ಚುನಾವಣಾ ವಂಚನೆ ಪ್ರಕರಣ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ, ಬಿಡುಗಡೆ 

ಚುನಾವಣಾ ವಂಚನೆ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರುವಾರ ಬಂಧಿಸಿ, ಜಾರ್ಜಿಯಾ ಜೈಲಿನಲ್ಲಿ ಇಡಲಾಗಿತ್ತು. ತದನಂತರ  200,000 ಡಾಲರ್ ಬಾಂಡ್‌ನಲ್ಲಿ ಜಾಮೀನು ಪಡೆದು ಸುಮಾರು ಜೈಲಿನಿಂದ ಹೊರಗೆ ಬಂದಿದ್ದಾರೆ.
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅಟ್ಲಾಂಟಾ: ಚುನಾವಣಾ ವಂಚನೆ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರುವಾರ ಬಂಧಿಸಿ, ಜಾರ್ಜಿಯಾ ಜೈಲಿನಲ್ಲಿ ಇಡಲಾಗಿತ್ತು. ತದನಂತರ  200,000 ಡಾಲರ್ ಬಾಂಡ್‌ನಲ್ಲಿ ಜಾಮೀನು ಪಡೆದು ಸುಮಾರು ಜೈಲಿನಿಂದ ಹೊರಗೆ ಬಂದಿದ್ದಾರೆ.

 2020 ರ ಚುನಾವಣಾ ಫಲಿತಾಂಶ ರದ್ದತಿಯಲ್ಲಿ ಇತರ 18 ಆರೋಪಿಗಳೊಂದಿಗೆ ಸಹಕರಿಸಿದ ಆರೋಪ ಹೊತ್ತಿರುವ ಟ್ರಂಪ್ ಅವರನ್ನು ಬಂಧಿಸಿ ಅಟ್ಲಾಂಟಾದ ಫುಲ್ಟನ್ ಕೌಂಟಿ ಜೈಲಿನಲ್ಲಿ ಇಡಲಾಗಿತ್ತು. 20 ನಿಮಿಷಗಳ ನಂತರ ಅವರನ್ನು ಜೈಲಿನಿಂದ ಹೊರಗೆ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.

ಈ ಪ್ರಕರಣದ ಇತರ ಆರೋಪಿಗಳಂತೆ 77 ವರ್ಷದ ಟ್ರಂಪ್ ಕೂಡಾ ಕಾನೂನಿಗೆ ಶರಣಾಗಿದ್ದಾರೆ. ಅಮೆರಿಕದಲ್ಲಿ ಈ ರೀತಿ ಜೈಲಿಗೆ ಹೋದ ಅಮೆರಿಕದ ಮಾಜಿ ಅಧ್ಯಕ್ಷರಲ್ಲಿ ಟ್ರಂಪ್ ಅವರೇ ಮೊದಲಿಗರಾಗಿದ್ದಾರೆ.  

ಜೈಲಿನಿಂದ ಬಿಡುಗಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇದು "ಅಮೆರಿಕಕ್ಕೆ ಬಹಳ ದುಃಖದ ದಿನವಾಗಿದೆ. ಇಲ್ಲಿ ನಡೆದಿರುವುದು ನ್ಯಾಯದ ಅಣಕವಾಗಿದೆ ನಾನು ಯಾವುದೇ ತಪ್ಪು ಮಾಡಿಲ್ಲ ಎಂದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com