ಡೋರ್‌ಬೆಲ್ ಬಾರಿಸಿ ತಮಾಷೆ: ಅಮೆರಿಕದಲ್ಲಿ ಮೂವರು ಬಾಲಕರನ್ನು ಹತ್ಯೆ ಮಾಡಿದ್ದ ಭಾರತೀಯ ಮೂಲದ ವ್ಯಕ್ತಿ ತಪ್ಪಿತಸ್ಥ!

ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿನ ತನ್ನ ಮನೆಯಲ್ಲಿ ಡೋರ್‌ಬೆಲ್ ಬಾರಿಸಿ ತಮಾಷೆ ಮಾಡಿದ ಮೂವರು ಹದಿಹರೆಯದ ಹುಡುಗರನ್ನು ಕೊಂದ ಆರೋಪದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಪ್ಪಿತಸ್ಥರೆಂದು ಸಾಬೀತಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಅನುರಾಗ್ ಚಂದ್ರ
ಅನುರಾಗ್ ಚಂದ್ರ
Updated on

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿನ ತನ್ನ ಮನೆಯಲ್ಲಿ ಡೋರ್‌ಬೆಲ್ ಬಾರಿಸಿ ತಮಾಷೆ ಮಾಡಿದ ಮೂವರು ಹದಿಹರೆಯದ ಹುಡುಗರನ್ನು ಕೊಂದ ಆರೋಪದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಪ್ಪಿತಸ್ಥರೆಂದು ಸಾಬೀತಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ.

ವಾಸ್ತವವಾಗಿ 2020ರಲ್ಲಿ ಅನುರಾಗ್ ಚಂದ್ರ ಎಂಬ ಭಾರತೀಯನ ಮನೆಯಲ್ಲಿ ಕೆಲವು ಕಿಡಿಗೇಡಿ ಹುಡುಗರು ಡೋರ್ ಬೆಲ್ ಬಾರಿಸಿದರು. ಈ ವಿಚಾರವಾಗಿ ಮೂವರು ಅಪ್ರಾಪ್ತರನ್ನು ಕಾರಿಗೆ ಡಿಕ್ಕಿ ಹೊಡೆದು ಸಾಯಿಸಿದ್ದನು. ಎನ್ಬಿಸಿ ನ್ಯೂಸ್ ಪ್ರಕಾರ, ಕೇವಲ ಹದಿನಾರು ವರ್ಷ ವಯಸ್ಸಿನ ಮೂವರು ಹುಡುಗರು ಕಾರಿಗೆ ಡಿಕ್ಕಿ ಹೊಡೆದ ನಂತರ ಸಾವನ್ನಪ್ಪಿದರು. ಅದೇ ಸಮಯದಲ್ಲಿ, ಈ ಘಟನೆಯಲ್ಲಿ ಕೆಲವು ಇಬ್ಬರು ಹದಿಹರೆಯದವರೂ ಗಾಯಗೊಂಡಿದ್ದರು.

ಘಟನೆಯ ದಿನ ತಾನು ಹನ್ನೆರಡು ಬಿಯರ್‌ಗಳನ್ನು ಕುಡಿದಿದ್ದಾಗಿ ಸ್ವತಃ ಭಾರತೀಯ ಮೂಲದ ಅಪರಾಧಿ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದನು. ಡಿಕ್ಕಿಯಾಗುವ ಮೊದಲು ನಾನು 159 ಕಿ.ಮೀ ವೇಗದಲ್ಲಿ ಚಾಲನೆ ಮಾಡುತ್ತಿದ್ದೆ. ಆದರೂ ನನ್ನ ಗುರಿ ಅವರನ್ನು ಹತ್ಯೆ ಮಾಡುವುದು ಆಗಿರಲಿಲ್ಲ. ಅವರಿಗೆ ಪಾಠ ಕಲಿಸುವುದಾಗಿತ್ತು ಎಂದು ಹೇಳಿದ್ದನು. ಡೋರ್ ಬೆಲ್ ಬಾರಿಸುತ್ತಿದ್ದರಿಂದ ನನಗೆ ವಿಪರೀತ ಸಿಟ್ಟು ಬಂತು. ಇದರಿಂದಾಗಿ ಬಾಲಕರನ್ನು ಹಿಂಬಾಲಿಸಿದೆ. ಆದರೆ ಸಕಾಲಕ್ಕೆ ಕಾರಿನ ಬ್ರೇಕ್ ಹಾಕಲಾಗದೆ ಈ ಅಪಘಾತ ಸಂಭವಿಸಿತ್ತು ಎಂದು ಹೇಳಿದ್ದನು. 

ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ರಿವರ್‌ಸೈಡ್ ಕೌಂಟಿ ಜಿಲ್ಲಾ ಅಟಾರ್ನಿ ಮೈಕ್ ಹೆಸ್ಟ್ರಿನ್, ಈ ಬಾಲಕರ ಹತ್ಯೆಯು ನಮ್ಮ ಸಮುದಾಯಕ್ಕೆ ಭಯಾನಕ ಮತ್ತು ಅರ್ಥಹೀನ ದುರಂತವಾಗಿದೆ ಎಂದು ಹೇಳಿದರು. ಈ ರೀತಿಯ ಹುಚ್ಚುತನವನ್ನು ಸಹಿಸಲು ಸಾಧ್ಯವಿಲ್ಲ. ಇದೊಂದು ಪೂರ್ವಯೋಜಿತ ಕೊಲೆ ಎಂದು ಹೇಳಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com