ಜಾರ್ಜಿಯಾದಲ್ಲಿ ಬಂಧನದ ಬಳಿಕ ಟ್ರಂಪ್ ಚುನಾವಣಾ ಪ್ರಚಾರಕ್ಕೆ 7.1 ಮಿಲಿಯನ್ ಡಾಲರ್ ಸಂಗ್ರಹ

ಚುನಾವಣಾ ವಂಚನೆ ಪ್ರಕರಣದಲ್ಲಿ ಟ್ರಂಪ್ ಬಂಧನಕ್ಕೊಳಗಾಗಿ ಬಿಡುಗಡೆಯಾದ ನಂತರ ಅವರ ಮುಂದಿನ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆ ಪ್ರಚಾರಕ್ಕೆ 7.1 ಮಿಲಿಯನ್ ಡಾಲರ್ ಹಣ ಸಂಗ್ರಹವಾಗಿದೆ. 
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Updated on

ನವದೆಹಲಿ: ಚುನಾವಣಾ ವಂಚನೆ ಪ್ರಕರಣದಲ್ಲಿ ಟ್ರಂಪ್ ಬಂಧನಕ್ಕೊಳಗಾಗಿ ಬಿಡುಗಡೆಯಾದ ನಂತರ ಅವರ ಮುಂದಿನ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆ ಪ್ರಚಾರಕ್ಕೆ 7.1 ಮಿಲಿಯನ್ ಡಾಲರ್ ಹಣ ಸಂಗ್ರಹವಾಗಿದೆ. 

ಕಳೆದ 3 ವಾರಗಳಿಂದ ಟ್ರಂಪ್ ಚುನಾವಣಾ ಪ್ರಚಾರಕ್ಕೆ 20 ಮಿಲಿಯನ್ ಡಾಲರ್ ಸಂಗ್ರಹವಾಗಿದೆ. 

ಜಾರ್ಜಿಯಾದಲ್ಲಿ ಟ್ರಂಪ್ ಬಂಧನಕ್ಕೊಳಗಾದ ನಂತರದ ಸಮಯವೊಂದರಲ್ಲೇ 4.18 ಮಿಲಿಯನ್ ಡಾಲರ್ ಹಣ ಸಂಗ್ರಹವಾಗಿದೆ. ಇಡೀ ಚುನಾವಣಾ ಪ್ರಚಾರದ ಚಟುವಟಿಕೆಗಳಲ್ಲಿ ಒಂದೇ ದಿನದಲ್ಲಿ ಬಂದಿರುವ ಗರಿಷ್ಠ ಪ್ರಮಾಣದ ಹಣ ಇದಾಗಿದೆ.

ನಿಧಿಸಂಗ್ರಹದ ಅಂಕಿ-ಅಂಶಗಳನ್ನು ಮೊದಲು ಪೊಲಿಟಿಕೊ ವರದಿ ಮಾಡಿದೆ.

ಟ್ರಂಪ್ ಬಂಧನದ ನಂತರ ಅವರ 2024 ರ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆ ವಿಷಯ ಮಾರಾಟದ ಸರಕಾಗಿ ಮಾರ್ಪಟ್ಟಿದ್ದು, ಮಾರ್ಚ್‌ನಿಂದ ನಾಲ್ಕು ಬಾರಿ ದೋಷಾರೋಪಣೆಗೆ ಗುರಿಯಾಗಿರುವ ಟ್ರಂಪ್, ಮತ್ತಷ್ಟು ಪ್ರಬಲರಾಗುವತ್ತ ಗಮನಹರಿಸಿದ್ದಾರೆ.

ಟ್ರಂಪ್ ಬಂಧನಕ್ಕೊಳಗಾಗಿ ಬಿಡುಗಡೆಯಾದ 90 ನಿಮಿಷಗಳ ಕಾಲ ವ್ಯಾಪಕವಾಗಿ ಟಿ-ಶರ್ಟ್, ಮಗ್, ಕೂಜಿ (ಟಿನ್ ಮಾದರಿಯ ವಸ್ತು)  ಬಂಪರ್ ಸ್ಟಿಕರ್ ಗಳಲ್ಲಿ ಟ್ರಂಪ್ ಫೋಟೋಗಳು ರಾರಾಜಿಸುತ್ತಿದ್ದವು, ಇದರಲ್ಲಿ ಎಂದಿಗೂ ಶರಣಾಗಬೇಡ ("NEVER SURRENDER!") ಎಂಬ ಸಂದೇಶವನ್ನು ಮುದ್ರಿಸಲಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com