ಕ್ಯಾಲಿಫೋರ್ನಿಯಾದಲ್ಲಿ ಗುಂಡಿಕ್ಕಿ ಮಹಿಳೆ ಹತ್ಯೆ: ಭಾರತೀಯ ಮೂಲದ ವ್ಯಕ್ತಿಯ ಬಂಧನ

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪಾರ್ಕಿಂಗ್ ಗ್ಯಾರೇಜ್‌ನಲ್ಲಿ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ 29 ವರ್ಷದ ಭಾರತೀಯ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪಾರ್ಕಿಂಗ್ ಗ್ಯಾರೇಜ್‌ನಲ್ಲಿ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ 29 ವರ್ಷದ ಭಾರತೀಯ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಕ್ಯಾಲಿಫೋರ್ನಿಯಾದ ರೋಸ್‌ವಿಲ್ಲೆಯಲ್ಲಿರುವ ಮಾಲ್‌ನಲ್ಲಿ ಪಾರ್ಕಿಂಗ್ ಗ್ಯಾರೇಜ್‌ನಲ್ಲಿ ಡೇಟಿಂಗ್ ಮಾಡುತ್ತಿದ್ದ 34 ವರ್ಷದ ಮಹಿಳೆಯನ್ನು ಸಿಮ್ರಂಜಿತ್ ಸಿಂಗ್  ಗುಂಡಿಕ್ಕಿ ಕೊಂದಿದ್ದಾರೆ ಎಂದು KCRA3.com ನಲ್ಲಿನ ಸುದ್ದಿ ವರದಿ ತಿಳಿಸಿದೆ.

 ಶನಿವಾರ ಬೆಳಿಗ್ಗೆ ಇಬ್ಬರೂ ಒಟ್ಟಿಗೆ ಮಾಲ್‌ಗೆ ಬಂದಿದ್ದು,  ಪಾರ್ಕಿಂಗ್ ಗ್ಯಾರೇಜ್‌ನ ಮೂರನೇ ಮಹಡಿಯಲ್ಲಿ ಸಿಂಗ್ ಮಹಿಳೆಗೆ ಗುಂಡು ಹಾರಿಸಿ ಹತ್ಯೆ ಮಾಡಿ, ಗ್ಯಾರೇಜ್‌ನಲ್ಲಿಯೇ ಗನ್ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಬಳಿಕ ಮಾಲ್‌ನ ಎದುರಿನ ಅಂಗಡಿಯೊಂದರ ಬಳಿ ಪೊಲೀಸರು ಸಿಂಗ್‌ನನ್ನು ಬಂಧಿಸಿದ್ದಾರೆ ಎಂದು ರೋಸ್‌ವಿಲ್ಲೆ ಪೊಲೀಸ್ ಇಲಾಖೆಯ ಲೆಫ್ಟಿನೆಂಟ್ ಕ್ರಿಸ್ ಸಿಯಾಂಪಾ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. 

ಗುಂಡು ಹಾರಿಸಿದ ಕೂಡಲೇ ಸಿಂಗ್ ಶಾಪಿಂಗ್‌ಗೆ ತೆರಳಿದ್ದು, ಹಣದಿಂದ ಶರ್ಟ್ ಖರೀದಿಸಿದ್ದು,  ಹಳೆಯ ಶರ್ಟ್ ಅನ್ನು ಶಾಪಿಂಗ್ ಬ್ಯಾಗ್‌ನಲ್ಲಿ ಹಾಕಿದ್ದು, ಹೊಸ ಬಟ್ಟೆಹಾಕಿಕೊಂಡು ಅಂಗಡಿಯಿಂದ ಹೊರಬರುತ್ತಿದ್ದಾಗ ಪೊಲೀಸರು ಬಂಧಿಸಿರುವುದಾಗಿ ವರದಿ ಹೇಳಿದೆ. ಸಿಂಗ್ ನನ್ನು ಪ್ಲೇಸರ್ ಕೌಂಟಿ ಜೈಲಿನಲ್ಲಿ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com