ಪೋರ್ಚುಗಲ್: ಜಗತ್ತಿನ ಅತ್ಯಂತ ಹಿರಿಯ ನಾಯಿ ಬೊಬಿ ಸಾವು

ಜಗತ್ತಿನ ಅತ್ಯಂತ ಹಿರಿಯ ನಾಯಿ ಎಂದು ವಿಶ್ವ ದಾಖಲೆ ಬರೆದಿದ್ದ ಬೋಬಿ ತನ್ನ 31 ವಯಸ್ಸಿನಲ್ಲಿ ಮೃತವಾಗಿದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸೋಮವಾರ ಹೇಳಿದೆ.
ವಿಶ್ವದ ಅತ್ಯಂತ ಹಿರಿಯ ನಾಯಿ ಬೊಬಿ ಸಾವು
ವಿಶ್ವದ ಅತ್ಯಂತ ಹಿರಿಯ ನಾಯಿ ಬೊಬಿ ಸಾವು

ಲಿಸ್ಬನ್: ಜಗತ್ತಿನ ಅತ್ಯಂತ ಹಿರಿಯ ನಾಯಿ ಎಂದು ವಿಶ್ವ ದಾಖಲೆ ಬರೆದಿದ್ದ ಬೋಬಿ ತನ್ನ 31 ವಯಸ್ಸಿನಲ್ಲಿ ಮೃತವಾಗಿದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸೋಮವಾರ ಹೇಳಿದೆ.

ಮಧ್ಯ ಪೋರ್ಚುಗಲ್‌ನ ಹಳ್ಳಿಯೊಂದರಲ್ಲಿ ವಾಸವಾಗಿದ್ದ ರಫೀರೊ ಅಲೆಂಟೆಜಾನೊ ‘ಬೋಬಿ’ಗೆ 31 ವರ್ಷ ಮತ್ತು 165 ದಿನಗಳಾಗಿದ್ದವು. ಇದಕ್ಕೂ ಮೊದಲು ಜಗತ್ತಿನ ಹಿರಿಯ ನಾಯಿ ಎಂಬ ದಾಖಲೆ 1993ರಿಂದಲೂ ಆಸ್ಟ್ರೇಲಿಯಾದ ಕ್ಯಾಟಲ್ ಡಾಗ್ ಹೆಸರಿನಲ್ಲಿತ್ತು. ಈ ನಾಯಿ 29 ವರ್ಷ ಮತ್ತು 5 ತಿಂಗಳ ಕಾಲ ಬದುಕಿತ್ತು.

ಸಾಂಪ್ರದಾಯಿಕವಾಗಿ ಕುರಿ ನಾಯಿಗಳಾಗಿ ಬಳಸಲಾಗುವ ಬೋಬಿ ತಳಿಯ ನಾಯಿಯು ಸಾಮಾನ್ಯವಾಗಿ 12 ರಿಂದ 14 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ. ಈ ಪೋರ್ಚುಗಲ್‌ನ ಈ ನಾಯಿ 31 ವರ್ಷಗಳ ಕಾಲ ಬದುಕಿತ್ತು.

ಬೊಬಿ ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಡಾ. ಕರೆನ್‌, ‘ಬೊಬಿಯನ್ನು ಕಳೆದುಕೊಂಡಿದ್ದಕ್ಕೆ ತುಂಬಾ ದುಃಖವಾಗಿದೆ. ಬೊಬಿ ದೀರ್ಘಾಯುಷ್ಯಕ್ಕೆ ಅವನ ಮಾಲೀಕ ಲಿಯೊನೆಲ್‌ ಹಲವು ಕಾರಣಗಳನ್ನು ನೀಡಿದ್ದಾರೆ. ಉತ್ತಮ ಆಹಾರ, ಪ್ರಕೃತಿಯೊಂದಿಗೆ ಒಡನಾಟ, ಸ್ವಾತಂತ್ರ್ಯ ಮತ್ತು ಪ್ರೀತಿ. ನಾವು ಅವನನ್ನು ತುಂಬಾ ಪ್ರೀತಿಸುತ್ತೇವೆ ಎಂಬುವುದು ಅವನಿಗೂ ಗೊತ್ತಿದೆ’ ಎಂದು ಬರೆದುಕೊಂಡಿದ್ದಾರೆ.

‘ಈ ತಳಿಯ ನಾಯಿಗಳು ಸುಮಾರು 12ರಿಂದ 14 ವರ್ಷ ಬದುಕುತ್ತವೆ. ಆದರೆ ಬೊಬಿ ಅದನ್ನು ಸುಳ್ಳು ಮಾಡಿದ್ದಾನೆ. ಬೊಬಿಗೆ ಪ್ರಪಂಚಾದಾದ್ಯಂತ ಹಲವು ಅಭಿಮಾನಿಗಳು ಇದ್ದಾರೆ. ಅವನನ್ನು ಕಳೆದುಕೊಂಡಿದ್ದಕ್ಕೆ ತುಂಬಾ ದುಃಖವಾಗುತ್ತಿದೆ’ ಎಂದು ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com