ಎಲ್ಲಾ ಹಳೆಯ ಸೋವಿಯತ್ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುತ್ತೇವೆ; ಚೀನಾ

ಎಲ್ಲಾ ಹಳೆಯ ಸೋವಿಯೆತ್ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುವುದಾಗಿ ಚೀನಾ ಹೇಳಿದೆ.
ಚೀನಾ
ಚೀನಾ

ಬೀಜಿಂಗ್: ಎಲ್ಲಾ ಹಳೆಯ ಸೋವಿಯೆತ್ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುವುದಾಗಿ ಚೀನಾ ಹೇಳಿದೆ.

ಫ್ರಾನ್ಸ್ ನಲ್ಲಿರುವ ಚೀನಾದ ರಾಯಭಾರಿ ಯುರೋಪ್ ರಾಷ್ಟ್ರಗಳ ಸಾರ್ವಭೌಮತ್ವವನ್ನು ಪ್ರಶ್ನಿಸಿ ವಿವಾದ ಮೈಮೇಲೆ ಎಳೆದುಕೊಂಡ ಬೆನ್ನಲ್ಲೇ ಚೀನಾ ಈ ಸ್ಪಷ್ಟನೆ ನೀಡಿದೆ.

ಸೋವಿಯತ್ ಒಕ್ಕೂಟ ಛಿದ್ರವಾದ ನಂತರದಲ್ಲಿ ಗಣರಾಜ್ಯಗಳಾಗಿರುವ ಎಲ್ಲಾ ದೇಶಗಳ ಸಾರ್ವಭೌಮತ್ವವನ್ನು ಗೌರವಿಸುವುದಾಗಿ ಚೀನಾದ ವಿದೇಶಾಂಗ ವಕ್ತಾರ ಮಾವೋ ನಿಂಗ್ ಹೇಳಿದ್ದಾರೆ.

ಸೋವಿಯತ್ ಒಕ್ಕೂಟದ ಪತನದ ನಂತರ ಹೊರಹೊಮ್ಮಿದ ದೇಶಗಳು "ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಪರಿಣಾಮಕಾರಿ ಸ್ಥಾನಮಾನವನ್ನು ಹೊಂದಿಲ್ಲ ಏಕೆಂದರೆ ಅವರ ಸಾರ್ವಭೌಮ ರಾಷ್ಟ್ರಗಳ ಸ್ಥಾನಮಾನವನ್ನು ದೃಢೀಕರಿಸುವ ಅಂತರರಾಷ್ಟ್ರೀಯ ಒಪ್ಪಂದವಿಲ್ಲ" ಎಂದು ಫ್ರಾನ್ಸ್‌ಗೆ ಚೀನಾ ನ ರಾಯಭಾರಿ ಲು ಶಾಯ್ ಹೇಳಿ ವಿವಾದ ಉಂಟುಮಾಡಿದ್ದರು. 

ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಫ್ ಬೊರೆಲ್ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಚೀನಾದ ರಾಯಭಾರಿ ಹೇಳಿಕೆಗಳು "ಸ್ವೀಕಾರಾರ್ಹವಲ್ಲ" ಎಂದು ಹೇಳಿದ್ದಾರೆ.

"ಈ ಘೋಷಣೆಗಳು ಚೀನಾದ ಅಧಿಕೃತ ನೀತಿಯನ್ನು ಪ್ರತಿನಿಧಿಸುವುದಿಲ್ಲ ಎಂದು ಮಾತ್ರ ಊಹಿಸಬಹುದು" ಎಂದು ಜೋಸೆಫ್ ಬೊರೆಲ್ ಹೇಳಿದ್ದಾರೆ. 

"ಚೀನಾ ಎಲ್ಲಾ ದೇಶಗಳ ಸಾರ್ವಭೌಮತೆ, ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುತ್ತದೆ ಮತ್ತು ಯುಎನ್ ಚಾರ್ಟರ್‌ನ ಉದ್ದೇಶಗಳು ಮತ್ತು ತತ್ವಗಳನ್ನು ಎತ್ತಿಹಿಡಿಯುತ್ತದೆ. "ಸೋವಿಯತ್ ಒಕ್ಕೂಟದ ಪತನದ ನಂತರ, ಸಂಬಂಧಿತ ದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ಮೊದಲ ದೇಶಗಳಲ್ಲಿ ಚೀನಾ ಕೂಡ ಒಂದು.

"ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದಾಗಿನಿಂದ, ಚೀನಾ ಯಾವಾಗಲೂ ದ್ವಿಪಕ್ಷೀಯ ಸ್ನೇಹ ಮತ್ತು ಸಹಕಾರ ಸಂಬಂಧಗಳನ್ನು ಅಭಿವೃದ್ಧಿಪಡಿಸಲು ಪರಸ್ಪರ ಗೌರವ ಮತ್ತು ಸಮಾನತೆಯ ತತ್ವಕ್ಕೆ ಬದ್ಧವಾಗಿದೆ". ಎಂದು 
ಮಾವೋ ಪತ್ರಕರ್ತರಿಗೆ ಸ್ಪಷ್ಟನೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com