಶ್ವದ ಅತ್ಯಂತ ಹಳೆಯ ಮತ್ತು ಐತಿಹಾಸಿಕವಾಗಿ ಮಹತ್ವದ ನಗರಗಳಲ್ಲಿ ಒಂದಾಗಿದ್ದು, ಇಲ್ಲಿ ಮೂರು ಧರ್ಮಗಳ ಅತ್ಯಂತ ಪವಿತ್ರ ಎಂದು ಭಾವಿಸುವ ಧಾರ್ಮಿಕ ಕ್ಷೇತ್ರಗಳಿವೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com