ರಷ್ಯಾ ಕ್ಷಿಪಣಿ ದಾಳಿ: ಉಕ್ರೇನ್ ನ ಖಾರ್ಕಿವ್‌ ನಲ್ಲಿ 6 ಮಂದಿ ಸಾವು

ಉಕ್ರೇನ್‌ನ ಈಶಾನ್ಯ ನಗರವಾದ ಖಾರ್ಕಿವ್‌ನಲ್ಲಿರುವ ಅಂಚೆ ವಿತರಣಾ ಕೇಂದ್ರಕ್ಕೆ ರಷ್ಯಾದ ಕ್ಷಿಪಣಿಗಳು ಬಡಿದ ನಂತರ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳನ್ನು ಉಲ್ಲೇಖಿಸಿ ಅಲ್ ಜಜೀರಾ ಭಾನುವಾರ ವರದಿ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಖಾರ್ಕಿವ್‌: ಉಕ್ರೇನ್‌ನ ಈಶಾನ್ಯ ನಗರವಾದ ಖಾರ್ಕಿವ್‌ನಲ್ಲಿರುವ ಅಂಚೆ ವಿತರಣಾ ಕೇಂದ್ರಕ್ಕೆ ರಷ್ಯಾದ ಕ್ಷಿಪಣಿಗಳು ಬಡಿದ ನಂತರ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳನ್ನು ಉಲ್ಲೇಖಿಸಿ ಅಲ್ ಜಜೀರಾ ಭಾನುವಾರ ವರದಿ ಮಾಡಿದೆ.

ಜನಸಾಮಾನ್ಯರ ನಿವಾಸಕ್ಕೆ ಕ್ಷಿಪಣಿಗಳು ಬಡಿದಿರುವುದಾಗಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಟೆಲಿಗ್ರಾಮ್ ಫೋಸ್ಟ್ ನಲ್ಲಿ ತಿಳಿಸಿದ್ದಾರೆ.ಕ್ಷಿಪಣಿ ದಾಳಿಯಿಂದ ಹಾನಿಯಾಗಿರುವ ಕಟ್ಟಡದ ವಿಡಿಯೋವೊಂದನ್ನು ಅವರು ಹಂಚಿಕೊಂಡಿರುವುದಾಗಿ ಅಲ್ ಜಜೀರಾ ವರದಿಯಲ್ಲಿ ಹೇಳಿದೆ.

ದಾಳಿಯಿಂದ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಏಳು ಮಂದಿ ಗಂಭೀರ ಸ್ಥಿತಿಯಲ್ಲಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ಒಲೆಹ್ ಸಿನಿಹುಬೊವ್ ಹೇಳಿದ್ದಾರೆ.

ಗಾಯಗೊಂಡವರು 17 ರಿಂದ 42 ವರ್ಷ ವಯಸ್ಸಿನವರಾಗಿದ್ದಾರೆ. ಎಚ್ಚರಿಕೆಯ ಸೈರನ್ ಮೊಳಗಿದ ಕೆಲವೇ ಸೆಕೆಂಡುಗಳ ನಂತರ ಕಟ್ಟಡಕ್ಕೆ ಕ್ಷಿಪಣಿ ಬಡಿದ ಕಾರಣ ಅಂಚೆ ನೌಕರರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ರಾಜ್ಯಪಾಲರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com